/newsfirstlive-kannada/media/post_attachments/wp-content/uploads/2025/02/INDIAN-MIGRANTS.jpg)
ಅಮೆರಿಕಾದ ಅಂಗಳದಲ್ಲಿ ಅದ್ಭುತ ಭವಿಷ್ಯದ ಕನಸು ಕಂಡಿದ್ದ 104 ಭಾರತೀಯರ ಕನಸು ಈಗ ಛಿದ್ರಗೊಂಡಿದೆ. ದಕ್ಷಿಣ ಅಮೆರಿಕಾದಿಂದ ಭಾರತಕ್ಕೆ ಬಂದಿಳಿದ 104 ಭಾರತೀಯರು ಈಗ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಪಾಯಕಾರಿ ಹಡಗಿನ ಪ್ರಯಾಣ, ಭೀಕರ ಬಂಧನ ಮೆಕ್ಸಿಕೋ ಗಡಿಯಿಂದ ಕೊನೆಗೂ ಭಾರತ ಬಂದು ತಲುಪಿದ್ದೇವೆ.ಎಂದು ಪಂಜಾಬ್ನ ಹರಿಪುರ ಜಿಲ್ಲೆಯ ಹರ್ವಿಂದರ್ ಸಿಂಗ್ ಹೇಳಿಕೊಂಡಿದ್ದಾರೆ. ಯುಎಸ್ಗೆ ಪರ್ಮನೆಂಟ್ ವೀಸಾ ಕೊಡಿಸುವುದಾಗಿ ಮಾತುಕೊಟ್ಟವನಿಗೆ ನಾನು ಸಾಲ ಸೂಲ ಮಾಡಿ 42 ಲಕ್ಷ ರೂಪಾಯಿ ಕೊಟ್ಟಿದ್ದೆ. ಆದ್ರೆ ಅವನು ವೀಸಾ ಕ್ಯಾನ್ಸಲ್ ಆಗಿದೆ. ಎಂದು ಹೇಳಿದ.
ಬೆಟ್ಟಗುಡ್ಡಗಳ ಮೇಳೆ 45 ಕಿಲೋ ಮೀಟರ್ ತೇಕುತ್ತಾ ತೆವಳುತ್ತಾ ಬಂದೆವು ಆಮೇಳೆ ಅಲ್ಲಿಂದ ಒಂದು ಸಣ್ಣ ಬೋಟ್ನಲ್ಲಿ ನಾಲ್ಕು ಗಂಟೆಗಳ ಕಾಲ ಪ್ರಯಾಣ ಮಾಡಿ ಮೆಕ್ಸಿಕೋ ಬಾರ್ಡರ್ಗೆ ಬಂದು ತಲುಪಿದೆವು. ಈ ವೇಳೆ ಬೋಟ್ ಒಂದು ಕಡೆ ತಲೆಕೆಳಗಾಗಿ ಬಿದ್ದಿತು, ಇದರಿಂದಾಗಿ ಒಬ್ಬ ಅಲ್ಲಿಯೇ ಮೃತಪಟ್ಟ, ಮತ್ತೊಬ್ಬ ಪಾನಾಮಾ ಕಾಡಿನಲ್ಲಿ ಮೃತಪಟ್ಟ ನಮಗೆ ಅನೇಕ ಶವಗಳು ಕೂಡ ಕಂಡವು. ತಿನ್ನಲು ಒಂದು ಹಿಡಿ ಅನ್ನ ಬಿಟ್ಟರೇ ಏನು ಕೊಡಲಿಲ್ಲ ಎಂದು ಹೇಳಿದ್ದಾರೆ.
ಬ್ರೇಜಿಲ್ನಲ್ಲಿ ನಮ್ಮನ್ನು ಪೇರು ವಿಮಾನದಲ್ಲಿ ಕೂರಿಸುವುದಾಗಿ ಹೇಳಿದರು, ಬಟ್ ಅಲ್ಲಿ ಯಾವುದೇ ರೀತಿಯ ವಿಮಾನ ವ್ಯವಸ್ಥೆ ಇರಲಿಲ್ಲ. ಅಲ್ಲಿಂದ ನಮ್ಮನ್ನು ಕೊಲಂಬಿಯಾಗೆ ಕರೆದುಕೊಂಡು ಹೋದರು. ಆಮೇಲೆ ಅಲ್ಲಿಂದ ಹಡಗಿನ ಮೂಲಕ ರವಾನಿಸುವುದಾಗಿ ಹೇಳಿದರು. ಆದ್ರೆ ಅಲ್ಲ ಯಾವುದೇ ಹಡಗಿನ ವ್ಯವಸ್ಥೆ ಇರಲಿಲ್ಲ. ಎರಡು ದಿನ ಕತ್ತೆಗಳ ಮೇಳೆ ಸವಾರಿ ಮಾಡಿಕೊಂಡು ನಾವು ಹತ್ತುವ ವಿಮಾನದ ಬಳಿ ಬರಬೇಕಾಯ್ತು ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಕೈಗೆ ಕೋಳ, ಕಾಲಿಗೆ ಬೇಡಿ.. ಅಮೆರಿಕಾದಿಂದ ಭಾರತಕ್ಕೆ ಬಂದ 104 ಮಂದಿ; ಯಾವ ರಾಜ್ಯದವರು?
ಮತ್ತೊಬ್ಬ ವಲಸಿಗ ಸುಕ್ಪಾಲ್ ಸಿಂಗ್ ಹೇಳುವ ಪ್ರಕಾರ ನಾವು 40 ರಿಂದ 45 ಕಿಲೋ ಮೀಟರ್ ಅತ್ಯಂತ ಅಪಾಯಕಾರಿ ಬೆಟ್ಟಗಳಲ್ಲಿ ಪ್ರಯಾಣ ಮಾಡಿದ್ದೇವೆ ಆಮೇಲೆ ಅಲ್ಲಿಂದ 15 ಗಂಟೆಗಳ ಸಮುದ್ರ ಪ್ರಯಾಣ. ಯಾರೆಲ್ಲಾ ಗಾಯಗೊಂಡಿದ್ದರೋ ಅವರನ್ನೆಲ್ಲಾ ಹಿಂದೆಯೇ ಬಿಟ್ಟು ಬಂದರು. ನಾವು ಅನೇಕ ಮೃತದೇಹಗಳನ್ನು ಅಲ್ಲಿ ಕಂಡೆವು. ಮೆಕ್ಸಿಕೋ ಬಂದ ಮೇಲೆ ನಮ್ಮೆಲ್ಲರ ಪ್ರಯಾಣ ಮುಗಿಯಿತು. 14 ದಿನಗಳ ಕಾಲ ನಮ್ಮನ್ನು ಕತ್ತಲು ಕೋಣೆಯಲ್ಲಿ ಬಂಧಿಯಾಗಿಸಿದ್ದರು. ಅಲ್ಲಿ ಹಲವಾರು ಪಂಜಾಬಿ ಕುಟುಂಬಗಳು ಇದದವು. ಮಕ್ಕಳು ಕೂಡ ಅದೇ ಸ್ಥಿತಿಯಲ್ಲಿದ್ದವು ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಗಲ್ಲಿ ಗಲ್ಲಿಯಲ್ಲಿ ಅಕ್ರಮ ವಲಸಿಗರಿಗಾಗಿ ಟ್ರಂಪ್ ಸರ್ಕಾರ ಹುಡುಕಾಟ.. ಭಾರತೀಯರಿಗೂ ಗೇಟ್ ಪಾಸ್
ಯುಎಸ್ನ ಮಿಲಿಟರಿ ವಿಮಾನ ನಿನ್ನೆ 104 ಭಾರತೀಯ ಅಕ್ರಮ ನಿವಾಸಿಗಳನ್ನು ಅಮೃತಸಹರಕ್ಕೆ ತಂದು ಬಿಟ್ಟು ಹೋಗಿದೆ. ಇದು ಮೊದಲ ಬ್ಯಾಚ್ ಎನ್ನಲಾಗುತ್ತಿದೆ. ಇನ್ನೂ ಅನೇಕ ಭಾರತೀಯರು ಇದೇ ರೀತಿ ಭಾರತಕ್ಕೆ ವಾಪಸ್ ಕಳುಹಿಸಿ ಕೊಡಲು ಟ್ರಂಪ್ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ