ಭಿಕ್ಷೆ ಬೇಡಿದ್ದ ಪಾಕಿಸ್ತಾನಕ್ಕೆ IMF ಆಸರೆ​; 19 ಸಾವಿರ ಕೋಟಿ ಸಾಲ ಮಂಜೂರು..!

author-image
Ganesh
Updated On
ಲಂಡನ್​​ನಲ್ಲಿ ಕೂತು ಹೊಂಚು.. ಭಾರತದ ಮೇಲೆ ದಾಳಿಗೆ ಪ್ಲಾನ್ ರೂಪಿಸಿದ ಮಾಸ್ಟರ್​ ಮೈಂಡ್​ ರಿವೀಲ್..!
Advertisment
  • ಭಾರತದ ತೀವ್ರ ವಿರೋಧದ ನಡುವೆಯೂ ಸಾಲ
  • ಪಾಕ್ ಗಡಿಯಾಚೆಗಿನ ಭಯೋತ್ಪಾದನೆಗೆ ಆನೆಬಲ
  • ಭಾರತದ ಮೇಲೆ ದಾಳಿ ಮುಂದುವರಿಸಿರುವ ಪಾಕ್

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ ಸಾಲ ನೀಡಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 19 ಸಾವಿರ ಕೋಟಿ ರೂಪಾಯಿ ಆಗಿದೆ!

ಪಾಕಿಸ್ತಾನಕ್ಕೆ ಸಾಲ ನೀಡದಂತೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಭಾರತದ ವಿರೋಧದ ನಡುವೆಯೂ ಐಎಂಎಫ್​, 1 ಬಿಲಿಯನ್ ಡಾಲರ್‌ ಹಣ ನೀಡಲು ಅನುಮೋದಿಸಿದೆ. ಸಾಲ ಸಿಕ್ಕ ಬೆನ್ನಲ್ಲೇ ಮಾಹಿತಿ ಪ್ರಕಟಿಸಿರುವ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪಾಕ್​ ವಿಫಲ ಡ್ರೋಣ್ ದಾಳಿ.. ಗುರಿ ಮುಟ್ಟವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ

ಪಾಕಿಸ್ತಾನಕ್ಕೆ ಹೊಸದಾಗಿ 2.3 ಬಿಲಿಯನ್ ಡಾಲರ್ ಸಾಲ ನೀಡುವ ಐಎಂಎಫ್ ಪ್ರಸ್ತಾವನೆಯನ್ನು ಭಾರತ ವಿರೋಧಿಸಿತ್ತು. ಈ ಹಣವನ್ನು ಪಾಕ್ ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸಿಕೊಳ್ಳಲಿದೆ. ಹೀಗಾಗಿ ಪಾಕ್​​ಗೆ ಹಣ ನೀಡಬಾರದು ಎಂದಿತ್ತು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಹತ್ವದ ಸಭೆಯಲ್ಲಿ ಭಾರತ ಮತದಾನದಿಂದ ದೂರ ಉಳಿದಿತ್ತು. ಮತದಾನದ ಫಲಿತಾಂಶಗಳು ಪಾಕಿಸ್ತಾನದ ಪರವಾಗಿದ್ದವು. ಅದಕ್ಕೆ IMF ಸಾಲವನ್ನು ನೀಡಿದೆ.

ಇದನ್ನೂ ಓದಿ: 3 ರಾಜ್ಯ, 26 ಸ್ಥಳ! ಪಾಕಿಸ್ತಾನ ಮತ್ತೆ ಪುಂಡಾಟ.. ನಿನ್ನೆ ರಾತ್ರಿ ಏನೆಲ್ಲ ನಡೆದು ಹೋಯಿತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment