ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

author-image
Ganesh Nachikethu
Updated On
ಬೆಂಗಳೂರಿಗೆ ಮಳೆ ಬರೋದು ಯಾವಾಗ? ಒಂದು ವಾರದಿಂದ ಉರಿ ಬಿಸಿಲು.. ದಾಖಲೆಯ ತಾಪಮಾನ..!
Advertisment
  • ಈ ವರ್ಷ ಬೆಂಗಳೂರು ಬಹುದಿನಗಳ ಕಾಲ ಸಖತ್‌ ಹಾಟ್ ಸಿಟಿ ಆಗುತ್ತೆ
  • ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 40 ಡಿಗ್ರಿ ಉಷ್ಣಾಂಶ ದಾಖಲಾಗೋ ಸಾಧ್ಯತೆ
  • ಮುಂದಿನ 2 ತಿಂಗಳು ಬಿಸಿಲ ಬೇಗೆಯಿಂದ ಬಳಲುವ ವಾತಾವರಣ ಗ್ಯಾರಂಟಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವರ್ಷ ಪೂರ್ತಿ ಒಂದೇ ರೀತಿಯ ವಾತಾವರಣ ಇರುವ ಸುಂದರ ನಗರ. ಅದಕ್ಕೆ ಇದನ್ನ ಗಾರ್ಡನ್ ಸಿಟಿ ಅಂತ ಕರೆಯಲಾಗುತ್ತೆ. ಆದ್ರೀಗ ಉದ್ಯಾನನಗರಿ ಸಖತ್‌ ಹಾಟ್ ಸಿಟಿಯಾಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರು ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಿದೆ.

publive-image

ಮುಂದಿನ ಒಂದು ವಾರ ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇಷ್ಟು ದಿನ ಬಿಸಿಲ ವಾತಾವರಣ ಇರುವ ನಗರಿಗೆ ಇನ್ಮುದೆ ಬಿಸಿ ಗಾಳಿ ಸೃಷ್ಟಿಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬರೀ ಒಂದು ವಾರ ಅಷ್ಟೇ ಅಲ್ಲ ಮುಂದಿನ ಎರಡು ತಿಂಗಳು ಬಿಸಿಲ ಬೇಗೆಯಿಂದ ಬಳಲು ಸಿಲಿಕಾನ್ ಸಿಟಿಯ ಜನ ಸಿದ್ಧರಾಗಬೇಕು ಎನ್ನಲಾಗಿದೆ.

ಮುಂದಿನ ವಾರ ಹೇಗಿರಲಿದೆ ಉಷ್ಣಾಂಶ?

ಮಾರ್ಚ್ 10ರಿಂದ 17ರವರೆಗೂ ಅತ್ಯಧಿಕ ತಾಪಮಾನ ಬೆಂಗಳೂರನ್ನು ಆವರಿಸಲಿದೆ. ಪ್ರತಿದಿನ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಸಿಲಿಕಾನ್ ಸಿಟಿಯಲ್ಲದೇ ಇಡೀ ಕರುನಾಡಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ರೂ ಬೆಂಗಳೂರಿನಲ್ಲಿ ಮಳೆ ಸುಳಿವು ನೀಡಿಲ್ಲ. ಹೀಗಾಗಿ ಬೆಂಗಳೂರಲ್ಲಿ ಇನ್ನೊಂದು ವಾರ ಉಷ್ಣಾಂಶ ಹೆಚ್ಚಾಗಲಿದೆ.

publive-image

ಬೆಂದಕಾಳೂರಿಗೆ ಕಾರಣವೇನು?

ಉದ್ಯಾನನಗರಿ ಬೆಂಗಳೂರಲ್ಲಿ ಇಷ್ಟು ಬಿಸಿಲಿನ ಶಾಖ ಹೆಚ್ಚಾಗಲು ಕಾರಣ ಏನು ಅಂತ ನೋಡೋದಾದ್ರೆ, ಅತಿಯಾದ ತಾಪಮಾನ, ಮಳೆ ಕೊರತೆ, ಅಂತರ್ಜಲ ಕುಸಿತವೇ ಪ್ರಮುಖವಾಗಿದೆ. ಬೆಂಗಳೂರಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದರ ಜೊತೆಗೆ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment