‘ನಿಮ್ಗೆ ಗಟ್ಸ್​ ಇದ್ದರೆ..’ ಸಾನಿಯಾ ಜೊತೆ ಮದ್ವೆ ವಿಚಾರಕ್ಕೆ ಮೌನ ಮುರಿದು ಶಮಿ ಕಿಡಿಕಿಡಿ..!

author-image
Ganesh
Updated On
‘ನಿಮ್ಗೆ ಗಟ್ಸ್​ ಇದ್ದರೆ..’ ಸಾನಿಯಾ ಜೊತೆ ಮದ್ವೆ ವಿಚಾರಕ್ಕೆ ಮೌನ ಮುರಿದು ಶಮಿ ಕಿಡಿಕಿಡಿ..!
Advertisment
  • ಸಾನಿಯಾ ಮಿರ್ಜಾ-ಮೊಹ್ಮದ್ ಶಮಿ ಮದುವೆ ಬಗ್ಗೆ ವದಂತಿ
  • ಮದುವೆ ಬಗ್ಗೆ ಕೇಳಿದ್ದಕ್ಕೆ ಮೊಹ್ಮದ್ ಶಮಿ ಏನ್ ಹೇಳಿದರು ಗೊತ್ತಾ?
  • ಟ್ರೋಲ್ ಮಾಡೋರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಮಿ

ಟೀಂ ಇಂಡಿಯಾದ ಸ್ಟಾರ್​ ವೇಗಿ ಮಹಮ್ಮದ್ ಶಮಿ ಮತ್ತು ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮದುವೆ ಆಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ತಿಂಗಳಿಂದ ಈ ಸುದ್ದಿ ಹರಿದಾಡಿತ್ತು.

ಇದೀಗ ವೇಗಿ ಮಹ್ಮದ್ ಶಮಿ ತಮ್ಮ ಬಗ್ಗೆ ಕೇಳಿ ಬರುತ್ತಿರುವ ವದಂತಿ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಬಗ್ಗೆ ಕೇಳಿ ಬಂದಿರುವ ಸುದ್ದಿಯೇ ವಿಚಿತ್ರವಾಗಿದೆ. ಅದು ವಿಚಿತ್ರ ಅಲ್ಲದೇ ಇನ್ನೇನು? ಬೇಕು ಅಂತಲೇ ಮಾಡಲಾಗಿದೆ. ನಿಮ್ಮ ಫೋನ್ ಓಪನ್ ಮಾಡಿದಾಗ ನಿಮ್ಮ ಸ್ವಂತ ಫೋಟೋವನ್ನು ನೋಡುತ್ತೀರಿ.

ಇದನ್ನೂ ಓದಿ:ಟೀಕೆಗಳನ್ನು ಪಕ್ಕಕ್ಕೆ ಇಡಿ.. ಪಾಂಡ್ಯರ ಈ ರೋಚಕ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು..?

publive-image

ಇಲ್ಲಿ ನಾನೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ಯಾರೂ ಈ ರೀತಿಯ ಫೋಟೋಗಳನ್ನು ಮಾಡಬಾರದು. ಮೀಮ್‌ಗಳು ನಿಮ್ಮ ಮೋಜಿಗಾಗಿ ಎಂದು ಒಪ್ಪುತ್ತೇನೆ. ಆದರೆ ಅದು ಬೇರೆಯವರ ಜೀವನದ ಕುರಿತಾಗಿದ್ದರೆ ಯೋಚಿಸಿ ಮಾಡಿ. ನಿಮ್ಮದು ಪರಿಶೀಲಿಸಿದ ಪುಟವಲ್ಲ. ನಿಮ್ಮ ವಿಳಾಸ ತಿಳಿದಿಲ್ಲ. ನಿಮ್ಮ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದಕ್ಕೆ ನೀವು ಮಾತನಾಡುತ್ತೀರಿ.

ನಿಮಗೆ ಧೈರ್ಯವಿದ್ದರೆ..
ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ನಿಮಗೆ ಧೈರ್ಯವಿದ್ದರೆ ಅದನ್ನು ಪರಿಶೀಲಿಸಿದ ಅಕೌಂಟ್​/ಪೇಜ್​​ಗಳಿಂದ ಮಾತನಾಡಿ. ಆಗ ನಾನು ನೀವು ನಿಂತಿರುವ ನೀರಿನ ಆಳವನ್ನು ಹೇಳ್ತೇನೆ. ಬೇರೆಯವರ ಕಾಲು ಎಳೆಯುವುದು ತುಂಬಾ ಸುಲಭ. ಯಶಸ್ಸನ್ನು ಸಾಧಿಸಿ, ನಿಮ್ಮ ಮಟ್ಟವನ್ನು ಹೆಚ್ಚಿಸಿ. ಆಗ ನೀವು ಒಳ್ಳೆಯ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಕಿಡಿಕಾರಿದ್ದಾರೆ. ಮೊಹ್ಮದ್ ಶಮಿ ಅವರು 2018ರಲ್ಲಿ ತಮ್ಮ ಪತ್ನಿ ಹಸೀನಾ ಜಹಾನ್​ಗೆ ಡಿವೋರ್ಸ್ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇನ್ನು ಸಾನಿಯಾ ಮಿರ್ಜಾ ಅವರು ಪಾಕ್ ಕ್ರಿಕೆಟಿಗ ಶೊಯಿಬ್ ಮಲಿಕ್​​ಗೆ ಈ ವರ್ಷದ ಆರಂಭದಲ್ಲಿ ಡಿವೋರ್ಸ್​ ನೀಡಿದ್ದಾರೆ.

ಇದನ್ನೂ ಓದಿ:ಈ ಹುಡ್ಗಿಯಿಂದಾಗಿ ಪಾಂಡ್ಯ ಡಿವೋರ್ಸ್ ಪಡೆದರಾ​..? ಹಾರ್ದಿಕ್ ಜೊತೆ ತಳುಕು ಹಾಕಿಕೊಂಡ ಬ್ಯೂಟಿ ಇವರೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment