ಪೋಷಕರೇ ಎಚ್ಚರ.. ನಿಮ್ಮ ಮಕ್ಕಳ ಕಣ್ಣಿಗೆ Kajal ಹಚ್ಚುತ್ತಿದ್ದರೆ ಈಗಲೇ ನಿಲ್ಲಿಸಿ; ಯಾಕೆ ಗೊತ್ತಾ?

author-image
Veena Gangani
ಪೋಷಕರೇ ಎಚ್ಚರ.. ನಿಮ್ಮ ಮಕ್ಕಳ ಕಣ್ಣಿಗೆ Kajal ಹಚ್ಚುತ್ತಿದ್ದರೆ ಈಗಲೇ ನಿಲ್ಲಿಸಿ; ಯಾಕೆ ಗೊತ್ತಾ?
Advertisment
  • ಮುದ್ದು ಮಕ್ಕಳಿಗೆ ಕಾಡಿಗೆ ಹಚ್ಚುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
  • ದೊಡ್ಡವರಿಗಿಂತ ವಿಶೇಷವಾಗಿ ಚಿಕ್ಕ ಮಕ್ಕಳು ಈ ಸೋಂಕಿಗೆ ಒಳಗಾಗುತ್ತಾರೆ
  • ಮಕ್ಕಳ ಕಣ್ಣಿಗೆ ಯಾವ ರೀತಿಯ ಕಾಡಿಗೆ ಹಚ್ಚಿದರೆ ಉತ್ತಮ ಅಂತ ಗೊತ್ತಾ?

ಹೆಣ್ಣು ಮಕ್ಕಳು ಎಷ್ಟೇ ಚೆನ್ನಾಗಿ ರೆಡಿಯಾದ್ರು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಿಲ್ಲ ಅಂದ್ರೆ ಮುಖದ ಸೌಂದರ್ಯ ಮಾಸಿದಂತೆ ಆಗುತ್ತೆ. ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಕ್ಕಳಿಗೆ ಪೋಷಕರು ಕಾಡಿಗೆ ಹಚ್ಚುತ್ತಾರೆ. ಬಹುತೇಕರು ಮಕ್ಕಳ ಹಣೆಗೆ ಕಾಡಿಗೆ ಹಚ್ತಾರೆ. ಮತ್ತೆ ಕೆಲವರು ಕಣ್ಣಿಗೆ ಹಚ್ಚುತ್ತಾರೆ. ಇದೇ ಕಾಡಿಗೆ ಕಣ್ಣಿನ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ. ಕಣ್ಣಿಗೆ ಕಾಡಿಗೆ ಹಚ್ಚದೆ ಮನೆಯಿಂದ ಹೊರ ಬೀಳದ ಹೆಣ್ಣು ಮಕ್ಕಳು ಈಗಿನ ಕಾಲದಲ್ಲಿ ಇದ್ದಾರೆ.

ಇದನ್ನೂ ಓದಿ:ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?

publive-image

ಸಿಂಪಲ್ ಮೇಕಪ್ ಎನ್ನುವವರು ಕೂಡ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳೋದು ಪಕ್ಕಾ. ಅಷ್ಟೇ ಯಾಕೆ ಪೋಷಕರು ಚಿಕ್ಕ ಮಕ್ಕಳಿಗೆ ಕೂಡ ಕಾಡಿಗೆ ಹಚ್ಚುತ್ತಾರೆ. ಆದರೆ ಹೀಗೆ ಪುಟ್ಟ ಮಕ್ಕಳಿಗೆ ಕಾಡಿಗೆ ಹಚ್ಚುವ ಮುನ್ನ ಪೋಷಕರು ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ. ಸಾಮಾನ್ಯವಾಗಿ ಮುಖ ಚೆನ್ನಾಗಿ ಕಾಣಲು ಪೋಷಕರು ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವುದು ರೂಢಿ ಮಾಡಿಕೊಂಡಿರುತ್ತಾರೆ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆಯನ್ನು ತಯಾರು ಮಾಡುತ್ತಾರೆ.

publive-image

ಅದೇ ಕಾಡಿಗೆಯನ್ನು ಮಕ್ಕಳ ಕಣ್ಣಿಗೆ ಹಚ್ಚಿದರೇ ಹಾನಿಯುಂಟು ಮಾಡದೇ ಇರಬಹುದು. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಕಾಡಿಗೆ ಹಚ್ಚುವುದರಿಂದ ಮಕ್ಕಳ ಕಣ್ಣಿಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳ ಸೂಕ್ಷ್ಮವಾದ ಕಣ್ಣುಗಳಿಗೆ ಏನೆಲ್ಲಾ ಸೋಂಕುಗಳು ಅಟ್ಯಾಕ್​ ಮಾಡುತ್ತೆ ಅಂತ ಮೊದಲು ತಿಳಿದುಕೊಳ್ಳಿ.

publive-image

ಕಾಡಿಗೆ ಹಚ್ಚುವುದರಿಂದ ಅಡ್ಡ ಪರಿಣಾಮಗಳೇನು? 

  • ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಕಣ್ಣಿಗೆ ಹಚ್ಚುವುದರಿಂದ ಸೋಂಕು ತಗುಲಬಹುದು.
  • ಕಣ್ಣಿಗೆ ಕಿರಿಕಿರಿ ಅನ್ನಿಸಿದಾಗ ಮಕ್ಕಳು ಕಣ್ಣನ್ನು ಉಜ್ಜಿಕೊಳ್ಳುತ್ತಿರುತ್ತಾರೆ. ಆಗ ಕಪ್ಪು ಕಾಡಿಗೆ ಕಣ್ಣಿನ ಸುತ್ತ ಹರಡಬಹುದು. ಜತೆಗೆ ಸಣ್ಣ ಕಣಗಳು ಕಣ್ಣಿನೊಳಗೂ ಸೇರಿಸಿಕೊಳ್ಳುತ್ತವೆ.
  • ಹೀಗೆ ಕಣ್ಣಲ್ಲಿ ಕಾಡಿಗೆ ಕಣಗಳು ಹೋದರೆ ಕಣ್ಣುರಿ, ಕೆಂಪಾಗುವುದು, ನೋವು ಆಗುವುದು ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿರಬಹುದು.
  • ಹೀಗೆ ಕಣ್ಣಿಗೆ ಹಾಡಿಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾದ ಸೋಂಕು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕೆ ಟ್ರಾಕೋಮಾ ಎಂದು ಕರೆಯಲಾಗಿದೆ. ಈ ಟ್ರಾಕೋಮಾ ಸಾಂಕ್ರಾಮಿಕವಾಗಿದ್ದು, ಸೋಂಕಿತ ಜನರ ಕಣ್ಣುಗಳು, ಕಣ್ಣುರೆಪ್ಪೆಗಳು ಮತ್ತು ಮೂಗು ಅಥವಾ ಗಂಟಲಿನ ಸ್ರವಿಸುವಿಕೆಯ ಸಂಪರ್ಕದ ಮೂಲಕ ಹರಡುತ್ತದೆ.
  • ಒಂದು ಬಾರಿ ಟ್ರಾಕೋಮಾವು ಸೋಂಕು ಹರಡಿದರೆ ನಿಮ್ಮ ಕಣ್ಣುಗಳು ಮತ್ತು ರೆಪ್ಪೆಗಳಲ್ಲಿ ತುರಿಕೆ ಮತ್ತು ಕಿರಿಕಿರಿಯನ್ನು ಉಂಟು ಮಾಡಬಹುದು. ನಂತರ ಊದಿಕೊಂಡ ಕಣ್ಣು ರೆಪ್ಪೆಗಳು ಮತ್ತು ಕಣ್ಣುಗಳಿಂದ ಕೀವು ಬರಿದಾಗುವುದನ್ನು ನೀವು ಗಮನಿಸಬಹುದು. ಇದು ಟ್ರಾಕೋಮಾ ಕುರುಡುತನಕ್ಕೆ ಕಾರಣವಾಗಬಹುದು.
  • ದೊಡ್ಡವರಿಗಿಂತ ವಿಶೇಷವಾಗಿ ಚಿಕ್ಕ ಮಕ್ಕಳು ಈ ಸೋಂಕಿಗೆ ಒಳಗಾಗುತ್ತಾರೆ. ಆದರೆ ರೋಗವು ನಿಧಾನವಾಗಿ ಮುಂದುವರಿಯುತ್ತದೆ ಅಂತ ವೈದ್ಯರು ಹೇಳುತ್ತಾರೆ. ನಿಮ್ಮ ಮಗುವಿನ ಕಣ್ಣುಗಳಲ್ಲಿ ತುರಿಕೆ ಅಥವಾ ಕಿರಿಕಿರಿ ಉಂಟಾದರೆ ಮೊದಲು ವೈದ್ಯರಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ತಿಳಿಸಿ. ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡುವುದು ಗಂಭೀರ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment