/newsfirstlive-kannada/media/post_attachments/wp-content/uploads/2025/05/RCB-11.jpg)
ಐಪಿಎಲ್ನಲ್ಲಿ ಇವತ್ತು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈಗಾಗಲೇ ಎರಡೂ ತಂಡಗಳು ಪ್ಲೇ-ಆಫ್ ಪ್ರವೇಶ ಮಾಡಿದ್ದು, ಆದರೂ ಮೊದಲ ಎರಡು ಸ್ಥಾನಗಳಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.
ಇಂದು ಪಂಜಾಬ್ ಕಿಂಗ್ಸ್ ಗೆದ್ರೆ ಮೊದಲನೇ ಸ್ಥಾನವನ್ನು ಅಲಂಕರಿಸಲಿದೆ. ಹಾಗೆಯೇ ಮುಂಬೈ ಇಂಡಿಯನ್ಸ್ ಒಳ್ಳೆಯ ರನ್ರೇಟ್ನಿಂದ ಗೆದ್ದರೆ ಅವರೂ ಎರಡನೇ ಸ್ಥಾನಕ್ಕೆ ಜಿಗಿಯವ ಅವಕಾಶ ಕೂಡ ಇದೆ. ಹೀಗಾಗಿ ಇಂದಿನ ಗೆಲುವು ಎರಡೂ ತಂಗಳಿಗೂ ತುಂಬಾನೇ ಮುಖ್ಯವಾಗಿದೆ.
ಪಂಜಾಬ್ ಗೆದ್ದರೆ ಆರ್ಸಿಬಿಗೆ ಲಾಭಾನಾ..?
ಮೊದಲ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ನಾಲ್ಕು ತಂಡಗಳಲ್ಲಿ ಆರ್ಸಿಬಿ ಕೂಡ ಒಂದಾಗಿದೆ. ಪ್ರಸ್ತುತ ಗುಜರಾತ್ 18 ಅಂಕದೊಂದಿಗೆ ಮೊದಲ ಸ್ಥಾನ, ಪಂಜಾಬ್ ಎರಡನೇ ಹಾಗೂ ಆರ್ಸಿಬಿ ಮೂರನೇ ಸ್ಥಾನದಲ್ಲಿವೆ. ಲೀಗ್ ಹಂತದಲ್ಲಿ ಗುಜರಾತ್ ಕೋಟಾದ ಎಲ್ಲಾ ಪಂದ್ಯಗಳು ಮುಗಿದಿವೆ. ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಇಂದು ತಮ್ಮ ಕೋಟಾದ ಕೊನೆಯ ಪಂದ್ಯವನ್ನು ಆಡ್ತಿವೆ. ಆರ್ಸಿಬಿಗೆ ಇನ್ನೂ ಒಂದು ಪಂದ್ಯ ಬಾಕಿದೆ.
ಇಂದಿನ ಪಂದ್ಯದ ಸೋಲು ಗೆಲುವಿನ ಮೇಲೆ ಆರ್ಸಿಬಿ ಪ್ಲೇ-ಆಫ್ ಸ್ಲಾಟ್ ನಿರ್ಧಾರ ಆಗಲ್ಲ. ಪಂಜಾಬ್ ಗೆದ್ದರೆ, ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಮೊದಲ ಸ್ಥಾನಕ್ಕೇರಲಿದೆ. ಸೋತರೆ ಎರಡನೇ ಸ್ಥಾನದಲ್ಲಿಯೇ ಉಳಿದುಕೊಳ್ಳಲಿದೆ. ಪಂಜಾಬ್ ಸೋಲಲಿ, ಗೆಲ್ಲಲಿ ಆರ್ಸಿಬಿಗೆ ಯಾವುದೇ ಪರಿಣಾಮ ಬೀರಲ್ಲ. ನಾಳೆ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಮಾತ್ರ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸಲಿದೆ.
ಇದನ್ನೂ ಓದಿ: ಆರ್ಸಿಬಿ ಪಂದ್ಯಕ್ಕೂ ಮೊದಲು ಹನುಮನ ಮೊರೆ ಹೋದ ಕೊಹ್ಲಿ.. ವಿರುಷ್ಕಾ ದಂಪತಿ ಹೋಗಿದ್ದೆಲ್ಲಿಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ