/newsfirstlive-kannada/media/post_attachments/wp-content/uploads/2024/02/pvr.jpg)
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್​ಗಳ ಟಿಕೆಟ್ ದರ ಬಲು ದುಬಾರಿ. ಇದರಿಂದ ಕರ್ನಾಟಕದಲ್ಲಿ ಬಹುಸಂಖ್ಯಾತರಾಗಿರುವ ಮಧ್ಯಮ ವರ್ಗ, ಕೆಳ ವರ್ಗದ ಜನರು ಮಲ್ಟಿಪ್ಲೆಕ್ಸ್ ನತ್ತ ಸುಳಿಯದಂತೆ ಆಗಿದೆ. ಮತ್ತೊಂದೆಡೆ ಗಾಂಧಿನಗರದ ಥಿಯೇಟರ್​ಗಳು ಕೂಡ ಬೇರೆ ಬೇರೆ ಕಾರಣದಿಂದ ನೆಲಸಮ ಆಗುತ್ತಿವೆ.
ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!
/newsfirstlive-kannada/media/post_attachments/wp-content/uploads/2024/02/pvr-1.jpg)
ಹೀಗಾಗಿ ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ಕಡಿಮೆ ದರ ನಿಗದಿಪಡಿಸಬೇಕು. ಏಕರೂಪದ ದರ ಇರಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದರು. ಪರಭಾಷಾ ಸಿನಿಮಾಗಳು, ಸೂಪರ್ ಸ್ಟಾರ್​ಗಳು ಸಿನಿಮಾ ಬಿಡುಗಡೆಯಾದಾಗಲಂತೂ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ ಒಂದು ಸಾವಿರ ರೂಪಾಯಿ, 2 ಸಾವಿರ ರೂಪಾಯಿವರೆಗೂ ಏರಿಕೆಯಾಗುತ್ತೆ. ಹೀಗಾಗಿ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್​ಗಳ ಬೇಕಾಬಿಟ್ಟಿ ಟಿಕೆಟ್ ರೇಟ್‌ಗೆ ಬ್ರೇಕ್ ಹಾಕಬೇಕೆಂಬ ಒತ್ತಾಯ ಇತ್ತು.
/newsfirstlive-kannada/media/post_attachments/wp-content/uploads/2025/05/cm-siddu.jpg)
ಈ ಒತ್ತಾಯಕ್ಕೆ ಮಣಿದಿದ್ದ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಬಜೆಟ್​ನಲ್ಲೇ ಮಲ್ಟಿಪ್ಲೆಕ್ಸ್​ಗಳಲ್ಲಿ 200 ರೂಪಾಯಿ ಟಿಕೆಟ್ ದರ ನಿಗದಿಪಡಿಸುವುದಾಗಿ ಘೋಷಿಸಿತ್ತು. ಬಳಿಕ ಗೃಹ ಇಲಾಖೆಯು ಕರ್ನಾಟಕ ಚಲನಚಿತ್ರ (ನಿಯಂತ್ರಣ) (ತಿದ್ದುಪಡಿ) ಮಸೂದೆ 2025ರ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ಯಾರಿಂದಲಾದರೂ ಆಕ್ಷೇಪಣೆ ಇದ್ದಲ್ಲಿ ಮುಂದಿನ 15 ದಿನಗಳಲ್ಲಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬಳಿಕ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂಪಾಯಿ ಟಿಕೆಟ್ ದರ ಜಾರಿಯಾಗಲಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಪರ ಭಾಷೆಯ ಸಿನಿಮಾಗಳಿಗೂ ತೆರಿಗೆ ಒಳಗೊಂಡು 200 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಈ ಮೂಲಕ ದುಬಾರಿ ಟಿಕೆಟ್ ದರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us