newsfirstkannada.com

ಬೆಂಗಳೂರಲ್ಲಿ ಕುಡಿಯೋ ನೀರಿಗೂ ಸಮಸ್ಯೆ; ಕಾರ್​​, ಬೈಕ್​ ವಾಶ್​ ಮಾಡಿದ್ರೆ ದಂಡ ಗ್ಯಾರಂಟಿ!

Share :

Published March 25, 2024 at 6:06am

    ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಸಿಡಿಮಿಡಿ

    ಬಿಸಿಲ ಧಗೆಯ ಮಧ್ಯೆ ಗಾಡರ್ನ್​​ ಸಿಟಿ ಮಂದಿ ನಿಗಿನಿಗಿ ಕೆಂಡ

    ಬೆಂದಕಾಳೂರಲ್ಲಿ ಬೇಸಿಗೆ ಧಗೆ ಹೆಚ್ಚಾಗುತ್ತಿದೆ ಜಲಕ್ಷಾಮ

ರಾಜಧಾನಿ ಬೆಂಗಳೂರಿನ ಯಾವ ಭಾಗಕ್ಕೂ ಹೋದ್ರೂ ಖಾಲಿ ಬಿಂದಿಗೆ ಕಾಣ್ತಿದೆ. ಬೋರ್​​ವೆಲ್​ಗಳು ಬತ್ತಿ ಹೋಗಿವೆ, ಕಾವೇರಿ ನೀರು ಪೊರೈಕೆ ಕಡಿಮೆಯಾಗ್ತಿದೆ. ಬಿಸಿಲ ಧಗೆಯ ಮಧ್ಯೆ ಗಾಡರ್ನ್​​ ಸಿಟಿ ಮಂದಿ ಜಲಯಾತನೆ ಅನಿಭವಿಸ್ತಿದ್ರೆ, ಅತ್ತ, ಜಲಮಂಡಳಿ ನೀರು ಬಳಸಿ ಕಾರ್​ ವಾಶ್​ ಮಾಡಿದ್ದವರಿಗೆ ದಂಡ ಹಾಕ್ತಿದೆ.. ಇತ್ತ ಇದನ್ನೇ ಅಸ್ತ್ರವಾಗಿ ಬಳಸಿರೋ ಬಿಜೆಪಿ ಸರ್ಕಾರದ ವಿರುದ್ಧ ಕೆಂಡ ಕಾರ್ತಿದೆ.

ಕಾವೇರಿ ನೀರಿನಿಂದ ಕಾರ್​ ವಾಶ್​, 5 ಸಾವಿರ ದಂಡ..!

ಹೌದು, ಬಿಸಿಲ ಧಗೆಯಲ್ಲಿ ಬೆಂದಕಾಳೂರು ಬೇಯುತ್ತಿದೆ. ನಗರದ ಗಲ್ಲಿಗಲ್ಲಿಯಲ್ಲೂ ಹನಿ ನೀರಿಗೂ ಜನ ಒಣಗಿ ಹೋಗ್ತಿದ್ದಾರೆ. ಕಿಲೋ ಮೀಟರ್​​ಗಟ್ಟಲೇ ಖಾಲಿ ಬಿಂದಿಗೆ ಹಿಡಿದು ಅಲೆಯುತ್ತಿದ್ದಾರೆ. ಈ ಮಧ್ಯೆ ಎಚ್ಚೆತ್ತ ಜಲಮಂಡಳಿ, ನೀರುಳಿಸೋ ಪ್ರಯತ್ನಕ್ಕೆ ಮುಂದಾಗಿತ್ತು. ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ಕೊಟ್ಟಿತ್ತು. ಆದ್ರೆ ಈ ಮಧ್ಯೆ ಕಾವೇರಿ ವಾಟರ್​ನಿಂದ ಕಾರ್​ ವಾಶ್​ ಮಾಡಿದ್ದ ಸದಾಶಿವನಗರ, ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯ ಮೂವರಿಗೆ 5 ಸಾವಿರ ರೂಪಾಯಿ ದಂಡ ಹಾಕಿದೆ. ನೀರು ವ್ಯರ್ಥ ಮಾಡದಂತೆ ಬಿಸಿ ಮುಟ್ಟಿಸಿದೆ.

‘ರಾಜ್ಯದ ಜನರಿಗೆ ಕುಡಿಯಲು ನೀರು ಕೊಡಲು ಆಗ್ತಿಲ್ಲ’

ರಾಜ್ಯದಲ್ಲಿ ಕ್ಷಾಮ ಭೂತ ಎದ್ದು ತಾಂಡವಾಡ್ತಿರೋದ್ರಿಂದ, ನೀರನ್ನ ಮಿತವಾಗಿ ಬಳಸಲು BWSSB ಈಗಾಗಲೇ ನಿಯಂತ್ರಣ ಹೇರಿ, ಸೂಚನೆ ಕೊಟ್ಟಿದೆ. ಆದ್ರೆ ಇದನ್ನೇ ಅಸ್ತ್ರವನ್ನಾಗಿ ಬಳಸಿರೋ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿಜೆಪಿ ಪ್ರದಾನ ಕಾರ್ಯದರ್ಶಿ ಪಿ. ರಾಜೀವ್, ಸಿಎಂ ಸಿದ್ದರಾಮಯ್ಯಗೆ, ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲು ಆಗ್ತಿಲ್ಲ ಅಂತ ಖಾರವಾಗಿ ನುಡಿದ್ದಾರೆ. ಹಾಗೇ ಗಿಡಕ್ಕೆ ನೀರು ಹಾಕ್ಬೇಡಿ, ಕಾರು ತೊಳೆಯಬೇಡಿ ಅಂತಾರೆ. ಇನ್ಮೇಲೆ ಇನ್ನೇನನ್ನು ತೊಳೆಯಬೇಡಿ ಅಂತಾರೆ ಅಂತ ಗೊತ್ತಿಲ್ಲ ಅಂತ ವಿಪಕ್ಷ ನಾಯಕ ಆರ್​ ಅಶೋಕ್​​ ಕೂಡ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಾರೆ, ಬೇಸಿಗೆಗೂ ಮುನ್ನವೇ ಬೆಂಗಳೂರಿಗೆ ಜಲಕಂಟಕ ಎದುರಾಗಿ ಜನರು ನೀರಿಲ್ಲದೆ ಕಣ್ಣೀರು ಸುರಿಸ್ತಿದ್ದಾರೆ. ಜಲಮಂಡಳಿ ನೀರುಳಿಸಲು ನಾನಾ ಪ್ರಯತ್ನಕ್ಕೆ ಕೈ ಹಾಕ್ತಿದೆ. ಆದ್ರೆ ಇದುವೇ ಎಲೆಕ್ಷನ್‌ ಟೈಮಲ್ಲಿ ರಾಜಕೀಯ ಅಸ್ತ್ರವಾಗಿಯೂ ಬಳಕೆಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಕುಡಿಯೋ ನೀರಿಗೂ ಸಮಸ್ಯೆ; ಕಾರ್​​, ಬೈಕ್​ ವಾಶ್​ ಮಾಡಿದ್ರೆ ದಂಡ ಗ್ಯಾರಂಟಿ!

https://newsfirstlive.com/wp-content/uploads/2024/02/Water-taker.jpg

Load More