/newsfirstlive-kannada/media/post_attachments/wp-content/uploads/2025/07/IIT_BANGALORE.jpg)
ಬೆಂಗಳೂರಿನ ಐಐಐಟಿ ಸಂಸ್ಥೆಯಲ್ಲಿ ಓದಿದ್ದ ವಿದ್ಯಾರ್ಥಿಯೊಬ್ಬರಿಗೆ ಬರೋಬ್ಬರಿ 1.45 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಸಂಬಳದ ಉದ್ಯೋಗ ಸಿಕ್ಕಿದೆ. ಇದು ಐಐಐಟಿ ಸಂಸ್ಥೆಯ ಇತಿಹಾಸದಲ್ಲೇ ಹೊಸ ದಾಖಲೆ. ಐಐಐಟಿ ವಿದ್ಯಾರ್ಥಿಯೊಬ್ಬ ಅತಿ ಹೆಚ್ಚಿನ ಸಂಬಳದ ಉದ್ಯೋಗಕ್ಕೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಐಐಐಟಿ ಸಿಲ್ವರ್ ಜ್ಯೂಬಿಲಿ ಕಾರ್ಯಕ್ರಮಕ್ಕೆ ಮುನ್ನ ಐಎಂಟೆಕ್ ವಿದ್ಯಾರ್ಥಿಗೆ ಭರ್ಜರಿ ಸಂಬಳದ ಪ್ಯಾಕೇಜ್ ಆಫರ್ ಮಾಡಲಾಗಿದೆ.
ಜುಲೈ 8 ರಂದು ನಡೆದ ಪದವಿ ಪ್ರದಾನ ಘಟಿಕೋತ್ಸವದಲ್ಲಿ 372 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇಂಟಿಗ್ರೇಟೆಡ್ ಎಂಟೆಕ್, ಎಂಟೆಕ್, ಎಂ.ಎಸ್ಸಿ ಇನ್ ಡಿಜಿಟಲ್ ಸೊಸೈಟಿ, ಎಂಎಸ್ಸಿ ಬೈ ರಿಸರ್ಚ್ ಮತ್ತು ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಐಐಎಸ್ಸಿ ಡೈರೆಕ್ಟರ್ ಪ್ರೊಫೆಸರ್ ಗೋವಿಂದ ರಂಗರಾಜನ್, ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾ ಎಂಡಿ ವೆಂಕಟ್ ಪದ್ಮನಾಭನ್, ಐಐಐಟಿ- ಬಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ ಅನೇಕ ಗಣ್ಯರು ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು.
ವಿದ್ಯಾರ್ಥಿಗೆ 1.45 ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್ ಹೊರತುಪಡಿಸಿದಂತೆ. 14 ವಿದ್ಯಾರ್ಥಿಗಳಿಗೆ ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್ ಸಂಬಳದ ಉದ್ಯೋಗ ಸಿಕ್ಕಿದೆ. ಇನ್ನೂ 67 ವಿದ್ಯಾರ್ಥಿಗಳಿಗೆ ವಾರ್ಷಿಕ 40 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಬಳದ ಉದ್ಯೋಗ ಸಿಕ್ಕಿದೆ. 180ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ವಾರ್ಷಿಕ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಬಳದ ಉದ್ಯೋಗ ಸಿಕ್ಕಿದೆ. 2025ರ ಸಾಲಿನ ಔಟ್ ಗೋಯಿಂಗ್ ವಿದ್ಯಾರ್ಥಿಗಳಿಗೆ ಅದ್ಭುತವಾದ ಪ್ಲೇಸ್ ಮೆಂಟ್ ಆಗಿದೆ ಎಂಬ ಸಂತಸ ಐಐಐಟಿ- ಬಿ ಕ್ಯಾಂಪಸ್ನಲ್ಲಿದೆ.
ಇನ್ನೂ ಉನ್ನತ ಸಾಧನೆ ಮಾಡಿದ ಸಾಧಕರಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗಿದೆ. ವಲಿಪಿರೆಡ್ಡಿ ಪ್ರಣತಿ, ಮನೋಜಾಯ್ ನಾರಾಯಣನ್ ಚೌಧರಿ, ಸೂಕ್ತಿ ಭಟ್ ಕಾವ್ ಅವರಿಗೆ ಗೋಲ್ಡ್ ಮೆಡಲ್ ನೀಡಲಾಗಿದೆ. ಇನ್ನೂ ವರ್ಷದ ಉದ್ಯಮಿ ಮೆಡಲ್ ಅನ್ನು ಆನಂದ್ ಪ್ರಕಾಶ್ ವರ್ಮಾಗೆ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿರೋ ವಿಶ್ವದ ಅದ್ಭುತ ವಿಮಾನ ನಿಲ್ದಾಣ.. ಇದಕ್ಕೆ ಅಸಲಿ ಕಾರಣವೇನು?
ಆರ್ಟಿಫಿಷಿಯಲ್ ಇಂಟಲಿಜೆನ್ಸ್, ವೈರಲೆಸ್ ಟೆಕ್ನಾಲಜಿ, ಅಡ್ವಾನ್ಸ್ ಸಾಫ್ಟ್ ವೇರ್ ಸಿಸ್ಟಮ್ಗಳಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳಿಗೆ ಪೇಟೇಂಟ್ ಗಳಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಡೈರೆಕ್ಟರ್ ದೆಬಬ್ರಾತಾ ದಾಸ್ ಹೇಳಿದ್ದಾರೆ.
1998 ರಲ್ಲಿ ಬೆಂಗಳೂರಲ್ಲಿ ಆರಂಭವಾದ ಐಐಐಟಿ- ಬೆಂಗಳೂರು ಸಂಸ್ಥೆಯು ಭಾರತದ ಟಾಪ್ ಟೆಕ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಇಂಡಸ್ಟ್ರಿ- ರೆಡಿ ಟ್ಯಾಲೆಂಟ್ ಮತ್ತು ನಿರಂತರ ಪ್ಲೇಸ್ ಮೆಂಟ್ ಸಾಧನೆಗೆ ಪ್ರಸಿದ್ಧಿಯಾಗಿದೆ. ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ಲೇಸ್ ಮೆಂಟ್ ಆಗಿರುವುದು ಸಂಸ್ಥೆಗೆ ಹೆಮ್ಮೆ, ಸಂತಸ, ಸಾಧನೆಯ ಗರಿ ಮೂಢಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ