/newsfirstlive-kannada/media/post_attachments/wp-content/uploads/2024/06/Murder.jpg)
ಚಿತ್ರದುರ್ಗ: ಅನೈತಿಕ ಸಂಬಂಧ ಹಿನ್ನೆಲೆ ಪತ್ನಿಯೇ ತನ್ನ ಪತಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಕಂಬದೇವರಹಟ್ಟಿಯಲ್ಲಿ ಈ ಘಟನೆ ನಡೆದಿದೆ.
ಕೃಷ್ಣಪ್ಪ (46) ಪತ್ನಿ ಕಮಲಮ್ಮನಿಂದ ಕೊಲೆಯಾದ ಪತಿ. ಹೊಳಲ್ಕೆರೆ ಪೊಲೀಸರು ಆರೋಪಿ ಕಮಲಮ್ಮ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Aadhaar ಅಪ್ಡೇಟ್ ಮಾಡಿಲ್ವಾ? ಆನ್ಲೈನ್ನಲ್ಲಿ ಉಚಿತವಾಗಿ ಮಾಡ್ಬೋದು! ಹೇಗೆ ಗೊತ್ತಾ?
ಕಮಲಮ್ಮ ಮನೆಯ ಮುಂಭಾಗ ಮಲಗಿದ್ದ ಪತಿಯ ವೇಳೆ ತಡರಾತ್ರಿ ಕಲ್ಲು ಎತ್ತಿ ಹಾಕಿ ಹತ್ಯೆ ನಡೆಸಿದ್ದಾರೆ. ಸ್ಥಳಕ್ಕೆ ಚಿತ್ರದುರ್ಗ DYSP ದಿನಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ