ಭಾರತದ ಈ ಒಂದು ಜಾಗದಲ್ಲಿ ನೀವು ಕಾಲಿಟ್ರೆ ಖಲ್ಲಾಸ್​! ಇದು ಜಗತ್ತಿನ ಅತ್ಯಂತ ಖತರ್ನಾಕ್ ದ್ವೀಪ!

author-image
Gopal Kulkarni
Updated On
ಭಾರತದ ಈ ಒಂದು ಜಾಗದಲ್ಲಿ ನೀವು ಕಾಲಿಟ್ರೆ ಖಲ್ಲಾಸ್​! ಇದು ಜಗತ್ತಿನ ಅತ್ಯಂತ ಖತರ್ನಾಕ್ ದ್ವೀಪ!
Advertisment
  • ಭಾರತದ ಈ ಪ್ರದೇಶದಲ್ಲಿ ಕಾಲಿಡಲು ಕಂಪಿಸುವುದು ಏಕೆ ಜನರು
  • ಈ ದ್ವೀಪಕ್ಕೆ ನೀವು ಕಾಲಿಟ್ಟರೆ ವಾಪಸ್ ಬರೋದು ಶವವಾಗಿಯೇ
  • ಆ ದ್ವೀಪದಲ್ಲಿ 60 ಸಾವಿರ ವರ್ಷದಿಂದ ನೆಲೆಸಿರುವುದು ಯಾರು?

ಜಗತ್ತಿನಲ್ಲಿ ಕೆಲವೊಂದು ರಹಸ್ಯಮಯ ಜಾಗಗಳಿವೆ. ಅಲ್ಲಿ ಕಾಲಿಡುವುದು ನಮ್ಮ ಸಾವನ್ನು ನಾವೇ ತಂದುಕೊಳ್ಳುವುದು ಎರಡು ಒಂದೇ ಅಂತಹ ಖತರ್ನಾಕ್ ಸ್ಥಳಗಳು ಇವೆ. ಭಾರತದಲ್ಲಿಯೂ ಕೂಡ ಅಂತಹದೇ ಒಂದು ಜಾಗವಿದೆ. ಇಲ್ಲಿ ಜಗತ್ತಿನ ಸಾಮಾನ್ಯ ಮನುಷ್ಯರು ಅಲ್ಲಿ ಕಾಲಿಟ್ಟರೆ ವಾಪಸ್ ಬಂದಿರೋದು ಇತಿಹಾಸದಲ್ಲಿಯೇ ಇಲ್ಲ. ಹೀಗಾಗಿ ಅಲ್ಲಿ ಯಾವುದೇ ಭಾರತೀಯನು ಅಲ್ಲಿ ಕಾಲಿಡುವುದಿಲ್ಲ. ಆ ಜಗತ್ತನ್ನು ಅವರ ಪಾಡಿಗೆ ಬಿಟ್ಟು ಇತ್ತ ತಾನು ನೆಮ್ಮದಿಯಿಂದ ಇದೆ.

ಇದನ್ನೂ ಓದಿ:ದೇಶದಲ್ಲಿಯೇ ಅತಿಹೆಚ್ಚು ಚಹಾ ಪ್ರಿಯರು ಇರುವ ರಾಜ್ಯ ಯಾವುವು! ಕರ್ನಾಟಕ, ತಮಿಳುನಾಡು ಅಲ್ಲವೆ ಅಲ್ಲ! ಮತ್ಯಾವುದು?

ಇದು ಭಾರತದಲ್ಲಿರುವ ಉತ್ತರ ಸೆಂಟಿನೆಲ್ ದ್ವೀಪ. ಇಲ್ಲಿ ನಮ್ಮಂತಹ ಮನುಷ್ಯರು ಹೋಗುವುದು ಸಂಪೂರ್ಣ ನಿಷಿದ್ಧ. ಒಂದು ವೇಳೆ ಅಲ್ಲಿ ಕಾಲಿಟ್ಟರು ಕೂಡ ಆ ದ್ವೀಪದಲ್ಲಿರುವ ಬುಡಕಟ್ಟು ಸಮುದಾಯ ನಮ್ಮನ್ನು ಜೀವಂತವಾಗಿ ಮರಳಿ ಕಳಿಸುವುದೇ ಇಲ್ಲ. ಯಮಲೋಕಕ್ಕೆ ಅಟ್ಟಿಯೇ ಅವರು ವಿರಮಿಸುವುದು. ಈ ಮಾನವ ಜಗತ್ತಿನಿಂದ ತುಂಬಾ ಅಂತರ ಕಾಯ್ದುಕೊಂಡು ಬದುಕುತ್ತಿರುವ ಜನಾಂಗವದು. ಹೀಗಾಗಿ ಇತತರು ಅಲ್ಲಿ ಕಾಲಿಟ್ಟರೆ ಅವರ ಕಥೆಯನ್ನೇ ಮುಗಿಸಿ ಕಳುಹಿಸುತ್ತಾರೆ.

publive-image

ಈ ಹಿಂದೆ ಅಂದ್ರೆ 2018ರಲ್ಲಿ ಅಮೆರಿಕಾದ ಎಲನ್ ಎಂಬ ಯುವಕ ಈ ದ್ವೀಪಕ್ಕೆ ಹೋಗಲು ಪ್ರಯತ್ನಿಸಿದ್ದ. ಇಲ್ಲಿ ಪ್ರವಾಸಿಗರು ಅಷ್ಟೇ ಏಕೆ ಭಾರತೀಯರು ಹೋಗು ಕೂಡದು ಎಂದು ಭಾರತ ಸರ್ಕಾರವೇ ನಿರ್ಬಂಧ ಹೇರಿದೆ. ಆದರೂ ಕೂಡ ಎಲನ್ ಹೊರಟು ನಿಂತಿದ್ದ. ಅಂಡಮಾನ್ ನಿಕೋಬಾರ್​ ದ್ವೀಪದಲ್ಲಿರುವ ಈ ಜಾಗದಲ್ಲಿ ಸುಮಾರು 60 ಸಾವಿರ ವರ್ಷಗಳಿಂದ ಸೆಂಟಿನಲಿಜ್ ಎಂಬ ಜನಾಂಗವು ವಾಸಿಸುತ್ತಾ ಬಂದಿದೆ. ಅಂದಿನಿಂದಲೂ ಅದು ಹೊರ ಜಗತ್ತಿನೊಂದಿಗೆ ತನ್ನ ಸಂಪರ್ಕವನ್ನು ಇಟ್ಟುಕೊಂಡಿಲ್ಲ. ಹೊರಗಿನವರನ್ನು ತಮ್ಮ ಪ್ರದೇಶದೊಳಗೆ ಬರಲು ಬಿಡುವುದಿಲ್ಲ.
ಆದರೆ ಇಸಾಯಿ ಧರ್ಮ ಪ್ರಚಾರಕನಾದ ಎಲನ್ ಅಂಡಮಾನ್ ನಿಕೋಬಾರ್​ನಲ್ಲಿರುವ ಜನರ ಸಲಹೆಯನ್ನು ಕೂಡ ತಿರಸ್ಕರಿಸಿ, ಅಲ್ಲಿನ ಮೀನುಗಾರರ ಸಹಾಯದಿಂದ ಈ ಜಾಗದ ಸಮೀಪ ಕದ್ದುಮುಚ್ಚಿ ಹೋಗಿದ್ದ. ಯಾವಾಗ ಸೆಂಟನಲಿಜ್ ಸಮುದಾಯದ ಜನರು ಅವನನ್ನು ನೋಡಿದರೋ, ಕೂಡಲೇ ಅವರು ತಮ್ಮ ಬಿಲ್ಲಿಗೆ ಬಾಣ ಹೂಡಿ ನಿಂತಾಗ ಎಲನ್ ಗಾಬರಿ ಬಿದ್ದು ಅಲ್ಲಿಂದ ಓಡೋಡಿ ಬಂದಿದ್ದ.

publive-image

ಆದರೂ ಕೂಡ ಸೋಲೋಪ್ಪದ ಎಲನ್​, ಎರಡನೇ ಬಾರಿ ಆ ಸ್ಥಳಕ್ಕೆ ಹೊರಡಲು ನಿಂತ. ಅವರೊಂದಿಗೆ ಮಾತನಾಡಲು ಪ್ರಯತ್ನ ಪಟ್ಟ ಆಗಲೂ ಕೂಡ ವಿಫಲನಾಗಿ ವಾಪಸ್ ಬಂದಿದ್ದ. ಆದರೆ ಮೂರನೇ ಬಾರಿ ಅವನು ಆ ಜನಾಂಗವನ್ನು ಭೇಟಿಯಾಗಲು ಹೋದಾಗ ಸೆಂಟಿನಲಿಜ್​ ಜನಾಂಗದವರು ಅವನ ಮೇಲೆ ಹಲ್ಲೆ ಮಾಡಿ ಬಾಣಗಳನ್ನ ಹೂಡಿ ಅವನ ಎದೆಗೆ ಹೊಡೆದು ಕೊಂದು ಹಾಕಿದರು. ಇಲ್ಲಿಗೆ ಅವನು ದುರಂತವಾಗಿ ಅಂತ್ಯವಾಗಿ ಹೋದ.

ಇದನ್ನೂ ಓದಿ: ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶಗಳು ಯಾವುವು? ಭಾರತದಲ್ಲಿ ಎಷ್ಟಿವೆ?

publive-image

ಮುಂದೆ ಸ್ಥಳೀಯ ಮೀನುಗಾರರು ಸಮುದ್ರದ ದಂಡೆಯಲ್ಲಿ ವ್ಯಕ್ತಿಯೊಬ್ಬನ ಶವ ಬಿದ್ದಿರುವುದನ್ನು ಕಂಡು ಅದನ್ನು ಭಾರತೀಯ ಅಧಿಕಾರಿಗಳಿಗೆ ತಿಳಿಸಿದರು. ಇದಾದ ಬಳಿಕ ಆತನನನ್ನು ಆ ಸ್ಥಳಕ್ಕೆ ಹೋಗಲು ಸಹಾಯ ಮಾಡಿದ ಮೀನುಗಾರರನ್ನು ಭಾರತೀಯ ಅಧಿಕಾರಿಗಳು ಬಂಧಿಸಿದರು. ಅಲ್ಲಿಗೆ ಹೋಗಿ ನೋಡಿದಾಗ ಒಂದು ಡೈರಿ ಹಾಗೂ ಒಂದು ಫೋಟೋ ಮಾತ್ರ ಸಿಕ್ಕಿತ್ತು. ಅದರಲ್ಲಿ ಅವನ ಅಂತಿಮ ಯಾತ್ರೆಯ ಬಗ್ಗೆ ಉಲ್ಲೇಖವಾಗಿತ್ತು. ಹಾಗೂ ಮೀನುಗಾರನೊಬ್ಬನ ಜೊತೆ ತೆಗೆದುಕೊಂಡ ಫೋಟೋ ಕೂಡ ಸಿಕ್ಕಿತ್ತು. ಈ ಒಂದು ಘಟನೆ ಇಡೀ ಜಗತ್ತಿನ ತುಂಬಾ ದೊಡ್ಡ ಸುದ್ದಿಯಾಯ್ತು ಅದು ಮಾತ್ರವಲ್ಲದೇ ಉತ್ತರ ಸೆಂಟಿನಲ್​ ದ್ವೀಪ ಅದೆಷ್ಟು ಭಯಾನಕ ಎಂಬ ಸತ್ಯ ಮತ್ತೊಮ್ಮೆ ಲೋಕಕ್ಕೆ ಅರ್ಥವಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment