/newsfirstlive-kannada/media/post_attachments/wp-content/uploads/2024/10/Sweety.jpg)
ರಾಮನಗರ: ತಾಯಿಯೊಬ್ಬಳು ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿವೆ ಎಂದು ತನ್ನ ಮಕ್ಕಳ ಜೀವವನ್ನೇ ತೆಗೆದ ಘಟನೆ ರಾಮನಗರ ಟೌನ್​ನ ಮಂಜುನಾಥ್ ನಗರದಲ್ಲಿ ಬೆಳಕಿಗೆ ಬಂದಿದೆ. ಪ್ರಿಯಕರ ಜೊತೆ ಸೇರಿಕೊಂಡು ಮೊದಲ ಪತಿಯಿಂದ ಪಡೆದ ಮಕ್ಕಳನ್ನೇ ಕೊಲೆ ಮಾಡಿದ್ದಾಳೆ.
ಇದು ಸ್ವೀಟಿ ಲವ್​ ಸ್ಟೋರಿ
ಸ್ವೀಟಿ (24) ಗ್ರೆಗೋರಿ ಫ್ರಾನ್ಸಿಸ್ (27) ಕೊಲೆ ಮಾಡಿದ ಆರೋಪಿಗಳು. ಮೂಲತ ಬೆಂಗಳೂರು ಎ.ಕೆ ಕಾಲೋನಿಯ ನಿವಾಸಿಗಳಾಗಿದ್ದು, ರಾಮನಗರ ಟೌನ್ ನ ಮಂಜುನಾಥ್ ನಗರದಲ್ಲಿ ವಾಸವಿದ್ದರು. ಪ್ರಿಯಕನ ಜೊತೆ ಸೇರಿಕೊಂಡು 2 ತಿಂಗಳ ಕಬೀಲಾ, 11 ತಿಂಗಳ ಕಬೀಲನ್ ಎಂಬ ಪುಟ್ಟ ಮಗುವನ್ನು ಹತ್ಯೆ ಮಾಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಶ್ವಾನದ ಮರಿಗಳ ಮೇಲೆ ಕಾರು ಚಲಾಯಿಸಿ ಅಟ್ಟಹಾಸ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
/newsfirstlive-kannada/media/post_attachments/wp-content/uploads/2024/10/Sweety-1.jpg)
ತಲೆದಿಂಬಿನಿಂದ ಕೊಲೆ
ಸ್ವೀಟಿ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದರೂ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಳು. ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ ಜೊತೆ ರಾಮನಗರಕ್ಕೆ ಬಂದಿದ್ದಳು. ಬಾಡಿಗೆ ಮನೆಯಲ್ಲಿ ಜೋಡಿ ವಾಸವಿದ್ದರು. ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿ ಬರ್ತಾರೆ ಎಂದು ಇಬ್ಬರು ಕಂದಮ್ಮಗಳನ್ನು ಸ್ವೀಟಿ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ತಲೆದಿಂಬಿನಿಂದ ಮಕ್ಕಳ ಜೀವ ತೆಗೆದಿದ್ದಾರೆ.
15 ದಿನದ ಅಂತರದಲ್ಲಿ ಕೊಲೆ
ಆರೋಪಿಗಳಾದ ಸ್ವೀಟಿ ಮತ್ತು ಗ್ರೆಗೋರಿ ಫ್ರಾನ್ಸಿಸ್ 15 ದಿನಗಳ ಅಂತರದಲ್ಲಿ ಎರಡು ಮಕ್ಕಳನ್ನು ಸಾಯಿಸಿದ್ದಾರೆ. ಮಕ್ಕಳನ್ನು ಸಾಯಿಸಿದ ಬಳಿಕ ರಾಮನಗರದ ಸ್ಮಶಾನದಲ್ಲಿ ಮಣ್ಣು ಮಾಡಿದ್ದಾರೆ. ಹುಷಾರಿಲ್ಲದೇ ಮಕ್ಕಳು ಸಾವನ್ನಪ್ಪಿದ್ರು ಅಂತ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Elephant: ದಸರಾ ಹಬ್ಬದಂದು ಆನೆಯ ರಂಪಾಟ.. ಮದವೇರಿಸಿಕೊಂಡು ರಕ್ಕಸ ರೂಪ ತಾಳಿದ ಗಜರಾಜ
ಕಾವಲುಗಾರನಿಗೆ ಅನುಮಾನ
ಮಕ್ಕಳನ್ನು ಮಣ್ಣು ಮಾಡಲು ತಂದಾಗ ಸ್ಮಶಾನದ ಕಾವಲುಗಾರನಿಗೆ ಅನುಮಾನ ಬಂದ ಹಿನ್ನಲೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರ ತನಿಖೆ ವೇಳೆ ಮಕ್ಕಳನ್ನು ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರನ್ನು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಐಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us