ಗೋಮೂತ್ರದ ಪ್ರಯೋಜನಗಳನ್ನು ಹೊಗಳಿದ ಮದ್ರಾಸ್​ನ ಐಐಟಿ ನಿರ್ದೇಶಕ; ಹೊತ್ತಿಕೊಂಡ ವಿವಾದ

author-image
Gopal Kulkarni
Updated On
ಗೋಮೂತ್ರದ ಪ್ರಯೋಜನಗಳನ್ನು ಹೊಗಳಿದ ಮದ್ರಾಸ್​ನ ಐಐಟಿ ನಿರ್ದೇಶಕ; ಹೊತ್ತಿಕೊಂಡ ವಿವಾದ
Advertisment
  • ಗೋಮೂತ್ರದ ಔಷಧಿ ಗುಣಗಳನ್ನು ಹೊಗಳಿದ ಐಐಟಿ ನಿರ್ದೇಶಕ
  • ಮದ್ರಾಸ್ ಐಐಟಿ ನಿರ್ದೇಶಕರ ಮಾತಿಗೆ ಡಿಎಂಕೆಯಿಂದ ವಿರೋಧ
  • ನಿರ್ದೇಶಕರಾಗಲು ಇವರು ಯೋಗ್ಯರಲ್ಲ ಎಂದ ಕಾರ್ತಿ ಚಿದಂಬರಂ

ಐಐಟಿ ಮದ್ರಾಸ್​ನ ನಿರ್ದೇಶಕ ವಿ. ಕಮಕೋಟಿ ಗೋಮೂತ್ರದಲ್ಲಿರುವ ಔಷಧಿಯ ಗುಣಗಳ ಬಗ್ಗೆ ಹೊಗಳಿದ್ದಾರೆ. ಗೋಮೂತ್ರದಲ್ಲಿ ಸೋಂಕು ನಿವಾರಣೆ ಮತ್ತು ಬ್ಯಾಕ್ಟಿರಿಯಾ ನಿರೋಧಕ ಮತ್ತು ಫಂಗಲ್ ನಿರೋಧಕ ಶಕ್ತಿಯಿದೆ ಎಂದು. ಅದು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.

ಸದ್ಯ ಅವರ ಮಾತನಾಡಿದ ಒಂದು ವಿಡಿಯೋ ಸದ್ಯ ವೈರಲ್ ಆಗಿದೆ. ತಪಸ್ವಿಗಳ ವಾಖ್ಯಾನಗಳನ್ನು ಉಲ್ಲೇಖಿಸಿದ ಅವರು. ಈ ಹಿಂದಿನ ಕಾಲದಲ್ಲಿ ಸನ್ಯಾಸಿಗಳಿಗೆ ಜ್ವರದಂತಹ ಸಮಸ್ಯೆಗಳು ಬಂದರೆ ಅವರು ಗೋಮೂತ್ರ ಕುಡಿದು ಪರಿಹಾರ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ತಪಸ್ವಿಗಳಿಗೆ ಜ್ವರ ಬಂದರೆ ಅವರು ವೈದ್ಯರನ್ನು ಕರೆಯಬೇಕು ಎಂದು ಚಿಂತಿಸುತ್ತಿರಲಿಲ್ಲ. ನಾನು ಆ ಸನ್ಯಾಸಿಯ ಹೆಸರನ್ನು ಮರೆತಿದ್ದೇನೆ.ಅವರು ಹೇಳುವ ಪ್ರಕಾರ ಭೀಕರ ಜ್ವರ ಬಂದಾಗ ಗೋಮೂತ್ರ ಪೀನಾಮಿ ಅಂದ್ರೆ ಕೂಡಲೇ ಗೋಮೂತ್ರವನ್ನು ಕುಡಿದಾಗ ಕೇವಲ 15 ನಿಮಿಷದಲ್ಲಿ ಜ್ವರ ಇಳಿದು ಹೋದ ಬಗ್ಗೆ ಅವರು ಹೇಳಿದ್ದಾರೆ ಎಂದು ಕಮಕೋಟಿಯವರು ಹೇಳಿದ್ದಾರೆ.

ಇದನ್ನೂ ಓದಿ:ಉಪಾಧ್ಯಕ್ಷರು ಮೊದಲು ಅಧಿಕಾರ ಸ್ವೀಕಾರ.. USನಲ್ಲಿ ಹೇಗಿರುತ್ತೆ ಪ್ರಕ್ರಿಯೆ ? ನಿನ್ನೆ ಬದಲು ಇವತ್ತೇ ಯಾಕೆ?

ಗೋಮೂತ್ರ ಕೇವಲ ಬ್ಯಾಕ್ಟಿರಿಯಾ ನಿರೋಧಕ, ಫಂಗಲ್ ನಿರೋಧಕ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುವ ಶಕ್ತಿಯನ್ನು ಮಾತ್ರ ಹೊಂದಿಲ್ಲ. ಕರುಳಿಗೆ ಸಂಬಂಧಿಸಿದ ರೋಗಗಳಿಗೂ ಕೂಡ ಗೋಮೂತ್ರ ರಾಮಬಾಣ ಎಂದು ಹೇಳಿದ್ದಾರೆ.


">January 19, 2025

ಚೆನ್ನೈನಲ್ಲಿ ಜನವರಿ 15 ರಂದು ನಡೆದ ಮಾತು ಪೊಂಗಲ್​ನ ಗೋ ಸಂರಕ್ಷಣಾ ಸಲಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಸಾವಯವ ಕೃಷಿಯನ್ನು ಮಾಡಬೇಖಾದಲ್ಲಿ ಗೋವುಗಳ ಪ್ರಮುಖ ಪಾತ್ರವನ್ನುವಹಿಸುವತ್ತವೇ ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಯಿಂದ ಗೋವುಗಳ ಸಾಕಾಣಿಕೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ದೀರ್ಘಾಯುಷಿಗಳಾಗಲು ಏನು ಮಾಡಬೇಕು; ಚೀನಾದ ಈ 124 ವರ್ಷದ ವೃದ್ಧೆ ಹೇಳುತ್ತಾರೆ ಕೇಳಿ

ಇನ್ನು ಕಮಕೋಟಿಯವರ ಈ ಹೇಳಿಕೆ ತಮಿಳುನಾಡಿನ ಡಿಎಂಕೆ ನಾಯಕರ ವಿರೋಧಕ್ಕೆ ಕಾರಣವಾಗಿದೆ. ಇದು ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಒಂದು ಭಾಗವಾಗಿ ಕಮಕೋಟಿಯವರು ಮಾತನಾಡಿದ್ದಾರೆ ಎಂದು ಟಿಕೆಎಸ್​ ಎಲಂಗವನ್ ಹೇಳಿದ್ದಾರೆ. ಇನ್ನು ಐಐಟಿ ಮದ್ರಾಸ್ ನಿರ್ದೇಶಕರ ಮಾತಿಗೆ ಕಾಂಗ್ರೆಸ್​ ನಾಯಕ ಕಾರ್ತಿ ಚಿದಂಬರಂ ಕೂಡ ಲೇವಡಿ ಮಾಡಿದ್ದಾರೆ. ಹುಸಿ ವಿಜ್ಞಾನ ಬೋಧಿಸುವ ಮೂಲಕ ತಾವು ಐಐಟಿ ನಿರ್ದೇಶಕರಾಗಲು ಯೋಗ್ಯರಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment