Advertisment

ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು

author-image
Bheemappa
Updated On
ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು
Advertisment
  • ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ, ಎಚ್ಚರಿಕೆ
  • ಮುಂಗಾರು ಮಳೆ ಅಬ್ಬರಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು
  • ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ, 48 ಗಂಟೆಗಳ ರೆಡ್ ಅಲರ್ಟ್

ಕಳೆದ ವರ್ಷ ದೇವಭೂಮಿ ಉತ್ತರಾಖಂಡ್​ನ ತತ್ತರಿಸುವಂತೆ ಮಾಡಿದ್ದ ಮಳೆರಾಯ ಈ ಬಾರಿ ಆತಂಕ ಸೃಷ್ಟಿಸಿದ್ದಾನೆ. ಅತ್ತ ಮಳೆ ನಿಂತ್ರು ಮಳೆ ಹನಿ ನಿಂತಿಲ್ಲ ಅನ್ನೋ ಹಾಗೆ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತಗ್ಗದೇ 24 ಲಕ್ಷ ಜನರ ಬದುಕನ್ನ ಮುರಾಬಟ್ಟೆ ಮಾಡಿದೆ. ರಾಜಸ್ಥಾನದಲ್ಲೂ ವರುಣ ರೌದ್ರ ನರ್ತನ ಮೆರೆಯುತ್ತಿದ್ದು, ಮರುಭೂಮಿಯ ನಾಡು ಮಳೆನಾಡಾಗಿ ಬದಲಾಗಿದೆ.

Advertisment

ಮಳೆಗಾಲ ಬಂತೆಂದ್ರೆ ಜೀವ ಕೈಯಲ್ಲಿ ಹಿಡಿದು ದಿನಕಳೆಯೋ ದೇವಭೂಮಿ ಉತ್ತಾರಖಂಡ್​ ಜನತೆಗೆ ಈ ಬಾರಿಯೂ ಮಳೆರಾಯ ನಡುಕ ಹುಟ್ಟಿಸಿದ್ದಾನೆ. ಕಳೆದ ವರ್ಷ ವರುಣಾರ್ಭಟಕ್ಕೆ ಬೆಚ್ಚಿಬಿದ್ದಿದ್ದ ಉತ್ತರಾಖಂಡ್​ ಈಗಲೂ ತಲ್ಲಣಗೊಂಡಿದೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

publive-image

ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಗಂಗಾ ನದಿ

ಧಾರಾಕಾರ ಮಳೆಗೆ ಉತ್ತರಾಖಂಡದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಜನ ಕಂಗಾಲಾಗಿ ಹೋಗಿದ್ದಾರೆ. ಅಲಕನಂದಾ ನದಿಯ ರಭಸಕ್ಕೆ ಉತ್ತರಾಖಂಡದ ರಾಮನಗರದಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ನೀರುಪಾಲಾಗಿ ಹೋಗಿದೆ. ಋಷಿಕೇಶದಲ್ಲಿ ಗಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಸಾರ್ವಜನಿಕರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Advertisment

ಉತ್ತರಾಖಂಡದಲ್ಲಿ 100ಕ್ಕೂ ಹೆಚ್ಚು ರಸ್ತೆಗಳು ಬಂದ್

ಮಳೆ ಅಬ್ಬರಕ್ಕೆ ಉತ್ತರಾಖಂಡದ ಹಲವೆಡೆ ಭೂಕುಸಿತ ಉಂಟಾಗಿದ್ದು ರಾಜ್ಯದ 100ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ಇಂದು ಸಹ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, 48 ಗಂಟೆಗಳ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಋಷಿಕೇಶ ಮತ್ತು ಬದ್ರಿನಾಥ ದೇವಾಲಯಕ್ಕೆ ತೆರಳುವ ರಸ್ತೆಯನ್ನ ಬಂದ್​ ಮಾಡಲಾಗಿದೆ. ಇದಲ್ಲದೆ ಇಂದು ಒಂದು ದಿನದ ಮಟ್ಟಿಗೆ ಚಾರ್​ ಧಾಮ್​ ಯಾತ್ರೆಯನ್ನೂ ಸ್ಥಗಿತಗೊಳಿಸಲಾಗಿದೆ.

ರಾಜಸ್ಥಾನದಲ್ಲೂ ಮಳೆರಾಯನ ರೌದ್ರನರ್ತನ

ಮರುಭೂಮಿ ನಾಡು ರಾಜಸ್ಥಾನದಲ್ಲೂ ಮಳೆ ಅಬ್ಬರ ಜೋರಾಗಿದ್ದು ಬರಾನ್ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬರಾನ್​ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮನೆಗಳು ಜಲಾವೃತವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬರಾನ್ ಜಿಲ್ಲೆಯಲ್ಲಿ ಇಂದು ರೆಡ್​​ ಅಲರ್ಟ್​ ಘೋಷಣೆ ಮಾಡಲಾಗಿದೆ. ಕೋಟಾ ಜಿಲ್ಲೆಯ ಖತೋಲಿ ಬಳಿಯ ಪಾರ್ವತಿ ನದಿ ಉಕ್ಕಿಹರಿಯುತ್ತಿದ್ದು ಸೇತುವೆಯ ಜಲಾವೃತವಾಗಿರೋ ಕಾರಣ ರಾಜಸ್ಥಾನ ಮತ್ತು ಮಧ್ಯಪ್ರದೇಶ ನಡುವಿನ ಸಂಪರ್ಕ ಕಡಿತಗೊಂಡಿದೆ.

ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಭಾರೀ ಅನಾಹುತ ಸಂಭವಿಸಿದೆ. ಕಳೆದ 24 ಗಂಟೆಯಲ್ಲಿ ಪ್ರತ್ಯೇಕ ಮಳೆ ಅವಘಡಗಳಲ್ಲಿ 13ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಯೋಧ್ಯೆಯ ಸರಯೂ ನದಿಯಲ್ಲೂ ನೀರಿನ ಮಟ್ಟ ಹೆಚ್ಚಳವಾಗಿದೆ. ಅಸ್ಸಾಂನಲ್ಲಿ ಮಳೆ ನಿಂತರೂ, ಪ್ರವಾಹ ಪರಿಸ್ಥಿತಿ ಮಾತ್ರ ತಗ್ಗಿಲ್ಲ.. ಪ್ರವಾಹದ ಪಾಶಕ್ಕೆ ಅಸ್ಸಾಂನ 30 ಜಿಲ್ಲೆಗಳಲ್ಲಿ 24 ಲಕ್ಷ ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ 90ಕ್ಕೂ ಹೆಚ್ಚು ಕಾಡುಪ್ರಾಣಿಗಳು ಕೂಡ ವರುಣಾರ್ಭಟಕ್ಕೆ ಬಲಿಯಾಗಿದ್ದಾರೆ.

Advertisment

ಇದನ್ನೂ ಓದಿ: ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು


">July 6, 2024

ಚಾರ್ಮಾಡಿ ಘಾಟ್​ನಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್

ಮುಂಗಾರು ಮಳೆ ಅಬ್ಬರಕ್ಕೆ ಚಿಕ್ಕಮಗಳೂರಿನ ಚಾರ್ಮಡಿ ಘಾಟ್​ ರಸ್ತೆಯ ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು ಸೃಷ್ಟಿಯಾಗಿವೆ. ಹೀಗಾಗಿ ಘಾಟ್​ನ ಸೌಂದರ್ಯವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳ್ತಿದ್ದು, ಜಲಪಾತಗಳ ಮುಂದೆ ಅಪಾಯವನ್ನೂ ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸಿಕ್ಕೊಳಲು ಮುಂದಾಗ್ತಿದ್ದಾರೆ. ಈ ಹಿನ್ನೆಲೆ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಚಾರ್ಮಾಡಿ ಘಾಟ್​ನ ರಸ್ತೆಯಲ್ಲಿ ಪ್ರವಾಸಿಗರು ವಾಹನಗಳನ್ನ ನಿಲ್ಲಿಸದಂತೆ ಸೂಚಿಸಲಾಗಿದೆ. ಜಲಪಾತದ ಬಳಿಯೇ ಹೈವೇ ಪಟ್ರೋಲ್​ ಪೊಲೀಸರು ಮೊಕ್ಕಾಂ ಹೂಡಿದ್ದು ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕ್ತಿದ್ದಾರೆ.

Advertisment

ಇಡೀ ದೇಶದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಕೆಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಜನರು ಕೂಡ ಎಚ್ಚರಿಕೆಯಿಂದ ಇರಬೇಕು..


">July 6, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment