Advertisment

ಚೀನಾ ಒಂದೇ ಅಲ್ಲ, ಯುದ್ಧ ನಡೆದ್ರೆ ಪಾಕ್​ಗೆ ಯಾರೆಲ್ಲ ಬೆಂಬಲ ಇದೆ? ಭಾರತಕ್ಕೆ ಎಷ್ಟು ಶತ್ರುಗಳಿದ್ದಾರೆ?

author-image
Ganesh
Updated On
ಆಪರೇಷನ್ ಸಿಂಧೂರ್​ಗೆ ಚೀನಾ ಪ್ರತಿಕ್ರಿಯೆ.. ಸ್ನೇಹಿತನ ಮೇಲೆ ನಡೆದ ದಾಳಿ ಬಗ್ಗೆ ಏನಂತು..?
Advertisment
  • ಪಾಕ್ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ
  • ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ
  • ಪಾಕ್ ಬೆಂಬಲಕ್ಕೆ ನಿಂತ ದೇಶಗಳು ಯಾವ್ಯಾವುದು?

‘ಆಪರೇಷನ್ ಸಿಂಧೂರ್​’ ಮೂಲಕ ಭಾರತವು ಪಾಕಿಸ್ತಾನದಲ್ಲಿ ಕುಳಿತಿದ್ದ ಭಯೋತ್ಪಾದಕರನ್ನು ನರಕಕ್ಕೆ ಕಳುಹಿಸಲು ಪ್ರಾರಂಭಿಸಿದೆ. ಮಂಗಳವಾರ ತಡರಾತ್ರಿ ವಾಯುದಾಳಿ ನಡೆಸುವ ಮೂಲಕ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ಬಗ್ಗೆ ಚರ್ಚೆಗಳು ಶುರುವಾಗಿವೆ.

Advertisment

ಭಾರತದ ಈ ಕ್ರಮವನ್ನು ಇಸ್ರೇಲ್ ಬೆಂಬಲಿಸಿದೆ. ಭಾರತಕ್ಕೆ ಆತ್ಮರಕ್ಷಣೆಯ ಹಕ್ಕಿದೆ. ಆಪರೇಷನ್ ಸಿಂಧೂರ್ ಅನ್ನು ಬೆಂಬಲಿಸೋದಾಗಿ ಇಸ್ರೇಲಿ ರಾಯಭಾರಿ ತಿಳಿಸಿದೆ. ದಾಳಿಯ ನಂತರ ಚೀನಾ ಪಾಕಿಸ್ತಾನವನ್ನು ಬೆಂಬಲಿಸಿದೆ. ಪ್ರಸ್ತುತ ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ಎರಡೂ ದೇಶಗಳ ನಡುವೆ ಯುದ್ಧ ನಡೆದರೆ ಚೀನಾ ಹೊರತುಪಡಿಸಿ ಬೇರೆ ಯಾವ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸುತ್ತವೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ಬೆಳಗಾವಿ ಸೊಸೆ, ಈಗ ಭಾರತದ ಹೆಮ್ಮೆ.. ಆಪರೇಷನ್ ಸಿಂಧೂರ ಜಗತ್ತಿಗೆ ಬಿಚ್ಚಿಟ್ಟ ಖುರೇಷಿ ನಮ್ಮವರು..

publive-image

ಚೀನಾ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಭಾರತದ ವಾಯುದಾಳಿಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಭಾರತದ ಮಿಲಿಟರಿ ಕ್ರಮ ದುರಾದೃಷ್ಟಕರ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತಾಜನಕವಾಗಿದೆ. ಎರಡೂ ದೇಶಗಳು ಸಂಯಮ ಕಾಯ್ದುಕೊಳ್ಳಬೇಕು. ಪರಿಸ್ಥಿತಿ ಜಟಿಲಗೊಳಿಸಬಾರದು ಅಂತಾ ಮನವಿ ಮಾಡಿಕೊಂಡಿದೆ.

Advertisment

ಟರ್ಕಿ ಕೂಡ ಪಾಕ್ ಬೆಂಬಲಕ್ಕೆ

ವೈಮಾನಿಕ ದಾಳಿಯ ನಂತರ ಪಾಕಿಸ್ತಾನವನ್ನು ಬೆಂಬಲಿಸಿದೆ. ಟರ್ಕಿಶ್ ರಾಯಭಾರಿ, ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆ ಆಗಿದೆ. ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳ ಆಧಾರದ ಮೇಲೆ ಪರಿಹರಿಸಬೇಕು ಎಂದು ಟರ್ಕಿ ಹೇಳಿದೆ.

ಅಜೆರ್ಬೈಜಾನ್ ಬೆಂಬಲ

ಆಪರೇಷನ್ ಸಿಂಧೂರ್ ನಂತರ, ಅಜೆರ್ಬೈಜಾನ್ (Azerbaijan ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಪಾಕ್ ಮೇಲಿನ ದಾಳಿಯನ್ನು ಖಂಡಿಸೋದಾಗಿ ಹೇಳಿದೆ. ಒಂದು ವೇಳೆ ಭಾರತ ಮತ್ತು ಪಾಕ್ ಮಧ್ಯೆ ಯುದ್ಧಗಳು ನಡೆದರೆ ಈ ಎಲ್ಲಾ ದೇಶಗಳು ಪಾಪಿ ಪಾಕಿಸ್ತಾನಕ್ಕೆ ಬೆಂಬಲ ನೀಡಲಿವೆ.

ಇದನ್ನೂ ಓದಿ: ಆಪರೇಷನ್​ ಸಿಂಧೂ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರಿಂದ ತುರ್ತು ಆದೇಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment