/newsfirstlive-kannada/media/post_attachments/wp-content/uploads/2025/05/MODI_JD_VANCE.jpg)
ಪಾಕಿಸ್ತಾನ ಯಾವುದೇ ಆಕ್ರಮಣ ಮಾಡಿದರೆ ಭಾರತದ ಪ್ರತಿಕ್ರಿಯೆ ಹೆಚ್ಚು ವಿನಾಶಕಾರಿ ಮತ್ತು ಬಲವಾಗಿರುತ್ತದೆ. ಇದನ್ನು ಎದುರಿಸಲೇಬೇಕಾಗುತ್ತದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ದೂರವಾಣಿ ಮೂಲಕ ಕದನ ವಿರಾಮದ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಕಾಶ್ಮೀರದ ವಿಷಯದಲ್ಲಿ 3ನೇಯವರ ಮಧ್ಯಸ್ಥಿಕೆ ಬೇಕಾಗಿಲ್ಲ. ಪಾಕಿಸ್ತಾನ ತನ್ನಲ್ಲಿರುವ ಭಯೋತ್ಪಾದಕರನ್ನು ನಮಗೆ ಹಸ್ತಾಂತರಿಸಬೇಕು. ಈ ಷರತ್ತಿಗೆ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧರಿದ್ದೇವೆ. ಕಾಶ್ಮೀರದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ ಎಂದು ಕಡ್ಡಿ ಮುರಿದಂತೆ ಮೋದಿ ಮಾತನಾಡಿದ್ದಾರೆ.
ಇದನ್ನೂ ಓದಿ:ಆಪರೇಷನ್ ಸಿಂಧೂರ; ಭಾರತದ ದಾಳಿಗೆ ಜೀವ ಬಿಟ್ಟ 100ಕ್ಕೂ ಹೆಚ್ಚು ಉಗ್ರರು, 35- 40 ಪಾಕ್ ಯೋಧರು
ಇದಕ್ಕೂ ಮೊದಲು ಭಾರತ- ಪಾಕಿಸ್ತಾನದ ನಡುವಿನ ಘರ್ಷಣೆ ಕುರಿತು ಮಾತನಾಡಿದ್ದ ಜೆಡಿ ವ್ಯಾನ್ಸ್ ಅವರು ಅದಕ್ಕೂ ನಮಗೂ ಸಂಬಂಧವಿಲ್ಲ. ಎರಡು ದೇಶಗಳನ್ನು ನಿಯಂತ್ರಣ ಮಾಡಲು ನಮಗೆ ಆಗಲ್ಲ. ಆ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಪರಮಾಣು ಯುದ್ಧವಾಗಿ ಮಾರ್ಪಡದೇ ಇರಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದರು.
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಮಾಡಿದ ಕೃತ್ಯವನ್ನು ಇಡೀ ವಿಶ್ವವೇ ವಿರೋಧ ವ್ಯಕ್ತಪಡಿಸಿದೆ. ಪಾಕಿಸ್ತಾನ ಗುಂಡು ಹಾರಿಸದಿದ್ದರೆ, ಭಾರತವೂ ಸಂಯಮದಿಂದ ವರ್ತಿಸುತ್ತದೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕಾದರೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಅಕ್ರಮ ಪ್ರದೇಶಗಳನ್ನು ಹಿಂದಿರುಗಿಸುವುದು ಮತ್ತು ಭಯೋತ್ಪಾದಕರ ಹಸ್ತಾಂತರದ ಬಗ್ಗೆ ಮಾತ್ರ ಚರ್ಚೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ