Advertisment

ಅತ್ತಿಗೆಯಿಂದ ದೂರ ಇರು.. ಬುದ್ಧಿವಾದ ಹೇಳಿದ್ದಕ್ಕೆ ಮೈದುನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಕಿರಾತಕ

author-image
AS Harshith
Updated On
ಅತ್ತಿಗೆಯಿಂದ ದೂರ ಇರು.. ಬುದ್ಧಿವಾದ ಹೇಳಿದ್ದಕ್ಕೆ ಮೈದುನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಕಿರಾತಕ
Advertisment
  • ಪತ್ನಿಯ ಅನೈತಿಕ ಸಂಬಂಧದಿಂದ ಊರು ಬಿಟ್ಟಿದ್ದ ಗಂಡ
  • ಪ್ರಿಯಕರನ ಜೊತೆ ಸೇರಿ ಗಂಡನಿಗೆ ಥಳಿಸಿದ ಹೆಂಡತಿ
  • ಅಣ್ಣ-ಅತ್ತಿಗೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ತಮ್ಮ

ಕಲಬುರಗಿ: ಅತ್ತಿಗೆಯಿಂದ ದೂರ ಇರಲು ಹೇಳಿದಕ್ಕೆ ಮೈದುನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ನಡೆದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Advertisment

ಹೀರಾಲಾಲ್ ಲದಾಫ್ (35) ಕೊಲೆಯಾದ ದುರ್ದೈವಿ. ಕೊಲೆಯಾದ ಹೀರಾಲಾಲ್ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು.

ಹೀರಾಲಾಲ್ ಅಣ್ಣ ಬಾಬು ಲದಾಫ್ ತನ್ನ ಪತ್ನಿಯ ಅನೈತಿಕ ಸಂಬಂಧ ಕಂಡು ದೂರ ಇರುವಂತೆ ಪತ್ನಿಗೆ ಹೇಳಿದ್ದನು. ಆದ್ರೆ ಬಾಬು ಲದಾಫ್ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಮೇಲೆ ಹಲ್ಲೆ ಮಾಡಿದ್ದರು.

[caption id="attachment_66242" align="alignnone" width="800"]publive-imageಹೀರಾಲಾಲ್ ಲದಾಫ್[/caption]

Advertisment

ಇದನ್ನೂ ಓದಿ: ಮಳೆಗೆ ನೀರು ತರಲು ಹೋದ ಮಹಿಳೆಗೆ ಮೃತ್ಯಕೂಪವಾದ ಮರ.. ಇದೆಂಥಾ ದುರಾದೃಷ್ಟ

ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೆ ಬಿಟ್ಟುಹೋಗಿದ್ದ. ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿ ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹೀರಾಲಾಲ್ ಹೇಳಿದ್ದ.

[caption id="attachment_66243" align="alignnone" width="800"]publive-imageರವಿ[/caption]

Advertisment

ಇದನ್ನೂ ಓದಿ: ತಗ್ಗಿದ ಮಳೆ! KRS​ ಒಳಹರಿವಿನ ಪ್ರಮಾಣದಲ್ಲಿ ದಿಢೀರ್​ ಇಳಿಕೆ; ನಿನ್ನೆಗೂ ಇಂದಿಗೂ ಎಷ್ಟು ವ್ಯತ್ಯಾಸ ಗೊತ್ತಾ?

ಇದೆ ವಿಚಾರವಾಗಿ ಹೀರಾಲಾಲ್- ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು. ಕುಡಿದ ನಶೆಯಲ್ಲಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಹೀರಾಲಾಲ್​ನನ್ನು  ರವಿ ಕಲ್ಲಿನಿಂದ ಜಜ್ಜಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೀರಾಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment