newsfirstkannada.com

ಜ.2ರಂದು ಮಕ್ಕಳು ಶಾಲೆಗೆ ಬಾರದಿದ್ರೆ ಸಾವಿರ ದಂಡ ಆರೋಪ.. VHP ಮತ್ತು ಬಜರಂಗದಳ ಆಕ್ರೋಶ

Share :

Published January 21, 2024 at 6:56am

Update January 21, 2024 at 6:59am

    ನಾಳೆ ರಾಮಲಲ್ಲಾ ಪ್ರತಿಷ್ಠಾಪನೆಯ ವೈಭವ

    ಕುತೂಹಲತೆಯಿಂದ ಕಾದು ಕುಳಿದ ರಾಜ್ಯದ ಜನತೆ

    ರಾಜ್ಯದ ಕೆಲವು ಶಾಲೆಗಳ ಮಕ್ಕಳಿಗೆ ರಜೆ ಘೋಷಣೆ

ಚಿಕ್ಕಮಗಳೂರು: ರಾಮಲಲ್ಲಾನ ಪ್ರಾಣಪ್ರತಿಷ್ಠಾನೆಗೆ ಇಡೀ ಹಿಂದೂ ಸಮಾಜವೇ ಸಂಭ್ರಮದಲ್ಲಿದೆ. ಆದರೆ, ಕಾಫಿನಾಡಿನ ಚಿಕ್ಕಮಗಳೂರಿನ ಚರ್ಚ್​ ರಸ್ತೆಯಲ್ಲಿರುವ ಸಂತ ಜೋಸೆಫರ ಕಾನ್ವೆಂಟ್ ಶಾಲೆಗೆ ನಾಳೆ ಮಕ್ಕಳು ಬರಲಿಲ್ಲ ಅಂದ್ರೆ ಸಾವಿರ ದಂಡದ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರ ಹಿಂದೂಪರ ಸಂಘಟಗಳು ಮತ್ತು ವಿ.ಹೆಚ್.ಪಿ, ಬಜರಂಗದಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನೇ ಮುಂದಿಟ್ಟುಕೊಂಡು ಸಾವಿರ ದಂಡ ಅಂತ ಹೇಳಿದ್ದಾರೆಂದು ಕಿಡಿಕಾರಿದ್ದಾರೆ. ಇನ್ನು ಕಾನ್ವೆಂಟ್ ಮುಂದೇ ಆಕ್ರೋಶ ಹೊರಹಾಕ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ರು, ಎಎಸ್​ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾನ್ವೆಂಟ್ ಮುಖ್ಯೋಪಾಧ್ಯಯರು ಸೇರಿದಂತೆ ಅಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ರು.

ಕೊನೆಗೂ ಸಾವಿರ ರೂಪಾಯಿ ದಂಡವಿಲ್ಲ ಅಂತ ಗೊತ್ತಾಗ್ತಿದ್ದಂತೆ ಅಲ್ಲಿಂದ ವಿಹೆಚ್​ಪಿ ಹಾಗೂ ಬಜರಂಗದಳ ಮುಖಂಡ್ರು ವಾಪಸ್ಸಾದ್ರು. ನಂತರ ಡಿಡಿಪಿಐ ಪ್ರಕಾಶ್ ಕಾನ್ವೆಂಟ್ ಶಾಲೆಗೆ ಭೇಟಿ ನೀಡಿ ವಿವಾದದ ಬಗ್ಗೆ ಮಾಹಿತಿ ಪಡೆದ್ರು. ನಾಳೆ ಭೇಟಿ ನೀಡ್ತೇನೆ ಆ ರೀತಿ ಆರೋಪದ ದೂರು ಬಂದ್ರೆ ಕ್ರಮಕೈಗೊಳ್ತಿನಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜ.2ರಂದು ಮಕ್ಕಳು ಶಾಲೆಗೆ ಬಾರದಿದ್ರೆ ಸಾವಿರ ದಂಡ ಆರೋಪ.. VHP ಮತ್ತು ಬಜರಂಗದಳ ಆಕ್ರೋಶ

https://newsfirstlive.com/wp-content/uploads/2024/01/Chikkamagaluru-2.jpg

Load More