ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

author-image
Bheemappa
Updated On
ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!
Advertisment
  • ಚಾಲುಕ್ಯರ ನಾಡಿನ ಹುಲಿಗೆಮ್ಮನಕೊಳ್ಳದ ಜಲಪಾತಕ್ಕೆ ಬಂತು ಜೀವಕಳೆ
  • ಜೋರು ಮಳೆ, ಬೈಕ್ ಸವಾರರು, ಬೀದಿ ಬದಿ ವ್ಯಾಪಾರಸ್ಥರಿಗೆ ಸಮಸ್ಯೆ
  • ಮಳೆಯಿಂದ ಕೃಷ್ಣಾ ನದಿ ಜಲಾಶಯದ ಇಂದಿನ ನೀರಿನಮಟ್ಟ ಹೇಗಿದೆ?

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾರ್ಭಟದಿಂದ ಅವಾಂತರಗಳು ಮುಂದುವರೆದಿದೆ. ಎಲ್ಲೆಲ್ಲಿ ಏನ್​ ಏನ್​ ಆಗಿದೆ ಅನ್ನೋ ಡೀಟೇಲ್ಸ್​ ಇಲ್ಲಿದೆ.

ಜೀವ ಕಳೆ ಪಡೆದ ಹುಲಿಗೆಮ್ಮನಕೊಳ್ಳದ ಜಲಪಾತ

ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸತತ ಮಳೆಯಿಂದ ಚಾಲುಕ್ಯರ ನಾಡಲ್ಲಿರೋ ಹುಲಿಗೆಮ್ಮನಕೊಳ್ಳದ ಜಲಪಾತಕ್ಕೆ ಜೀವ ಕಳೆ ಬಂದಿದ್ದು, ಪ್ರಕೃತಿ ಸೌಂದರ್ಯ ಇಮ್ಮಡಿಗೊಳಿಸಿದೆ. ಅತ್ತ ಮಹಾರಾಷ್ಟ್ರದಲ್ಲಿ ಮಳೆರಾಯನ ಕರುಣೆಯಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಹಿಪ್ಪರಗಿ ಬ್ಯಾರೇಜ್ ಒಳಹರಿವು ಹೆಚ್ಚಳವಾಗಿದೆ. ಸದ್ಯ ಮಿತಿ 20,700 ಕ್ಯೂಸೆಕ್ ಒಳಹರಿವು, 16,300 ಕ್ಯೂಸೆಕ್ ಹೊರ ಹರಿವು ಇದೆ. 6 ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್ ನಲ್ಲಿ 1.83 ಟಿಎಂಸಿ ನೀರು ಸಂಗ್ರಹಣೆಯಾಗಿದೆ.

publive-image

ಮಲೆನಾಡಿನಂತಾದ ಕೊಪ್ಪಳ ಜಿಲ್ಲೆಯ ವಾತಾವರಣ

ಕೊಪ್ಪಳದ ವಾತಾವರಣ ಕೂಡ ಮಲೆನಾಡಿನಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೆ ಮಳೆ ನೀರು ಹರಿಯುತ್ತಿದ್ದು, ಸವಾರರು, ಬೀದಿ ವ್ಯಾಪಾರಸ್ಥರ ವ್ಯಾಪಾರ ಅಸ್ತವ್ಯಸ್ತವಾಗಿದೆ.

ಹೆಚ್ಚಿದ ಒಳಹರಿವು, ಕೃಷ್ಣಾ ನದಿ ಪಾತ್ರದ ಜನರಲ್ಲಿ ಸಂತಸ

ನಿರಂತರ ಮಳೆಯಿಂದಾಗಿ ಮುಂಗಾರು ಆರಂಭದಲ್ಲೇ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನೇ ದಿನೇ ಹೆಚ್ಚಾಗಿದೆ. ನಿನ್ನೆ 21,251 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರ ಸಂತಸ ವ್ಯಕ್ತಿಪಡಿಸಿದ್ದಾರೆ. ನಿನ್ನೆವರೆಗೆ 23,471 ಟಿಎಂಸಿ ನೀರು ಸಂಗ್ರಹವಾಗಿದೆ.

publive-image

ಕಲಬುರಗಿಯಲ್ಲಿ ಮಳೆ, ಹಳ್ಳ-ಕೊಳ್ಳ ಫುಲ್, ಪರದಾಟ

ಕಲಬುರಗಿಯ ಜೇವರ್ಗಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಯಡ್ರಾಮಿ ತಾಲೂಕಿನ ವರವಿ-ಕುಕನೂರು ಮಾರ್ಗದಲ್ಲಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಗ್ಗ ಹಿಡಿದು ಹಳ್ಳ ದಾಟಲು ಗ್ರಾಮಸ್ಥರ ಹರಸಾಹಸ ಪಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತಿದ್ದಾರೆ ಇಲ್ಲಿನ ಜನ.

ನಿರಂತರ ಮಳೆಗೆ ತೇವಗೊಂಡು ಕುಸಿದ ಮೇಲ್ಚಾವಣಿ!

ನಿರಂತರ ಮಳೆಗೆ ತೇವಗೊಂಡು ಮೇಲ್ಛಾವಣಿ ಕುಸಿದಿದೆ. ಮಲಗಿದ್ದ ವೃದ್ಧನ ಮೇಲೆ ಮೇಲ್ಚಾವಣಿ ಕುಸಿದ ಪರಿಣಾಮ ಅಡಿಯಲ್ಲಿ ಸಿಲುಕಿದ್ದ ವೃದ್ಧ ನರಳಾಡಿದ್ದಾನೆ. ಇನ್ನೂ ಮಣ್ಣಿನ ಅಡಿ ಸಿಲುಕಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ರಾಮಣ್ಣ ಶಿಂಧೆ ಎಂಬ 85 ವರ್ಷದ ವೃದ್ಧನಿಗೆ ಯುವಕರು ಮರು ಜೀವ ನೀಡಿದ ಘಟನೆ ಗದಗ ನಗರದ ಖಾನತೋಟದಲ್ಲಿ ನಡೆದಿದೆ. ರಕ್ಷಣೆ ಮಾಡಿದ ವೃದ್ಧನನ್ನ ಆಟೋ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment