newsfirstkannada.com

ಅಕ್ರಮವಾಗಿ 1.54 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸಾಗಾಟ.. ಅಬಕಾರಿ ಇಲಾಖೆ ಕೈಗೆ ಸಿಕ್ಕಿಬಿದ್ದ ಕಾರು ಚಾಲಕ

Share :

Published March 20, 2024 at 12:23pm

    ಮಾರುತಿ ಸುಜುಕಿ ಇಕೋ ಕಾರಿನಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ

    214 ಲೀಟರ್ ಮದ್ಯ, 117 ಲೀಟರ್ ಬಿಯರ್ ಸಾಗಿಸುತ್ತಿದ್ದ ವ್ಯಕ್ತಿ

    ಚುನಾವಣೆಯ ಸಮಯದಲ್ಲಿ ಅಕ್ರಮವಾಗಿ ಮದ್ಯ ಸಾಗಿಸಿ ಸಿಕ್ಕಿಬಿದ್ದ

ಕಲಬುರಗಿ: ಕಾರ್​​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಜಪ್ತಿ ಮಾಡಲಾಗಿದೆ. 214 ಲೀಟರ್ ಮದ್ಯ, 117 ಲೀಟರ್ ಬಿಯರ್ ಸಮೇತ‌ ಬಾಟಲ್ ಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿಸಿಕೊಂಡಿದ್ದಾರೆ.

ಕಲಬುರಗಿ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಬಳಿ ಪೊಲೀಸರು ಕಾರನ್ನು ಹಿಡಿದಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದಾಗ 1.54 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸಿಕ್ಕಿದೆ. ಪೊಲೀಸರು ಕಾರು ಸಮೇತ ಜಪ್ತಿ ಮಾಡಿಕೊಂಡಿದ್ದಾರೆ

ಮಾರುತಿ ಸುಜುಕಿ ಇಕೋ ಕಾರಿನಲ್ಲಿ ಮದ್ಯ ಕೊಂಡೊಯ್ಯಲಾಗುತ್ತಿತ್ತು. ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಿಂದ ಹಿಪ್ಪರಗಾ ಎಸ್.ಎನ್ ಗ್ರಾಮದ ಕಡೆಗೆ ಕಾರು ತೆರಳುತ್ತಿತ್ತು. ಸಿ.ಪಿ.ಐ ಕವಿತಾ ನೇತೃತ್ವದ ಅಬಕಾರಿ ತನಿಖಾ‌ ತಂಡ ಮಿಂಚಿನ ಕಾರ್ಯಾಚರಣೆ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ. ಹೀಗಿದ್ದರು ಅಕ್ರಮವಾಗಿ ಸಾಗಾಟ ನಡೆಯುತ್ತಿದ್ದು, ಅಬಕಾರಿ ತಂಡ ಚುರುಕುಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮವಾಗಿ 1.54 ಲಕ್ಷ ರೂಪಾಯಿ ಮೌಲ್ಯದ ಮದ್ಯ ಸಾಗಾಟ.. ಅಬಕಾರಿ ಇಲಾಖೆ ಕೈಗೆ ಸಿಕ್ಕಿಬಿದ್ದ ಕಾರು ಚಾಲಕ

https://newsfirstlive.com/wp-content/uploads/2024/03/kalaburagi.jpg

Load More