newsfirstkannada.com

ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

Share :

Published April 22, 2024 at 7:24am

    ಅಕ್ರಮ ಗೋವುಗಳ ಸಾಗಾಟ ಆರೋಪದ ಮೇಲೆ ವ್ಯಕ್ತಿಯ ಮೇಲೆ ಹಲ್ಲೆ

    ಚಾಲಕನ ಜತೆ ವಾಗ್ವಾದಕ್ಕೆ ಇಳಿದಿದ್ದ ಉದ್ರಿಕ್ತರ ಗುಂಪುನಿಂದ ಲಾರಿಗೆ ಕಲ್ಲೆಸೆತ

    ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ

ರಾಜ್ಯದಲ್ಲೀಗ ಅಲ್ಲಲ್ಲಿ ಗಲಾಟೆಗಳು ಆಗುತ್ತಿವೆ. ಎಲ್ಲಿ ನೋಡಿದ್ರೂ ಈಗ ಜಗಳ, ಗಲಾಟೆಗಳೇ ಕಾಣ್ತಿವೆ. ಕಾಕತಾಳೀಯವೋ ಏನೋ ಚುನಾವಣೆ ಹೊತ್ತಲ್ಲೇ ಕೆಲವು ಘಟನೆಗಳಲ್ಲಿ ಹೊಡೆದಾಟಗಳು ಹೆಚ್ಚಾಗಿ ಆಗುತ್ತಿವೆ. ಇದೀಗ ಬೆಳಗಾವಿಯಲ್ಲೂ ಇಂಥದ್ದೇ ಕಿಡಿ ಹೊತ್ತಿದೆ.

ಬೆಳಗಾವಿಯ ಸುವರ್ಣಸೌಧದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 50ಕ್ಕೂ ಅಧಿಕ ಮಂದಿಯಿಂದ ಓರ್ವನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಯಾರೂ ಹೇಳದ ಜನ ಓರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಕ್ರಮ ಗೋವುಗಳ ಸಾಗಾಟ ಆರೋಪದ ಮೇಲೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಲಾರಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ವಿಷಯ ತಿಳಿದ ಹಿಂದೂಪರ ಸಂಘಟನೆಯ 50ಕ್ಕೂ ಅಧಿಕ ಯುವಕರು ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿ ಲಾರಿ ತಡೆದು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕನ ಜೊತೆ ವಾಗ್ವಾದ ನಡೆದಿದ್ದು, ಉದ್ರಿಕ್ತರ ಗುಂಪು ಲಾರಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದೇ ವೇಳೆ ಚಾಲಕನ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಏನೆಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನಿಖೆಗೆ ಮುಂದಾಗಿದ್ದಾರೆ.

ವಾಹನದಲ್ಲಿ 10 ರಿಂದ 12 ಹಸುಗಳಿದ್ದವು. ಎಲ್ಲವನ್ನು ಪರಿಶೀಲನೆ ಮಾಡಿ ತನಿಖೆ ಕೈಗೊಳ್ಳುತ್ತೇವೆ. ಲಾರಿ ಚಾಲಕ ಹಾಗೂ ಅವರ ಜೊತೆಯಿದ್ದ ಇನ್ನೊಬ್ಬನಿಗೆ ಏಟಾಗಿದೆ. ಮುಖಕ್ಕೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೋಹಣ ಜಗದೀಶ್. ಡಿಸಿಪಿ ಬೆಳಗಾವಿ ನಗರ

ಗಂಭೀರವಾಗಿ ಗಾಯಗೊಂಡ ಚಾಲಕ ಹಾಗೂ ಆತನ ಜೊತೆಗಿದ್ದ ಇನ್ನೋರ್ವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ ಮಾಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಲಾರಿಯನ್ನು ಸೀಜ್ ಮಾಡಿ, ಚಾಲಕನ ಮೇಲೆ ಕೇಸ್ ಹಾಕಿದರೆ ಹುಡುಗರು ಸುಮ್ಮನಿರ್ತಾರಾ. ಈಗಾಗಲೇ ಹುಡುಗರು ಸಿಕ್ಕಾಪಟ್ಟೆ ಕೋಪದಲ್ಲಿದ್ದಾರೆ. ಕೇಸ್ ಹಾಕಿ ಅರೆಸ್ಟ್ ಮಾಡಿದರೆ ಶಾಂತ ರೀತಿಯಿಂದ ಇರುತ್ತಾರೆ.

ಜಗದೀಶ್ ಶೆಟ್ಟರ್, ಬೆಳಗಾವಿಯ ಬಿಜೆಪಿ ಅಭ್ಯರ್ಥಿ

ಇದನ್ನೂ ಓದಿ: ನಟಿಯಾಗಿ ಮಿಂಚಲು ಸಜ್ಜಾದ ‘ವೀರ ಮದಕರಿ’ ಚಿತ್ರದ ಬಾಲನಟಿ ಜೆರುಶಾ ಕ್ರಿಸ್ಟೋಫರ್; ಯಾವ ಸಿನಿಮಾ? 

ಅಕ್ರಮ ಸಾಗಾಟದ ಹೆಸರಿನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ರೆ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ನಂತರ ಆತನನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ರು. ಇದರಲ್ಲೂ ರಾಜಕೀಯದ ಹೊಗೆಯಾಡೋದಕ್ಕೆ ಶುರುವಾಗಿರೋದು ಸ್ಪಷ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/04/BGM_GOVU.jpg

Load More