/newsfirstlive-kannada/media/post_attachments/wp-content/uploads/2024/08/IIT_MADRAS.jpg)
ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮದ್ರಾಸ್ (IIT ಮದ್ರಾಸ್) ಸಂಸ್ಥೆಗೆ ಭಾರೀ ಮೊತ್ತದ ಹಣವನ್ನು 1970 ರಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿಯೊಬ್ಬರು ದೇಣಿಗೆಯಾಗಿ ನೀಡಿದ್ದಾರೆ. ಐಐಟಿ ಮದ್ರಾಸ್ ತನ್ನ ಇತಿಹಾಸದಲ್ಲೇ ಭಾರೀ ಮೊತ್ತದ ದೇಣಿಗೆಯನ್ನು ಸ್ವೀಕಾರ ಮಾಡುತ್ತಿದೆ. ಇದು ಭಾರತದ ಇತಿಹಾಸದಲ್ಲಿ ಶಿಕ್ಷಣ ಸಂಸ್ಥೆಗೆ ನೀಡುತ್ತಿರುವ ಅತಿ ದೊಡ್ಡ ಕೊಡುಗೆ ಆಗಿದೆ.
ಇದನ್ನೂ ಓದಿ: ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್!
ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕೃತರಾದ ಶಿವ ಟೆಕ್ನಾಲಜೀಸ್ ಇಂಕ್ ಹಾಗೂ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಥಾಪಕ ಡಾ. ಕೃಷ್ಣ ಚಿವುಕುಲ ಅವರು 228 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಇವರು 1970ರಲ್ಲಿ ಐಐಟಿ ಮದ್ರಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದುಕೊಂಡಿದ್ದರು. 1980ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪಡೆದರು. ಬಳಿಕ ತಮ್ಮದೇ ಆದ ಸಂಸ್ಥೆ ಪ್ರಾರಂಭ ಮಾಡಿ ಎಂಜಿನಿಯರಿಂಗ್ ಉತ್ಪಾದನಾ ತಂತ್ರಜ್ಞಾನದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಸಿನಿಮಾ ಡೈರೆಕ್ಟರ್ ಸಾವು.. ಇದು ಆತ್ಮ*ತ್ಯೆಯೋ, ಕೊಲೆಯೋ?
ಡಾ. ಕೃಷ್ಣ ಚಿವುಕುಲ ಅವರ ಈ ಭಾರೀ ಮೊತ್ತದ ಕೊಡುಗೆಯನ್ನು ಗುರುತಿಸಿ, ಐಐಟಿ ಮದ್ರಾಸ್ ತನ್ನದೊಂದು ಬ್ಲಾಕ್ಗೆ ‘ಡಾ. ಕೃಷ್ಣ ಚಿವುಕುಲ ಬ್ಲಾಕ್’ ಎಂದು ನಾಮಕರಣ ಮಾಡಿದೆ. ಈ ಕಾರ್ಯಕ್ರಮಕ್ಕೆ ಸ್ವತಃ ಡಾ. ಕೃಷ್ಣ ಚಿವುಕುಲ ಅವರು ಆಗಮಿಸಿದ್ದರು. ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ ಕಾಮಕೋಟಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಗುಡ್ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?
ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ಡಾ. ಕೃಷ್ಣ ಚಿವುಕುಲ ಅವರು ನೀಡಿದ ದೇಣಿಗೆಯನ್ನು ಇನ್ಸ್ಟಿಟ್ಯೂಟ್ ಹಲವು ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳುತ್ತದೆ. ಇಂಟರ್ನ್ಯಾಷನಲ್ ಸ್ಟೂಡೆಂಟ್ಸ್ ಸ್ಕಾಲರ್ಶಿಪ್ ಪ್ರೋಗ್ರಾಮ್, ಸ್ಪೋರ್ಟ್ಸ್ ಸ್ಕಾಲರ್ ಪ್ರೋಗ್ರಾಮ್, ಶಾಸ್ತ್ರ ಪತ್ರಿಕೆ ಅಭಿವೃದ್ಧಿ ಇದರಲ್ಲಿ ಸೇರಿಕೊಂಡಿವೆ. ಇದರ ಜೊತೆಗೆ ಕೃಷ್ಣಾ ಚಿವುಕುಲ ಬ್ಲಾಕ್ ನಿರ್ವಹಣೆ ಹಾಗೂ ಇತರೆ ಚಟುವಟಿಕೆಗಳಿಗೆ ಈ ಹಣ ಮಂಜೂರು ಆಗುತ್ತದೆ ಎಂದು ತಿಳಿದು ಬಂದಿದೆ.
ಡಾ. ಕೃಷ್ಣ ಚಿವುಕುಲ ಅವರು 1997ರಲ್ಲಿ ಅತ್ಯಾಧುನಿಕ ಮೆಟಲ್ ಇಂಜೆಕ್ಷನ್ ಮೋಲ್ಡಿಂಗ್ (MIM) ತಂತ್ರಜ್ಞಾನ ಭಾರತಕ್ಕೆ ಪರಿಚಯಿಸಿದರು. INDO US MIM ಟೆಕ್ ಕಂಪನಿ ಈಗ ವಿಶ್ವದ MIM ತಂತ್ರಜ್ಞಾನದಲ್ಲಿ ತನ್ನ ಶಕ್ತಿ, ಕ್ವಾಲಿಟಿ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು ಸುಮಾರು 1,000 ಕೋಟಿ ರೂಪಾಯಿ ವಹಿವಾಟು ಮಾಡುತ್ತದೆ ಎಂದು ಹೇಳಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ