EXCLUSIVE: ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಸೇಫ್ ಆಗ್ತಾರಾ? ಕಾಂಪ್ರಮೈಸ್ ಸಾಧ್ಯನಾ?

author-image
admin
Updated On
EXCLUSIVE: ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಸೇಫ್ ಆಗ್ತಾರಾ? ಕಾಂಪ್ರಮೈಸ್ ಸಾಧ್ಯನಾ?
Advertisment
  • ದರ್ಶನ್‌​ಗೆ ಕ್ಷಮೆ ನೀಡೋಕೆ ಮೃತನ ಕುಟುಂಬ ಮೊದಲಿಗೆ ಒಪ್ಪಬೇಕು
  • ಆಮೇಲೆ ಸಂತ್ರಸ್ತ ಕುಟುಂಬಕ್ಕೆ ಆರೋಪಿ ಪರಿಹಾರವನ್ನು ನೀಡಬೇಕು
  • ಸೆಕ್ಷನ್ 320 ಅಡಿ ಕೆಲ ಕೇಸ್​ನಲ್ಲಿ ಈ ರೀತಿಯ ಕಾಂಪ್ರಮೈಸ್​ಗೆ ಅವಕಾಶ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿ ನಂ.2ಗೆ ಮನೆಯೂಟದ ಜೊತೆಗೆ ಬಿಡುಗಡೆ ಯಾವಾಗ ಅನ್ನೋದೇ ದೊಡ್ಡ ಚಿಂತೆಯಾಗಿದೆ. ಕಳೆದ ಒಂದು ತಿಂಗಳಿಂದ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಯಾವಾಗ ಹೊರಗಡೆ ಬರ್ತಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ಸಂಧಾನಕಾರರಾಗಿ ಹೋಗಿದ್ರಾ ವಿನೋದ್ ರಾಜ್? ದರ್ಶನ್ ಏನಾದ್ರು ಹೇಳಿದ್ರಾ? 

ದರ್ಶನ್ ಸೇಫ್ ಆಗ್ತಾರಾ?
ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರಿಗೆ ಬೇಲ್ ಸಿಗೋದು ಯಾವಾಗ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದರ ಮಧ್ಯೆ ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಸೇಫ್ ಆಗ್ತಾರಾ? ಕೊಲೆಯಾದ ಕುಟುಂಬದ ಕೃಪೆಯಿಂದ ಶಿಕ್ಷೆಯಿಂದ ಪಾರಾಗಲು ಸಾಧ್ಯನಾ ಅನ್ನೋ ವಿಚಾರ ಮುನ್ನೆಲೆಗೆ ಬಂದಿದೆ. ಈ ಕೇಸ್​ನಲ್ಲಿ ದರ್ಶನ್​ ಪಾರಾಗಲು ಬೇರೆ ದಾರಿಗಳು ಇದ್ಯಾ? ಕಾನೂನು ಏನು ಹೇಳುತ್ತೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

publive-image

ದರ್ಶನ್​ಗೆ ಇದ್ಯಾ ಅವಕಾಶ?
ಕೊಲೆಯ ಹಿಂದೆ ಯಾವುದೇ ರೀತಿಯ ದುರುದ್ದೇಶವಿರಬಾರದು. ಆಕಸ್ಮಿಕವಾಗಿ ರೇಣುಕಾಸ್ವಾಮಿಯ ಕೊಲೆ ಘಟಿಸಿರಬೇಕು ಆಗ ಮಾತ್ರ ನ್ಯಾಯಾಲಯ ಅನುಮತಿ ನೀಡಬಹುದಾಗಿದೆ. ಆರೋಪಿ ದರ್ಶನ್ ಅವರಿ​ಗೆ ಕ್ಷಮೆ ನೀಡೋಕೆ ಮೃತನ ಕುಟುಂಬ ಮೊದಲಿಗೆ ಒಪ್ಪಬೇಕು. ಆಮೇಲೆ ಸಂತ್ರಸ್ತ ಕುಟುಂಬಕ್ಕೆ ಆರೋಪಿ ಪರಿಹಾರವನ್ನು ನೀಡಬೇಕು.

ನಟ ದರ್ಶನ್ ಪ್ರಕರಣದಲ್ಲಿ ಇದೆಲ್ಲವೂ ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಯಾಕಂದ್ರೆ ದರ್ಶನ್ ಕೇಸ್​ನಲ್ಲಿ ಸೆಕ್ಷನ್ 364, 302, 201, 120b ಎಲ್ಲವೂ ಇದೆ. ಹೀಗಿರುವಾಗ ನ್ಯಾಯಾಲಯದ ವಿಚಾರಣೆಯ ಮೂಲಕವೇ ಇತ್ಯರ್ಥವಾಗಬೇಕು.

publive-image

ಕಾಂಪ್ರಮೈಸ್ ಸಾಧ್ಯನಾ?
CRPC ಸೆಕ್ಷನ್ 320 ಅಡಿ ಕೆಲ ಕೇಸ್​ನಲ್ಲಿ ಈ ರೀತಿಯ ಕಾಂಪ್ರಮೈಸ್​ಗೆ ಅವಕಾಶಗಳಿದೆ. 2008ರಲ್ಲಿ ಉತ್ತರ ಪ್ರದೇಶದಲ್ಲಿ ರಾಮಕುಮಾರ್ ಕೇಸ್, 2011ರಲ್ಲಿ ಗುಜರಾತ್​ನ ಚಂದ್ರಕಾಂತ್ ಭಸಾವರ್ ಕೇಸ್, 2013ರಲ್ಲಿ ಕರ್ನಾಟಕದಲ್ಲಿ ಶಶಿಧರ್ ಕೇಸ್​, 2014ರಲ್ಲಿ ಮಹಾರಾಷ್ಟ್ರದಲ್ಲಿ ಮಹಮ್ಮದ್ ಹತ್ಯೆ ಕೇಸ್​ನಲ್ಲಿ ಇದೇ ರೀತಿಯ ಕಾಂಪ್ರಮೈಸ್ ಆಗಿದೆ.

ಇದನ್ನೂ ಓದಿ: ಮನೆ ಊಟಕ್ಕೆ ಹಂಬಲಿಸಿದ್ದ ದಾಸನಿಗೆ ಆಘಾತ; ದರ್ಶನ್‌ ಅರ್ಜಿ ವಜಾ ಆಗಿದ್ದಕ್ಕೆ 3 ಕಾರಣಗಳಿವೆ; ಏನದು?

ದರ್ಶನ್​ಗೆ ‘ಸಾಕ್ಷ್ಯ’ ಸಂಕಷ್ಟ! 
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್​ಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಸಾಕ್ಷ್ಯಗಳ ಜೊತೆಗೆ ಸಾಕ್ಷಿಗಳು, ಕೇಸ್ ಇನ್ನಷ್ಟು ಪ್ರಬಲ ಆಗುವಂತೆ ಮಾಡಿದೆ. ಫಿಸಿಕಲ್​, ಡಿಜಿಟಲ್​ ಸಾಕ್ಷ್ಯ, ಸಿಡಿಆರ್​, ಟವರ್​ಡಂಪ್ ಮಾಹಿತಿಗಳು​ ಮ್ಯಾಚ್​ ಆಗಿದೆ. CRPC 164 ಅಡಿ, ಪ್ರಮುಖ 12 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಚಾರ್ಜ್​ಶೀಟ್​ನಲ್ಲಿ ಸಣ್ಣದೊಂದು ಲೋಪವಾಗದಂತೆ ಪೊಲೀಸರು ಎಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ. ಇಷ್ಟೆಲ್ಲಾ ಕಠಿಣ ಸವಾಲುಗಳಿರುವಾಗ ನಟ ದರ್ಶನ್ ಪ್ರಕರಣದಲ್ಲಿ ಕಾಂಪ್ರಮೈಸ್‌ ಸಾಧ್ಯವೇ ಇಲ್ಲ. ನ್ಯಾಯಾಲಯದ ವಿಚಾರಣೆಯ ಮೂಲಕವೇ ಎಲ್ಲವೂ ಇತ್ಯರ್ಥವಾಗಬೇಕು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment