/newsfirstlive-kannada/media/post_attachments/wp-content/uploads/2025/01/IIT-BABA.jpg)
ಮಹಾಕುಂಭಮೇಳದ ಮೊದಲ ಒಂದು ವಾರದಲ್ಲೇ ಫೇಮಸ್ ಆಗಿದ್ದು ಐಐಟಿ ಬಾಬಾ ಅಲಿಯಾಸ್ ಅಭಯ ಸಿಂಗ್. ಈ ಫೇಮಸ್ ಆಗಿದ್ದೇ ಅಭಯ ಸಿಂಗ್ ಗೆ ಮುಳುವಾಗಿದೆ. ಅಭಯ ಸಿಂಗ್ ರನ್ನು ಜುನಾ ಅಖಾಡದ ಆಶ್ರಮದಿಂದ ಹೊರ ಹೋಗುವಂತೆ ಮಹಂತರು ಸೂಚಿಸಿದ್ದಾರೆ. ಇದರಿಂದಾಗಿ ಅಭಯಸಿಂಗ್ ಅಲಿಯಾಸ್ ಐಐಟಿ ಬಾಬಾ ಜುನಾ ಅಖಾಡದ ಆಶ್ರಮ ಬಿಟ್ಟು ಹೊರ ಬಂದಿದ್ದಾರೆ. ಆದರೆ
ಇದನ್ನೂ ಓದಿ:ಮೈತುಂಬಾ ಬುರುಡೆ, ವಿಷಕಾರಿ ಹಾವುಗಳು.. ಮಹಾಕುಂಭದಲ್ಲಿ ವಿಚಿತ್ರ ಅಘೋರಿ..!? Video
ಮಹಾಕುಂಭಮೇಳದಲ್ಲೇ ಅಭಯ ಸಿಂಗ್ ಇದ್ದಾರೆ. ಅಭಯ ಸಿಂಗ್ ಗೆ ನಾನು ಗುರು. ಆತ ಇನ್ನೂ ಸನ್ಯಾಸತ್ವ ಸ್ವೀಕರಿಸಿಲ್ಲ. ಆತನ ಮಾನಸಿಕ ಸ್ಥಿತಿಯೇ ಸರಿ ಇಲ್ಲ ಎಂದು ಜುನಾ ಅಖಾಡದ ಏರ್ ಪೋರ್ಸ್ ಬಾಬಾ ಅಲಿಯಾಸ್ ರಾಮೇಶ್ವರ ಬಾಬಾ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ
ಅಭಯ ಸಿಂಗ್ ಸನ್ಯಾಸಿಯೇ ಅಲ್ಲ , ಜನವರಿ 5 ರಂದು ನನ್ನ ಬಳಿ ಬಂದಿದ್ದರು. ಈಗ ಹೊರಟು ಹೋಗಿದ್ದಾರೆ, ಅವರು ಅಭಯ ಸಿಂಗ್ ಮಾತ್ರ ಎಂದು ಜುನಾ ಅಖಾಡದ ಮಹಂತ ಹಿರೇಪುರಿ ಬಾಬಾ ನ್ಯೂಸ್ ಫಸ್ಟ್ ಗೆ ಹೇಳಿದ್ದಾರೆ.
ಮತ್ತೊಂದೆಡೆ ಅಭಯ ಸಿಂಗ್ , ನನಗೆ ಯಾರೂ ಗುರುಗಳಿಲ್ಲ. ನನ್ನನ್ನು ಆಶ್ರಮ ಬಿಟ್ಟು ಹೋಗುವಂತೆ ಹೇಳಿದ್ದರು ಎಂದು ಅಭಯ ಸಿಂಗ್ ಹೇಳಿದ್ದಾರೆ . ಈಗ ಮಹಾಕುಂಭಮೇಳಕ್ಕೆ ಬಂದ ಜನರು ಐಐಟಿ ಬಾಬಾ ಎಲ್ಲಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಕೇಳುತ್ತಿದ್ದಾರೆ. ಆದರೆ ಐಐಟಿ ಬಾಬಾ , ಜುನಾ ಅಖಾಡದಲ್ಲಿ ವಾಸ್ತವ್ಯ ಇಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ