/newsfirstlive-kannada/media/post_attachments/wp-content/uploads/2025/05/INDIA-WAR-1.jpg)
ಪಹಲ್ಗಾಮ್ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ನಿರ್ಮಾಣ ಆಗಿದೆ. ಭಾರತದ ಪ್ರತೀಕಾರದ ಅಸ್ತ್ರಗಳಿಗೆ ಹೆದರಿರುವ ಪಾಕಿಸ್ತಾನ, ಯುದ್ಧ ನಿಲ್ಲಿಸುವಂತೆ ಬೇರೆ, ಬೇರೆ ದೇಶಗಳ ಮುಂದೆ ದಂಬಾಲು ಬೀಳುತ್ತಿದೆ. ಪ್ರಮುಖವಾಗಿ ಡ್ರ್ಯಾಗನ್ ಚೀನಾದ ಬೆಂಬಲವನ್ನು ಎದುರು ನೋಡುತ್ತಿದೆ. ಈ ವಿಚಾರದಲ್ಲಿ ಚೀನಾ ಯಾವುದೇ ಪ್ರತಿಕ್ರಿಯೆ ನೀಡಲ್ಲ.
ಆದರೆ ಯುದ್ಧದ ಹೊಸ್ತಿಲಲ್ಲಿ ಪಾಕ್ಗೆ ನೆರವು ನೀಡಲು ಚೀನಾ ಮುಂದಾಗುತ್ತಿದೆ. ಈಗಾಗಲೇ ಚೀನಾದಿಂದ ಅತ್ಯಾಧುನಿಕ VT-4 ಯುದ್ಧ ಟ್ಯಾಂಕರ್ ಹಲವು ದೇಶಗಳಿಗೆ ರಫ್ತುವಾಗಿದೆ. ನೈಜೀರಿಯಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಿಗೆ ರಫ್ತು ಮಾಡಲಾಗಿದೆ. ಭಾರತ ಮತ್ತು ಪಾಕ್ ನಡುವೆ ಯುದ್ಧವಾದರೆ ಭಾರತದ ಪರ ನಿಲ್ಲುವ ದೇಶಗಳು ಯಾವುವು ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ:ಸುಹಾಸ್ ಶೆಟ್ಟಿ ಕೇಸ್ನಲ್ಲಿ 8 ಶಂಕಿತರು ವಶಕ್ಕೆ.. ಇವತ್ತು ಪರಮೇಶ್ವರ್ ಮಂಗಳೂರು ಭೇಟಿ
1. ಅಮೆರಿಕಾ : ಅಮೆರಿಕಾ ಮತ್ತು ಭಾರತದ ಸಂಬಂಧ ಗಟ್ಟಿಯಾಗ್ತಿದ್ದು, ಈಗಾಗಲೇ ಅಮೇರಿಕಾದ ರಾಜತಾಂತ್ರಿಕ ಮಾತುಕತೆಯಲ್ಲಿ ಭಾರತದ ಪರನಿಲ್ಲೊ ಹೇಳಿಕೆ ಯುಎಸ್ ನೀಡಿದೆ.
2. ರಷ್ಯಾ: ರಷ್ಯಾ ಮತ್ತು ಭಾರತದ ಸಂಬಂಧ ಈ ಹಿಂದಿನಿಂದಲು ಗಟ್ಟಿಯಾಗಿದ್ದು, ರಷ್ಯಾ ಉಕ್ರೇನ್ ವಿರುದ್ಧ ಬಹುತೇಕ ವಿಶ್ವದ ಎಲ್ಲಾ ದೇಶಗಳು ಆರ್ಥಿಕ, ಮತ್ತು ವ್ಯಾಪಾರ ದಿಗ್ಬಂಧನ ಹಾಕಿದ್ರು ಭಾರತ ರಷ್ಯಾದ ಪರ ನಿಂತಿತ್ತು. ಜೊತೆಗೆ ರಷ್ಯಾದಿಂದ ಭಾರತಕ್ಕೆ ಯುದ್ಧೋಪಕರಣಗಳ ಖರೀದಿ ನಿರಂತರವಾಗಿದೆ.
3. ಇಟಲಿ ಮತ್ತು ಫ್ರಾನ್ಸ್: ಇಟಲಿ ಮತ್ತು ಫ್ರಾನ್ಸ್ ದೇಶಗಳ ಜೊತೆ ಯುದ್ಧ ಸಾಮಾಗ್ರಿಗಳ ಖರೀದಿ ಮತ್ತು ಒಪ್ಪಂದ ಇದೆ. ಜೊತೆಗೆ ರಾಜತಾಂತ್ರಿಕವಾಗಿ ಒಳ್ಳೆ ಸಂಬಂಧವಿದೆ.
4. ಇಸ್ರೇಲ್ : ಇಸ್ರೇಲ್ ಮತ್ತು ಭಾರತದ ಸಂಬಂಧ ಮೊದಲಿನಿಂದಲು ಗಟ್ಟಿಯಾಗಿದ್ದು, ಇಸ್ರೇಲ್ ಮತ್ತು ಭಾರತ ಹಲವು ತಂತ್ರಜ್ಞಾನ ಹಂಚಿಕೊಂಡಿದೆ ಮತ್ತು ಸದಾ ಭಾರತದ ಪರ ಇಸ್ರೇಲ್ ಇರುತ್ತದೆ.
5. ಸೌದಿ ಅರೇಬಿಯಾ : ಸೌದಿ ಅರೇಬಿಯಾ ಇತ್ತೀಚಿನ ವರ್ಷಗಳಲ್ಲಿ ಭಾರತದ ಪರ ನಿಂತಿದೆ. ಪಾಕಿಸ್ತಾನದ ಪ್ರತಿಯೊಂದು ನಿಲುವಿಗೂ ವಿರೋಧ ವ್ಯಕ್ತಪಡಿಸಿದೆ. ಭಾರತದ ಜೊತೆ ಹಲವು ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಯುಕೆ ಜೊತೆ ಭಾರತದ ಸಂಬಂಧ ಗಟ್ಟಿಯಾಗಿದ್ದು, ಪಾಕಿಸ್ತಾನದ ಪರ ಯುಕೆ ನಿಲುವು ಇಟ್ಟಿಕೊಂಡಿಲ್ಲ.
ಪಾಕಿಸ್ತಾನದ ಪರ ಬೆರಳೆಣಿಕೆ ದೇಶಗಳು
ಅದರಲ್ಲಿ ಪ್ರಮುಖವಾಗಿ ನಿಲ್ಲೊದು ಚೀನಾ. ಚೀನಾ ಭಾರತದ ವಿರೋಧಿ ಮತ್ತು ಪಾಕ್ ಪರ ಮೊದಲಿನಿಂದಲು ಇದೆ. ಭಾರತ ವ್ಯಾಪಾರದ ದೃಷ್ಟಿಯಿಂದ ಚೀನಾಗೆ ಸ್ಪರ್ಧೆ ನೀಡುವ ಕಾರಣ ಮತ್ತು ಗಡಿ ಗೊಂದಲ ಇರೋ ಕಾರಣ ಪಾಕ್ಗೆ ಸಾಥ್ ನಿಡೋ ಸಾಧ್ಯತೆ ಇದೆ. ಇನ್ನು ಅಜೆರ್ಬೈಜಾನ್ ಪಾಕ್ ಪರ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ