/newsfirstlive-kannada/media/post_attachments/wp-content/uploads/2025/05/VIRAT-KOHLI-14.jpg)
ಐಪಿಎಲ್ ಸೀಸನ್ 18ರ ಕೊನೆಯ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಟಾಪ್ 2 ಸ್ಥಾನದ ಮೇಲೆ ಕಣ್ಣಿಟ್ಟಿರೋ ಆರ್ಸಿಬಿ ಲಕ್ನೋ ಎದುರು ಗೆಲುವಿಗೆ ಪಣತೊಟ್ಟಿದೆ. ಒನ್ಸ್ ಅಗೇನ್ ಕಿಂಗ್ ವಿರಾಟ್ ಕೊಹ್ಲಿ ಮೇಲೆ ಆರ್ಸಿಬಿ ಡಿಪೆಂಡ್ ಆಗಿದೆ. ಲಕ್ನೋ ಎದುರು ವಿರಾಟ್ ವೀರಾವೇಷದ ಆಟವಾಡಬೇಕಂದ್ರೆ ಸ್ವಲ್ಪ ಲಕ್ ಬೇಕಿದೆ.
ಐಪಿಎಲ್ ಸೀಸನ್ 18ರ ಕೊನೆಯ ಲೀಗ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್ ಇಂದು ಎಕಾನಾ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಕೊನೆಯ ಪಂದ್ಯ ಗೆದ್ದು ಟಾಪ್ 2ಕ್ಕೇರೋ ಕನಸಿನಲ್ಲಿ ಆರ್ಸಿಬಿ ಇದ್ರೆ, ತವರಿನಂಗಳದಲ್ಲಿ ಗೆದ್ದು ಸೀಸನ್ಗೆ ಗುಡ್ ಬೈ ಹೇಳೋ ಲೆಕ್ಕಾಚಾರ ಲಕ್ನೋ ಸೂಪರ್ ಜೈಂಟ್ಸ್ದ್ದಾಗಿದೆ. ಹೀಗಾಗಿ ಇಂದಿನ ಕ್ಲೈಮ್ಯಾಕ್ಸ್ ಕದನ ಕ್ರಿಕೆಟ್ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಮನೆ ಬಳಿ ಆಟವಾಡುತ್ತಿದ್ದಾಗಲೇ ಪ್ರಾಣಬಿಟ್ಟ ಬಾಲಕ; ಆಗಿದ್ದೇನು..?
ಕೊಹ್ಲಿಯೇ RCB ಬ್ಯಾಟಿಂಗ್ ಬಲ
ಈ ಸೀಸನ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಯಶಸ್ಸಿನ ಅಲೆಯಲ್ಲಿದೆ. ಲೀಗ್ಸ್ಟೇಜ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಪ್ಲೇ ಆಫ್ಗೆ ರಾಯಲ್ ಎಂಟ್ರಿ ನೀಡಿದೆ. ಈ ಸಕ್ಸಸ್ಫುಲ್ ಕ್ಯಾಂಪೇನ್ನಲ್ಲಿ ಆರ್ಸಿಬಿ ಬ್ಯಾಟಿಂಗ್ ಯುನಿಟ್ನ ಬಲವೇ ಕೊಹ್ಲಿ ಅನಿಸಿಬಿಟ್ಟಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಆಟ ಆರ್ಸಿಬಿ ಸಕ್ಸಸ್ನಲ್ಲಿ ಕ್ರೂಶಿಯಲ್ ರೋಲ್ ಪ್ಲೇ ಮಾಡಿದೆ.
ಕನ್ಸಿಸ್ಟೆನ್ಸಿಗೆ ‘ಕಿಂಗ್’
ಈ ಸೀಸನ್ನಲ್ಲಿ ಕೊಹ್ಲಿಯ ಬ್ಯಾಟ್ ಸಖತ್ ಸೌಂಡ್ ಮಾಡಿದೆ. ಕ್ಲಾಸ್ ಆಟದಿಂದಲೇ ಮಿಂಚಿರೋ ವಿರಾಟ್ ಆಡಿರೋ 12 ಇನ್ನಿಂಗ್ಸ್ಗಳಿಂದ 548 ರನ್ಗಳಿಸಿದ್ದಾರೆ. ಬರೋಬ್ಬರಿ 60.88ರ ಸರಾಸರಿ ಹೊಂದಿರೋ ವಿರಾಟ್, 7 ಬಾರಿ ಹಾಫ್ ಸೆಂಚುರಿ ಗಡಿ ದಾಟಿದ್ದಾರೆ. ಕ್ಲಾಸ್ ಆಟದಿಂದಲೇ ಮಾಸ್ ಮನರಂಜನೆ ನೀಡಿರೋ ವಿರಾಟ್ ಕೊಹ್ಲಿ ಕನ್ಸಿಸ್ಟೆಂಟ್ ಕಿಂಗ್ ಅನ್ನೋದನ್ನ ನಿರೂಪಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಕಾಡ್ತಿದೆ ಆತಂಕ.. ಇವತ್ತು ಸ್ಫೋಟಕ ಬ್ಯಾಟರ್ ಆಡೋದು ಡೌಟ್..!
RCB ಗೆಲುವು ಪಕ್ಕಾ
ಈ ಸೀಸನ್ನಲ್ಲಿ ಕೊಹ್ಲಿ ಸಿಡಿದೆದ್ರೆ ಸಾಕು, ಆರ್ಸಿಬಿ ಗೆಲುವು ಪಕ್ಕಾ ಎಂಬಂತಾಗಿದೆ. ಮೊನ್ನೆ ನಡೆದ ಹೈದ್ರಾಬಾದ್ ವಿರುದ್ಧದ ಒಂದು ಪಂದ್ಯವನ್ನ ಹೊರತುಪಡಿಸಿದ್ರೆ, ಕೊಹ್ಲಿ ಯಾವೆಲ್ಲಾ ಪಂದ್ಯಗಳಲ್ಲಿ 30ಕ್ಕಿಂತ ಹೆಚ್ಚು ರನ್ಗಳಿಸಿದ್ದಾರೋ ಆ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿಯ ಆಟವೇ ಆರ್ಸಿಬಿ ಪಾಲಿಗೆ ಮಹತ್ವದ್ದಾಗಿದೆ. ಲಕ್ನೋ ವಿರುದ್ಧ ಕೊಹ್ಲಿ ಸೂಪರ್ ಆಟವಾಡಿದ್ರೆ ಸಾಕು ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಆದ್ರೆ, ಇತಿಹಾಸ ಬೇರೆಯದ್ದೇ ಕಥೆ ಹೇಳ್ತಿದೆ.
ಲಕ್ನೋ ಎದುರು ನಡೆದಿಲ್ಲ ಕೊಹ್ಲಿ ಆಟ
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದ ಮೋಸ್ಟ್ ಸಕ್ಸಸ್ಫುಲ್ ಬ್ಯಾಟರ್. ಈ ಕಾರಣಕ್ಕೆ ಐಪಿಎಲ್ ಟೂರ್ನಿಯ ಸುಲ್ತಾನನ ಪಟ್ಟ ಒಲಿದಿದೆ. ಎಲ್ಲಾ ತಂಡಗಳ ಎದುರು ಅಬ್ಬರದ ಆಟದಿಂದ ಮಿಂಚಿರೋ ಈ ಸಾಮ್ರಾಟ್ ಕೊಹ್ಲಿಯ ವೀರಾವೇಷ ಲಕ್ನೋ ಎದುರು ಮಾತ್ರ ನಡಿದಿಲ್ಲ. ಐಪಿಎಲ್ನ 9 ಎದುರಾಳಿ ತಂಡಗಳ ಪೈಕಿ ಕೊಹ್ಲಿ ಕಳಪೆ ರೆಕಾರ್ಡ್ ಹೊಂದಿರೋದು ಈ ತಂಡದ ವಿರುದ್ಧ ಮಾತ್ರ.
ಲಕ್ನೋ ವಿರುದ್ಧ ಕೊಹ್ಲಿ ಬ್ಯಾಟಿಂಗ್
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಕೇವಲ 27.80ರ ಸರಾಸರಿಯಲ್ಲಿ 139 ರನ್ಗಳಿಸಿದ್ದಾರೆ. ಕೇವಲ 120.86ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಜಮಾನದಲ್ಲಿದ್ದ ಡೆಕ್ಕನ್ ಚಾರ್ಜರ್ಸ್, ಹೀಗೆ ಬಂದು ಹಾಗೇ ಹೋದ ಪುಣೆ ಸುಪರ್ ಜೈಂಟ್ಸ್, ಗುಜರಾತ್ ಲಯನ್ಸ್ ತಂಡಗಳ ವಿರುದ್ಧ ಕೊಹ್ಲಿ ಇದಕ್ಕಿಂತ ಒಳ್ಳೆ ರೆಕಾರ್ಡ್ ಹೊಂದಿದ್ದಾರೆ.
ಇದನ್ನೂ ಓದಿ: ಟೆನ್ಶನ್.. ಟೆನ್ಶನ್.. ಟೆನ್ಶನ್.. ಆರ್ಸಿಬಿ ಕ್ಯಾಂಪ್ನ ಚಿಂತೆಗೆ ದೂಡಿದ ಒಬ್ಬ ಆಟಗಾರ..!
ಚೇಸಿಂಗ್ ಬಂದ್ರೆ ಕೊಹ್ಲಿ ಆಟವೇ ನಿರ್ಣಾಯಕ
200+ ಟಾರ್ಗೆಟ್ ಚೇಸ್ ಮಾಡುವಲ್ಲಿ ಆರ್ಸಿಬಿ ಪದೇ ಪದೆ ಎಡುವುತ್ತಿದೆ. IPLನಲ್ಲಿ 20 ಪಂದ್ಯಗಳಲ್ಲಿ ಆರ್ಸಿಬಿ 200+ ಟಾರ್ಗೆಟ್ ಬೆನ್ನತ್ತಿದೆ. ಈ ಪೈಕಿ 2 ಬಾರಿ ಮಾತ್ರ ಸಕ್ಸಸ್ ಕಂಡಿದೆ. ಈ ಹಿಂದಿನ ಹೈದ್ರಾಬಾದ್ ವಿರುದ್ಧದ ಪಂದ್ಯವೂ ಸೇರಿ 18 ಬಾರಿ ಫೇಲ್ ಆಗಿದೆ. ಚೇಸಿಂಗ್ ಅಂತಾ ಬಂದ್ರೆ ಆರ್ಸಿಬಿ ನೆಚ್ಚಿಕೊಂಡಿರೋದೇ ಚೇಸಿಂಗ್ ಮಾಸ್ಟರ್ ಕೊಹ್ಲಿಯನ್ನ. ಕೊಹ್ಲಿ ಲಕ್ನೋ ಎದುರು ಕಳಪೆ ಟ್ರ್ಯಾಕ್ ಹೊಂದಿದ್ದಾರೆ. ಇದು ಸದ್ಯ ಮ್ಯಾನೇಜ್ಮೆಂಟ್ ಟೆನ್ಶನ್ ಹೆಚ್ಚಿಸಿದೆ.
ಕೊಹ್ಲಿ ಕೈ ಹಿಡಿಯುತ್ತಾ ಲಕ್..?
ಈ ಹಿಂದಿನ ಮುಖಾಮುಖಿಗಳಲ್ಲಿ ಕೊಹ್ಲಿಗೆ ಲಕ್ನೋ ಎದುರು ಲಕ್ ಸಾಥ್ ಕೊಟ್ಟಿಲ್ಲ. ಈ ಸೀಸನ್ನಲ್ಲಿ ಕೊಹ್ಲಿ ಸಾಲಿಡ್ ಟಚ್ನಲ್ಲಿದ್ದಾರೆ. ಇಂದು ಪಂದ್ಯ ನಡೆಯೋ ಇದೇ ಎಕಾನಾ ಮೈದಾನದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಬೊಂಬಾಟ್ ಇನ್ನಿಂಗ್ಸ್ ಕಟ್ಟಿದ್ದಾರೆ. ಕಾನ್ಫಿಡೆಂಟ್ ಬ್ಯಾಟಿಂಗ್ ನಡೆಸ್ತಿರೋ ವಿರಾಟ್ ಕೊಹ್ಲಿಯಿಂದ ಇಂದೂ ಕೂಡ ಒಂದೊಳ್ಳೆ ಇನ್ನಿಂಗ್ಸ್ನ ನಿರೀಕ್ಷೆಯಿದೆ. ಎಕಾನಾ ಮೈದಾನದಲ್ಲಿ ಇಂದು ಕೊಹ್ಲಿಗೆ ಅದೃಷ್ಟ ಸಾಥ್ ಕೊಡುತ್ತಾ? ಆರ್ಸಿಬಿ ಟಾಪ್ 2 ಸ್ಥಾನಕ್ಕೇರುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಟೆನ್ಶನ್.. ಟೆನ್ಶನ್.. ಟೆನ್ಶನ್.. ಆರ್ಸಿಬಿ ಕ್ಯಾಂಪ್ನ ಚಿಂತೆಗೆ ದೂಡಿದ ಒಬ್ಬ ಆಟಗಾರ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ