/newsfirstlive-kannada/media/post_attachments/wp-content/uploads/2025/03/IIT-BABA-ATTACK.jpg)
ಮಹಾಕುಂಭಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಅಲಿಯಾಸ್​ ಅಭಯ್ ಸಿಂಗ್​ ಮೇಲೆ ಟಿವಿ ಡಿಬೆಟ್​ ಶೋವೊಂದರ ಹಲ್ಲೆ ಮಾಡಲಾಗಿದೆ ಎಂದು ಅವರೇ ಆರೋಪಿಸಿದ್ದಾರೆ. ನೊಯ್ಡಾದ ಖಾಸಗಿ ಚಾನೆಲ್​ವೊಂದರಲ್ಲಿ ಡಿಬೇಟ್ ಶೋನಲ್ಲಿ ಭಾಗಿಯದ್ದ ವೇಳೆ ಈ ಒಂದು ಘಟನೆ ಶುಕ್ರವಾರ ನಡೆದಿದೆ.
/newsfirstlive-kannada/media/post_attachments/wp-content/uploads/2025/03/IIT-BABA-ATTACK-1.jpg)
ಈ ವಿಚಾರವಾಗಿ ಈಗಾಗಲೇ ಪೊಲೀಸರಿಗೆ ದೂರು ನೀಡಿರುವ ಐಐಟಿ ಬಾಬಾ ಕೆಲವು ಕಾವಿ ಬಟ್ಟೆ ಧರಿಸಿದ ಜನರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ನ್ಯೂಸ್​ ರೂಮ್​ನಲ್ಲಿದ್ದಾಗಲೇ ಒಳಗೆ ನುಗ್ಗಿ ಬಂದು ನನ್ನೊಂಂದಿಗೆ ದರ್ವರ್ತನೆ ತೋರಿದರು ಮತ್ತು ದೊಣ್ಣೆಯಿಂದ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ದೂರು ನೀಡಿದ್ದಾರೆ.
ಸದ್ಯ ಖಾಸಗಿ ಚಾನೆಲ್​ನ ಆ ಒಂದು ವಿಡಿಯೋ ವೈರಲ್ ಆಗಿದ್ದು ಕೇಸರಿ ಬಟ್ಟೆ ಧರಿಸಿದ್ದ ಕೆಲವು ಸ್ವಾಮಿಜಿಗಳು ಹಾಗೂ ಮಾತಾಜಿಗಳು ಲೈವ್​ನಲ್ಲಿಯೇ ಐಐಟಿ ಬಾಬಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಬಾಬಾ ಶೋಬಿಟ್ಟು ಆಚೆಗೆ ಹೊರಟಾಗ ನಿಮ್ಮನ್ನು ನೀವು ಧರ್ಮಪ್ರಚಾರಕರು ಅಂದುಕೊಂಡಿದ್ದರೆ ಭಯ ಯಾಕೆ ಪಡ್ತೀರಿ, ಓಡಿ ಯಾಕೆ ಹೋಗ್ತೀರಿ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/03/IIT-BABA-ATTACK-2.jpg)
ನಿಮ್ಮನ್ನು ನೀವು ಧರ್ಮಲಂಡ ಎಂದಾಗಿದ್ದರೆ ಓಡಿ ಹೋಗಿ ಎಂದು ಅವಹೇಳನ ಮಾಡಿದ್ದಾರೆ. ಈ ವೇಳೆ ಹಲ್ಲೆಯೂ ಕೂಡ ನಡೆದಿದೆ. ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತೆ ಎಂದು ಹೇಗೆ ಹೇಳಿದೆ ಎಂದು ಕೂಡ ಸ್ವಾಮೀಜಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಐಐಟಿ ಬಾಬಾ ನೀಡಿದ ದೂರನ್ನು ಸ್ವೀಕರಿಸದ ಎಸ್​ಹೆಚ್​ಒ ಸೆಕ್ಟರ್​ನ ಪೊಲೀಸ್ ಅಧಿಕಾರಿಗಳು ಅವರನ್ನು ಮನವೊಲಿಸಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us