/newsfirstlive-kannada/media/post_attachments/wp-content/uploads/2025/07/CAB-DRIVERS.jpg)
ಬೆಂಗಳೂರು: ನೀವು ಹಲಸಿನ ಹಣ್ಣು (Jackfruit) ತಿಂದು ವಾಹನ ಚಾಲನೆ ಮಾಡ್ತಿದ್ದೀರಾ? ಇನ್ಮೇಲೆ ಹುಷಾರು! ಹಾಗಂಥ, ಹಲಸಿನ ಹಣ್ಣು ತಿಂದರೆ ಅಮಲು ಬರಲ್ಲ. ಆದ್ರೆ ಹಲಸಿನ ಹಣ್ಣು ತಿಂದು ವಾಹನ ಚಾಲನೆ ಮಾಡಿದ್ರೆ ಮಾಡಬಾರದ ಆಪಾದನೆಗೆ ಸಿಕ್ಕಿಹಾಕಿಕೊಳ್ಳಬಹುದು ಜಾಗೃತೆ.
ಹೊಸ ಟೆನ್ಷನ್ ತಂದಿಟ್ಟ ಹಲಸಿನ ಹಣ್ಣು..
ನೀವು ಹಲಸಿನ ಹಣ್ಣು ತಿಂದು ಡ್ರೈವ್ ಮಾಡುತ್ತಿದ್ದಾಗ ಟ್ರಾಫಿಕ್ ಪೊಲೀಸರೇನಾದರೂ ನಿಮ್ಮನ್ನು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಗೆ ಒಳಪಡಿಸಿದರೆ ಸಿಕ್ಕಿಹಾಕಿಕೊಳ್ಳೋದು ಪಕ್ಕಾ! ಯಾಕೆಂದರೆ ನೀವು ಮದ್ಯಪಾನ ಮಾಡಿಲ್ಲವೆಂದರೂ ರಿಸಲ್ಟ್ ಪಾಸಿಟಿವ್ ಬರುತ್ತೆ ಎಚ್ಚರ!
ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದ ಪೋಸ್ಟರ್ ವಿರುದ್ಧ ಕೆರಳಿದ ಕನ್ನಡಿಗರು.. ಬೆಂಗಳೂರಿನ ಥಿಯೇಟರ್ನಲ್ಲಿ ಫ್ಯಾನ್ಸ್ ಹುಚ್ಚಾಟ..!
ಹೌದು, ಹಲಸಿನ ಹಣ್ಣು ತಿಂದು ಡ್ರೈವ್ ಮಾಡುತ್ತಿದ್ದ ಕೇರಳ KSRTC ಚಾಲಕರಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಪಂದಳಂ ಡಿಪೋದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿದಿನ ಡಿಪೋದಿಂದ ಬಸ್ ತೆಗೆಯುವ ಮುನ್ನ ಚಾಲಕರಿಗೆ ಆಲ್ಕೋಹಾಲ್ ಟೆಸ್ಟ್ ಮಾಡಲಾಗುತ್ತದೆ.
ಹೀಗೆ ಚೆಕ್ ಮಾಡಿದಾಗ ಮೂವರು ಬಸ್ ಚಾಲಕರಿಗೆ ಶೇಕಡಾ 10 ರಷ್ಟು ಆಲ್ಕೋಹಾಲ್ ಅಂಶ ಇರೋದು ಪತ್ತೆಯಾಗಿದೆ. ಆದರೆ ಅವರು ಮದ್ಯಪಾನ ಮಾಡಿರಲ್ಲ. ಮದ್ಯಪಾನ ಮಾಡದೇ ಹೋದರೂ ಆಲ್ಕೋಹಾಲ್ ಅಂಶ ಹೇಗೆ ಬಂತು? ಎಂಬ ಪ್ರಶ್ನೆ ಎದುರಾಗಿತ್ತು.
ಇದನ್ನೂ ಓದಿ: ಕರೆ ಸ್ವೀಕರಿಸೋ ಮುನ್ನ ಎಚ್ಚರ.. ಬರೋಬ್ಬರಿ 9 ಗಂಟೆ ಮಹಿಳೆ ಜತೆ ವಿಡಿಯೋ ಕಾಲ್ನಲ್ಲಿದ್ದ ವಂಚಕ.. ಮಾಡಿದ್ದೇನು?
ಕೊನೆಗೆ ನೋಡಿದ್ರೆ ಟೆಸ್ಟ್ ಮಾಡೋಕು ಮುಂಚೆ ಮೂವರು ಹಲಸಿನ ಹಣ್ಣು ತಿಂದಿದ್ದರು. ಸ್ನೇಹಿತರು ತಂದಿದ್ದ ಹಣ್ಣನ್ನು ತಿಂದಿದ್ದರು. ಇದರಿಂದ ಅನುಮಾನಗೊಂಡ ಅಧಿಕಾರಿಗಳು, ನೆಗಟಿವ್ ಬಂದಿದ್ದ ಡ್ರೈವರ್ ಒಬ್ಬರಿಗೆ ಹಲಸಿನ ಹಣ್ಣು ತಿನ್ನಿಸಿ ಪರೀಕ್ಷೆ ಮಾಡಿದ್ದಾರೆ. ಆಗ ಪಾಸಿಟಿವ್ ಬಂದಿದೆ. ಹೆಚ್ಚಾಗಿ ಹಣ್ಣಾಗಿರುವ ಹಲಸಿನ ಹಣ್ಣಿನಲ್ಲಿ ಎಥನಾಲ್ ಎಂಬ ಆಲ್ಕೋಹಾಲ್ ಕಂಟೆಂಟ್ ಇರುತ್ತೆದೆ.
ಡಾಕ್ಟರ್ ಹೇಳೋದೇನು?
ಹಲಸಿನ ಹಣ್ಣಿನಲ್ಲಿ ಆಲ್ಕೋಹಾಲ್ ಉತ್ಪತ್ತಿ ಆಗುತ್ತದೆ. ಫ್ರೆಶ್ ಆಗಿ ಹಲಸಿನ ಹಣ್ಣು ತಿಂದರೆ ಅದರಲ್ಲಿ ಆಲ್ಕೋಹಾಲ್ ಇರಲ್ಲ. ಆದರೆ, ಹಣ್ಣಾಗಿರುವ ಹಲಸಿನ ಹಣ್ಣು ಸೇವನೆ ಮಾಡಿದ್ರೆ ಆಲ್ಕೊಹಾಲ್ ಅಂಶ ಪತ್ತೆಯಾಗುವ ಸಾಧ್ಯತೆ ಇದೆ. ಹಲಸಿನ ಹಣ್ಣಿನಲ್ಲಿ 7-10 % ಆಲ್ಕೋಹಾಲ್ ಪತ್ತೆಯಾಗಬಹುದು ಎಂದು ಆರ್ಯುವೇದ ವೈದ್ಯ ಡಾ.ಶರದ್ ಕುಲಕರ್ಣಿ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ