ಮತ್ತೊಬ್ಬಳೊಂದಿಗೆ ಪತಿಯ ಪ್ರಣಯ ಪ್ರಸಂಗ.. ಮನನೊಂದ ಪತ್ನಿ ಮಾಡಿದ್ದೇನು ಗೊತ್ತಾ?

author-image
Gopal Kulkarni
Updated On
ಮತ್ತೊಬ್ಬಳೊಂದಿಗೆ ಪತಿಯ ಪ್ರಣಯ ಪ್ರಸಂಗ.. ಮನನೊಂದ ಪತ್ನಿ ಮಾಡಿದ್ದೇನು ಗೊತ್ತಾ?
Advertisment
  • ಗಂಡನ ಮತ್ತೊಂದು ಸಂಬಂಧದಿಂದ ಮನನೊಂದು ಹೋದ ಪತ್ನಿ
  • ನೇಣು ಬಿಗಿದುಕೊಂಡು ಜೀವ ಕಳೆದುಕೊಂಡ ದಿವ್ಯಾ ಎಂಬ ಯುವತಿ
  • ಜಿಮ್​ನಲ್ಲಿ ಜೀವಕಳೆದುಕೊಂಡ ದಿವ್ಯ, ಪರಾರಿಯಾದ ಆತನ ಪತಿ ಗಿರೀಶ್​

ಅವರಿಬ್ಬರೂ ನಾ ನಿನಗೆ, ನೀ ನನಗೆ ಅಂತಾ ಇದ್ದವರು. ತಾಳಿ ಎಂಬ ಮೂರು ಗಂಟಿಗೆ ಜೋತು ಬಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆ ಸುಂದರ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು. ಆದ್ರೆ ಗಂಡನ ಪರಸಂಗದಿಂದ ಮನನೊಂದ ಸತಿ ಜಿಮ್​ನಲ್ಲಿಯೇ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾಳೆ. ಈ ಕುರಿತ.
ಪತ್ನಿ ದಿವ್ಯಾ, ಪತಿ ಗಿರೀಶ್, ಡಯಟ್, ವರ್ಕೌಟ್​.​ ಅಂತಾ ಇದ್ದ ಇವರ ಬದುಕಲ್ಲಿ. ಸತಿ ಪತಿ ಕಲಹದಿಂದಾಗಿ ಗಂಡನ ಅನೈತಿಕ ಸಂಬಂಧದಿಂದಾಗಿ ಒಬ್ಬರ ಜೀವನ ಅಂತ್ಯವಾಗಿದೆ.

ಗಂಡನ ಈ ಪರಸಂಗ, ಪ್ರೇಮದಾಟಕ್ಕೆ ಬೇಸತ್ತ ಗೃಹಣಿ ನೇಣಿಗೆ ಕೊರಳೊಡ್ಡಿ ಜೀವಬಿಟ್ಟಿದ್ದಾಳೆ. ಮಂಡ್ಯದ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪತಿ ಗಿರೀಶ್​ನ ವೈಭವ ಜಿಮ್​ನಲ್ಲೇ ಐದು ಗಂಟೆ ಸುಮಾರಿಗೆ ದಿವ್ಯಾ, ಸಾವಿನ ಹಾದಿ ತುಳಿದಿದ್ದಾಳೆ.

ಇದನ್ನೂ ಓದಿ:HSRP ನಂಬರ್​ ಪ್ಲೇಟ್​ ಅಪ್ಲೈ ಮಾಡೋ ಮುನ್ನ ಎಚ್ಚರ! ಚೂರು ಯಾಮಾರಿದ್ರೂ ಮೋಸ ಹೋಗ್ತೀರಾ!

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಿವ್ಯಾಳ ಕುಟುಂಬಸ್ಥರು, ಜಿಮ್​ನ ಒಳಭಾಗದಲ್ಲಿದ್ದ ಪೀಠೋಪಕರಣಗಳನ್ನ ಧ್ವಂಸಗೊಳಿಸಿದ್ರು. ತಕ್ಷಣ ಕೆಸ್ತೂರು ಠಾಣೆ ಪೊಲೀಸರು, ಸಂಬಂಧಿಕರನ್ನ ಹೊರಕ್ಕೆ ಕಳುಹಿಸಿದ್ರು. ಮನೆಯಿಂದಲೇ ದಿವ್ಯಾಳನ್ನ ಕರೆತಂದು ನೇಣು ಹಾಕಿದ್ದಾರೆ. ಇದಕ್ಕೆ ಗಿರೀಶ್ ಹಾಗು ಆಕೆಯ ತಾಯಿ ಕಾರಣ. ಇಬ್ಬರನ್ನು ಕೂಡಲೇ ಬಂಧಿಸುವಂತೆ ದಿವ್ಯಾಳ ಕುಟುಂಬಸ್ಥರು ಆಗ್ರಹಿಸಿದ್ರು.

publive-image

ಇನ್ನೂ ಈ ಜಿಮ್​ ಹೆಸರಿಗೆ ಗಿರೀಶ್​ನದ್ದೇ ಆಗಿದ್ರು.. ಜಿಮ್​ಗೆ ಹಣ ಕೊಟ್ಟಿದ್ದು ಮಾತ್ರ ದಿವ್ಯ ಮನೆಯವ್ರೆ. ದಿವ್ಯಾ 7 ವರ್ಷದ ಕೆಳಗೆ ಗಿರೀಶ್​ನನ್ನ ವಿವಾಹವಾಗಿದ್ರು. ಆದರೆ ಇತ್ತೀಚಿಗೆ ‌ದಿವ್ಯಾ ಪತಿ ಗಿರೀಶ್, ಅದೊಬ್ಬ ಯುವತಿ ಜೊತೆ ಅಕ್ರಮ ಸಂಬಂಧದಲ್ಲಿದ್ದನಂತೆ ದಿವ್ಯಾಳಿಗೆ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದನಂತೆ.. ಈ ವಿಚಾರ ಕುಟುಂಬಸ್ಥರ ಬಳಿ ದಿವ್ಯಾ ಹೇಳ್ಕೊಂಡಿದ್ಲಂತೆ. ಈ ವಿಚಾರವಾಗಿ ರಾಜೀ ಪಂಚಾಯತಿ ಸಹ ನಡೆದಿದೆ.

ಅಂದ್ಹಾಗೆ ಘಟನೆ ನಂತ್ರ ದಿವ್ಯಾ ಪತಿ ಗಿರೀಶ್ ಎಸ್ಕೇಪ್ ಆಗಿದ್ದಾನೆ. ಕೌಟುಂಬಿಕ ಕಲಹದಿಂದ ದುಡುಕಿನ ನಿರ್ಧಾರ ತೆಗೆದುಕೊಂಡ ದಿವ್ಯಾ ಕೇಸ್, ಕೆಸ್ತೂರು ಠಾಣೆಯಲ್ಲಿ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment