/newsfirstlive-kannada/media/post_attachments/wp-content/uploads/2025/06/Shreyas_Iyer-1.jpg)
ಶ್ರೇಯಸ್ ಅಯ್ಯರ್ ಸದ್ಯ ಭಾರತೀಯ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. 10 ದಿನದಲ್ಲಿ 2 ಫೈನಲ್ ಆಡಿದ್ರೂ, ಕಪ್ ಗೆಲ್ಲದ ನತದೃಷ್ಟ. ಆದ್ರೀಗ ಇದೇ ಶ್ರೇಯಸ್ ಅಯ್ಯರ್ಗೆ ಎರಡು ಮಕ್ಕಳಿದ್ದಾರಾ, ಮದುವೆ ಆಗಿದೆಯಾ ಎಂಬ ಪ್ರಶ್ನೆ ಹರಿದಾಡ್ತಿದೆ. ಅಷ್ಟಕ್ಕೂ ಈ ಪ್ರಶ್ನೆ ಹುಟ್ಟಿಕೊಂಡಿದ್ದೇಕೆ?.
ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಕಳೆದೊಂದು ವರ್ಷದಿಂದ ಭಾರತೀಯ ಕ್ರಿಕೆಟ್ ಲೋಕದ ಹಾಟ್ ಟಾಪಿಕ್ ಪ್ಲೇಯರ್. ಆನ್ಫೀಲ್ಡ್ ಆಟದಿಂದಲೇ ಹೆಚ್ಚು ಸದ್ದು ಮಾಡಿದ್ದ ಶ್ರೇಯಸ್ ಅಯ್ಯರ್. ಸದ್ಯ ಯಶಸ್ಸಿನ ಉತ್ತುಂಗದಲ್ಲೇ ಇದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಐಪಿಎಲ್ ಆ್ಯಂಡ್ ಮುಂಬೈ ಟಿ20 ಲೀಗ್.
ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಫೈನಲ್ಗೆ ಮುನ್ನಡೆಸಿದ್ದ ಈ ಶೇರ್, ಮುಂಬೈ ಟಿ20 ಲೀಗ್ನಲ್ಲೂ ಮುಂಬೈ ಫಾಲ್ಕನ್ಸ್ ತಂಡದ ನಾಯಕನಾಗಿ ಫೈನಲ್ಗೆ ಕೊಂಡೊಯ್ದಿದ್ರು. ಆದ್ರೆ, ದುರಾದೃಷವಶಾತ್, ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಒಂದು ವಾರದಿಂದ ಇದೇ ವಿಚಾರವಾಗಿ ಸುದ್ದಿಯಾಗಿ ಅಭಿಮಾನಿಗಳ ಮನ ಗೆದ್ದ ಈ ಬ್ಯಾಚುಲರ್ ಶ್ರೇಯಸ್ ಅಯ್ಯರ್, ಬಿಗ್ ಸ್ಟಾರ್ ಆಗುವಂತಲೇ ಹೆಜ್ಜೆ ಹಾಕಿದ್ದಾರೆ. ಇದೀಗ ಇದೇ ಶ್ರೇಯಸ್ ಅಯ್ಯರ್ ಬಗ್ಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಲ್ವಾ ಅಯ್ಯರ್..?
ಶ್ರೇಯಸ್ ಅಯ್ಯರ್ ಆನ್ ಫೀಲ್ಡ್ನಲ್ಲೇವ ಅಲ್ಲ. ಆಫ್ ದಿ ಫೀಲ್ಡ್ನಲ್ಲೂ ಕೂಲ್ ಆ್ಯಂಡ್ ಕಾಮ್. ವಿವಾದಗಳಿಂದ ಸದಾ ದೂರ ಉಳಿಯುವ ಆಟಗಾರ. ಆದ್ರೆ, ಇಲ್ಲೊಬ್ಬ ನಟಿ ಶಾಕಿಂಗ್ ವಿಷ್ಯ ಹೇಳಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್, ನನ್ನಿಬ್ಬರ ಮಕ್ಕಳ ತಂದೆ ಎಂದು ಬಹಿರಂಗವಾಗೇ ಹೇಳಿಕೊಂಡಿದ್ದಾಳೆ. ಅಂದ್ಹಾಗೆ ಆಕೆ ಬೇಱರು ಅಲ್ಲ ನಟಿ ಎಡಿನ್ ರೋಸ್.
ನಾನು ನನ್ನ ಮನಸಲ್ಲೇ ಮದುವೆ ಆಗಿಬಿಟ್ಟಿದ್ದೇನೆ, ನಾನು ಅವರ, ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದೇನೆ ಎಂದು ಅನಿಸುತ್ತದೆ. ಹೀಗೆ ಭ್ರಮೆಯಲ್ಲೇ ಇದ್ದೇನೆ.
ಎಡಿನ್ ರೋಸ್, ನಟಿ
ಕನಸಿನಲ್ಲೇ ಮದುವೆಯಾಗಿರುವುದಾಗಿ ಹೇಳಿಕೊಂಡಿರುವ ಈಕೆ, ಶ್ರೇಯಸ್ ಅಯ್ಯರ್ನ ಇಷ್ಟ ಪಡಲು ಕಾರಣಗಳನ್ನು ಬಹಿರಂಗ ಪಡಿಸಿದ್ದಾರೆ.
ಒಳ್ಳೆಯ ಎತ್ತರ, ಆಕರ್ಷಕ ಗುಣಗಳು, ಉತ್ತಮ ಮೈಕಟ್ಟು ಇದೆ. ಗಡ್ಡ ಹೊಂದಿದ್ದಾರೆ. ಇವೆಲ್ಲವೂ ನನಗೆ ಇಷ್ಟವಾಗುವ ಗುಣಗಳು. ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಾರೆ. ಇನ್ನೇನು ಬೇಕು? ಶ್ರೇಯಸ್ ದಕ್ಷಿಣ ಭಾರತೀಯರಾಗಿರುವುದು ಇನ್ನೊಂದು ಒಳ್ಳೆಯ ಸಂಗತಿ. ನನ್ನ ಕನಸಿನಲ್ಲಿ, ನಾನು ಶ್ರೇಯಸ್ ಅಯ್ಯರ್‌ರನ್ನ ಮದುವೆಯಾಗಿದ್ದೇನೆ. ಮಕ್ಕಳಿಗೆ ತಾಯಿಯಾಗಿರುವೆ ಎಂದು ಭಾವಿಸುತ್ತೇನೆ.
ಎಡಿನ್ ರೋಸ್, ನಟಿ
ಈಕೆ ಶ್ರೇಯಸ್ ಅಯ್ಯರ್ ಹುಚ್ಚು ಅಭಿಮಾನಿಯಾಗಿದ್ದು, ಅಯ್ಯರ್ ಮೇಲಿರುವ ಭಾವನೆಗಳನ್ನೆಲ್ಲಾ ಸಂದರ್ಶನದಲ್ಲಿ ಹೊರಗಾಕಿದ್ದಾರೆ. ಆದ್ರೆ, ಇದೇ ಮಾತುಗಳು ಅಭಿಮಾನಿಗಳನ್ನು ಗೊಂದಲಕ್ಕೂ ದೂಡಿತ್ತು. ನಿಜಕ್ಕೂ ಇವರಿಬ್ಬರ ನಡುವೆ ಏನಾದ್ರೂ ನಡೀತಿದೆಯಾ ಎಂಬ ಪ್ರಶ್ನೆಯ ಜೊತೆಗೆ ಕುತೂಹಲವನ್ನು ಹುಟ್ಟಿಹಾಕಿತ್ತು.
ಯಾರು ಈ ಎಡಿನ್ ರೋಸ್..? ಕರ್ನಾಟಕಕ್ಕೂ ಈಕೆಗೆ ಏನು ನಂಟು.?
ಎಡಿನ್ ರೋಸ್, ಆಗಸ್ಟ್ 20, 1998ರಂದು ಜನಿಸಿದ ಈಕೆ ಮೂಲತಃ ದುಬೈನವರು. 2020ರಲ್ಲಿ ಭಾರತಕ್ಕೆ ಬಂದು ನೆಲೆಸಿದ್ದಾರೆ. ತಂದೆ ತಮಿಳುನಾಡು ಮೂಲದವರಾಗಿದ್ರೆ. ತಾಯಿ ಮೂಲತಃ ಕರ್ನಾಟಕದವರು. ಹೀಗಾಗಿ ಕರ್ನಾಟಕದ ನಂಟು ಈಕೆಗಿದೆ. ಆರಂಭದಲ್ಲಿ ಮಾಡೆಲ್ ಆಗಿದ್ದ ಎಡಿನ್ ರೋಸ್, ಸೋಶಿಯಲ್ ಮೀಡಿಯಾದ ಪ್ರಚಾರದಿಂದಲೇ ಸಿನಿಮಾದಲ್ಲಿ ಅವಕಾಶ ಪಡೆದವಳು.
2023ರಲ್ಲಿ ರವಿತೇಜಾ ನಟನೆಯ ರಾವಣಾಸುರ ಎಂಬ ತೆಲುಗು ಸಿನಿಮಾದಲ್ಲಿ ಐಟಮ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದ ಈಕೆ, ಬೋಲ್ಡ್ ಪರ್ಸನಾಲಿಟಿಯಿಂದಲೇ ಹಿಂದಿಯ ಬಿಗ್ ಬಾಸ್ ಸೀಸನ್-18ಕ್ಕೆ ಎಂಟ್ರಿ ನೀಡಿ ಗಮನ ಸೆಳೆದಿದ್ದಳು.
ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ಸ್ಥಾನ ಫಿಕ್ಸ್.. ಕನ್ನಡಿಗನ ಹಠ, ಪರಿಶ್ರಮಕ್ಕೆ ಫಲ ಸಿಗುತ್ತಾ?
ಅಭಿಮಾನವಾ..? ಅಂಧಾಭಿಮಾನವಾ..? ಪ್ರಚಾರದ ಗೀಳಾ..?
ಎಡಿನ್ ರೋಸ್, ಬೋಲ್ಡ್ ಹಾಗೂ ರೊಮ್ಯಾಟಿಂಗ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿದ್ದಾರೆ. ಮೊದಲೇ ಪ್ರಚಾರದ ಗೀಳು ಹೊಂದಿರುವ ಈಕೆ, ನಿಜಕ್ಕೂ ಶ್ರೇಯಸ್ ಮೇಲಿನ ಅಂಧಾಭಿಮಾನಕ್ಕೆ ಬೋಲ್ಡ್ ಸ್ಟೇಟ್ಮೆಂಟ್ ನೀಡಿದ್ರಾ? ಇಲ್ಲ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಕಾರಣಕ್ಕೆ ಶ್ರೇಯಸ್ ಹೆಸರು ಪ್ರಸ್ತಾಪಿಸಿ ಪ್ರಚಾರದ ಮೈಲೆಜ್ ಪಡೆಯಲು ಇಂಥದ್ದೊಂದು ಹೇಳಿಕೆ ನೀಡಿದ್ರಾ ಎಂಬ ಅನುಮಾನವೂ ಇದರ ಸುತ್ತು ಸುತ್ತುತ್ತಿದೆ.
ಕ್ರಿಕೆಟಿಗರ ಹಾಗೂ ನಟ, ನಟಿಯರ ನಡುವಿನ ಗಾಸಿಪ್.. ಸಿನಿಮಾ ಮಂದಿಯ ಪ್ರಚಾರಕ್ಕೆ ಕ್ರಿಕೆಟಿಗರ ಬಳಕೆ ಸರ್ವೇ ಸಾಮಾನ್ಯ. ಆದ್ರೆ, ಈ ಪ್ರಚಾರಕ್ಕಾಗಿ ಮತ್ತೊಬ್ಬರು ಮುಜುಗರಕ್ಕೀಡಾಗುವಂತ ಹೇಳಿಕೆ ನೀಡುವುದು ನಿಜಕ್ಕೂ ಸರಿಯಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ