ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರು ಓದಲೇಬೇಕಾದ ಸ್ಟೋರಿ!
ಪ್ರತಿನಿತ್ಯ ತಿರುಮಲಕ್ಕೆ ಬರುವ ಭಕ್ತರಿಗೆ TTDಯಿಂದ ಮಹತ್ವದ ಸೂಚನೆ
ಅಕ್ಟೋಬರ್ ತಿಂಗಳಲ್ಲಿ ಭಕ್ತರಿಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗೋ ಭೀತಿ
ವಿಶ್ವದ ಶ್ರೀಮಂತ ದೇವಾಲಯ, ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಭಕ್ತರಿಗೆ ನೀರಿನ ಕೊರತೆ ಎದುರಾಗಿದೆ. ಈ ಬಾರಿಯ ಮಳೆಗಾಲದಲ್ಲಿ ದೇಶದೆಲ್ಲೆಡೆ ಭರ್ಜರಿ ಮಳೆಯಾಗಿದೆ. ಆದರೆ ಆಂಧ್ರದ ತಿರುಮಲದಲ್ಲಿ ಮಾತ್ರ ಮಳೆಗಾಲದಲ್ಲೂ ವರುಣ ದೇವ ಮುನಿಸಿಕೊಂಡು ನೀರಿನ ಕೊರತೆಯಾಗಿದೆ.
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ.. ತಿರುಪತಿಯಲ್ಲಿ ಪುಷ್ಪ ಯಜ್ಞಕ್ಕೆ ಬರೋಬ್ಬರಿ 3000 ಕೆಜಿ ಹೂವುಗಳ ಬಳಕೆ!
ತಿರುಮಲಕ್ಕೆ ಪ್ರತಿ ನಿತ್ಯ ತಿಮ್ಮಪ್ಪನ ದರ್ಶನಕ್ಕಾಗಿ 50 ಸಾವಿರದಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಪ್ರತಿದಿನ ಲಕ್ಷಾಂತರ ಭಕ್ತರಿಗೆ 43 ಲಕ್ಷ ಗಾಲನ್ ನೀರಿನ ಅಗತ್ಯವಿದೆ. 1 ಗಾಲನ್ ಅಂದ್ರೆ 3.785 ಲೀಟರ್ ನೀರು. ಆದರೆ ಮಳೆಯ ಕೊರತೆಯಿಂದ 43 ಲಕ್ಷ ಗಾಲನ್ ನೀರು ನೀಡಲು ಸಾಧ್ಯವಾಗುತ್ತಿಲ್ಲ. ನಿತ್ಯ 18 ಲಕ್ಷ ಗಾಲನ್ ನೀರನ್ನು ಮಾತ್ರ ವಿವಿಧ ಕಡೆಯಿಂದ ಪಡೆಯಲಾಗುತ್ತಿದೆ.
ತಿರುಪತಿಯಲ್ಲಿ ಎದುರಾಗಿರುವ ಮಳೆಯ ಕೊರತೆಯಿಂದ ಮುಂದಿನ 4 ತಿಂಗಳಿಗಾಗುವಷ್ಟು ಮಾತ್ರ ನೀರಿದೆ. ತಿರುಮಲದಲ್ಲಿರುವ ಖಾಸಗಿ ಗೆಸ್ಟ್ ಹೌಸ್‌ಗಳಿಗೆ ಈಗಾಗಲೇ ನೀರಿನ ಪೂರೈಕೆ ಕಟ್ ಮಾಡಲಾಗಿದೆ. ಖಾಸಗಿ ಗೆಸ್ಟ್ ಹೌಸ್‌ಗಳು ಟ್ಯಾಂಕರ್ ಮೂಲಕವೇ ನೀರು ತರಿಸಿಕೊಳ್ಳಬೇಕು.
ಇದನ್ನೂ ಓದಿ: Tirupati: ತಿರುಪತಿ ಬೆಟ್ಟ ಹತ್ತುವ ಭಕ್ತರೇ ಎಚ್ಚರ; 6 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
TTDಯಿಂದ ಮಹತ್ವದ ಸೂಚನೆ
ತಿರುಮಲದಲ್ಲಿ ಎದುರಾಗಿರುವ ನೀರಿನ ಕೊರತೆಯಿಂದ ಭಕ್ತರಿಗೆ TTDಯಿಂದ ಮಹತ್ವದ ಸೂಚನೆ ನೀಡಲಾಗಿದೆ. ಇನ್ಮುಂದೆ ತಿರುಪತಿಗೆ ಆಗಮಿಸುವ ಭಕ್ತರು ನೀರನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಮನವಿ ಮಾಡಿಕೊಂಡಿದೆ. ಮುಂದಿನ ಅಕ್ಟೋಬರ್ 4ರಿಂದ 12ರವರೆಗೆ ತಿರುಮಲದಲ್ಲಿ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ನೀರಿನ ಸಮಸ್ಯೆ ಉಲ್ಭಣವಾಗುವ ಚಿಂತೆಯಲ್ಲಿ ಟಿಟಿಡಿ ಇದೆ.
ಮಳೆಗಾಗಿ ಪ್ರಾರ್ಥನೆ!
ಈ ಬಾರಿ ದೇಶಾದ್ಯಂತ ಮಳೆ ಭಾರೀ ಪ್ರಮಾಣದಲ್ಲಿ ಸುರಿದಿದೆ. ಆದರೂ ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ಕಡಿಮೆ ಮಳೆಯಾಗಿದೆ. ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಡಿಮೆ ಮಳೆಯಿಂದ ತಿರುಮಲದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ತಿರುಮಲಕ್ಕೆ ಭೇಟಿ ನೀಡುವ ಭಕ್ತರು ಈಗ ತಮ್ಮ ಸಮಸ್ಯೆ ನಿವಾರಣೆ ಜೊತೆಗೆ ಶೇಷಾಚಲಂನಲ್ಲಿ ಮಳೆಯಾಗಲೆಂದು ಪ್ರಾರ್ಥಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ