/newsfirstlive-kannada/media/post_attachments/wp-content/uploads/2024/12/CKB_SAND.jpg)
ಚಿಕ್ಕಬಳ್ಳಾಪುರ: ಉತ್ತರ ಪಿನಾಕಿನಿ ನದಿಯಲ್ಲಿ ನಡೆಯುತ್ತಿದ್ದ ಮರಳು ಅಡ್ಡೆಯ ಮೇಲೆ ಸಿನಿಮೀಯ ರೀತಿಯಲ್ಲಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸರು ರೇಡ್ ಮಾಡಿದ್ದಾರೆ. ಮಂಚೇನಹಳ್ಳಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಬಳಿ ಈ ದಾಳಿಯನ್ನು ನಡೆಸಲಾಗಿದೆ.
ಸದ್ಯ ರಿಲೀಸ್ ಆಗಿರುವ ಪುಷ್ಪ 2 ಮಾದರಿಯಲ್ಲೇ ಉತ್ತರ ಪಿನಾಕಿನಿ ನದಿಯಲ್ಲಿ ಮರಳು ದಂಧೆಯನ್ನು ನಡೆಸುತ್ತಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದ ಸಿಇಎನ್ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 55 ಲಕ್ಷ ರೂಪಾಯಿಯ ಒಂದು ಟಿಪ್ಪರ್ ಲಾರಿ, ಜೆಸಿಬಿ ಹಾಗೂ ರಾಶಿ ರಾಶಿ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಿದ KPSC.. ಈ 3 ಪರೀಕ್ಷೆ ಬರೆದಿದ್ರೆ ನಿಮ್ಮ ಹೆಸರು ಇದೆಯೇ ಅಂತ ಚೆಕ್ ಮಾಡಿ
ಚನ್ನಬೈರನಹಳ್ಳಿ- ಅಲಕಾಪುರ ಮಾರ್ಗ ಮಧ್ಯೆ ನದಿ ಒಡಲಿನಲ್ಲಿ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿತ್ತು. ಇದರಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಪೊಲೀಸರು ಭಾಗಿ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರತ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಮಂಚೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಿಮ್ಮಾರೆಡ್ಡಿ ಹಾಗೂ ಚಾಲಕ ರವಿ ಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ