IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?

author-image
Bheemappa
Updated On
IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?
Advertisment
  • ಡಾಕ್ಟರೇಟ್ ಪದವಿ ಪಡೆದುಕೊಂಡ 63 ವರ್ಷದ ಸುನೀಲ್ ಕುಮಾರ್
  • ಎಷ್ಟು ವಿದ್ಯಾರ್ಥಿಗಳು ಗೋಲ್ಡ್​, ಸಿಲ್ವರ್ ಮೆಡಲ್ ಪಡೆದುಕೊಂಡರು?
  • ಪಿಎಚ್‌ಡಿ ಪದವೀಧರರಲ್ಲಿ ಶೇ.42ರಷ್ಟು ಮಹಿಳೆಯರು ಇದ್ದಿದ್ದು ವಿಶೇಷ

ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ (ಐಐಟಿ) ತನ್ನ 55ನೇ ಘಟಿಕೋತ್ಸವದಲ್ಲಿ 2,656 ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ 481 ಅಭ್ಯರ್ಥಿಗಳಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ. ಇದು ಐಐಟಿ ದೆಹಲಿ ಇತಿಹಾಸದಲ್ಲೇ ಹೆಚ್ಚು ಪದವಿಗಳನ್ನು ನೀಡಿರುವ ವರ್ಷ ಆಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪೋಷಕರೇ ಎಚ್ಚರ.. ಶಾಲೆಗೆ ನಿಮ್ಮ ಮಕ್ಕಳು ಸ್ಮಾರ್ಟ್ ವಾಚ್ ಹಾಕ್ಕೊಂಡು ಹೋಗ್ತಿದ್ದಾರಾ? ಈ ಸ್ಟೋರಿ ತಪ್ಪದೇ ಓದಿ! 

ಐಐಟಿ ದೆಹಲಿಯ 55ನೇ ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟು 5 ವಿದ್ಯಾರ್ಥಿಗಳು 10 ಗೋಲ್ಡ್​ ಮೆಡಲ್ ಪಡೆದುಕೊಂಡರೇ 16 ಸ್ಟೂಡೆಂಟ್ಸ್​ ಸಿಲ್ವರ್ ಮೆಡಲ್​ಗೆ ಕೊರೊಳೋಡ್ಡಿದರು. ಇನ್ನು ವಿಶೇಷ ಎಂದರೆ 20 ವರ್ಷದ ಕವೀಶ್ ಕುಮಾರ್ ಕಿರಿಯ ವಿದ್ಯಾರ್ಥಿ ಎಂದು ಐಐಟಿಯಲ್ಲಿ ಪದವಿ ಪಡೆದುಕೊಂಡರೆ, 63 ವರ್ಷದ ಸುನೀಲ್ ಕುಮಾರ್ ಗುಲಾಟಿ ಅವರು ಪಿಹೆಚ್​ಡಿ ಪದವಿ ಸ್ವೀಕಾರ ಮಾಡಿದ್ದಾರೆ. ಶೇಕಡಾ 25 ರಷ್ಟು ಮಹಿಳೆಯರು ಹಾಗೂ 28 ವಿದೇಶಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ಈ ಬಾರಿಯ ಒಟ್ಟು ಪಿಎಚ್‌ಡಿ ಪದವೀಧರರಲ್ಲಿ ಶೇ.42ರಷ್ಟು ಮಹಿಳೆಯರು ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕಾಗಿ ರಿಟ್​ ಅರ್ಜಿ ಸಲ್ಲಿಸಿದ ಪ್ರಮೋದಾ ದೇವಿ; ಸರ್ಕಾರಕ್ಕೆ ಬರೋಬ್ಬರಿ 13 ಪ್ರಶ್ನೆಗಳು; ಏನದು?

publive-image

ಇನ್ನು ಕಾರ್ಯಕ್ರಮದಲ್ಲಿ 1979ರ ಬ್ಯಾಚ್‌ನ IIT-ದೆಹಲಿಯ ಹಳೆ ವಿದ್ಯಾರ್ಥಿ ಮತ್ತು ಜುಬಿಲಂಟ್ ಭಾರ್ತಿಯಾ ಗ್ರೂಪ್‌ನ ಸಂಸ್ಥಾಪಕ ಮತ್ತು ಸಹ-ಅಧ್ಯಕ್ಷ ಹರಿ.ಎಸ್. ಭಾರ್ತಿಯಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಐಐಟಿ ದೆಹಲಿಯ ನಿರ್ದೇಶಕ ರಂಗನ್ ಬ್ಯಾನರ್ಜಿ ಇದ್ದರು. ಅಧ್ಯಕ್ಷರಾದ ಹರೀಶ್ ಸಾಳ್ವೆ ಅವರು ಹಳೆ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಹಳೆ ವಿದ್ಯಾರ್ಥಿಗಳ ಪ್ರಶಸ್ತಿ ಹಾಗೂ ಈ ವರ್ಷದ ವಿದ್ಯಾರ್ಥಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment