ಡ್ರೈ ಫ್ರೂಟ್ಸ್‌, ಕಲ್ಲು ಉಪ್ಪು.. ಈ ಎಲ್ಲಾ ವಸ್ತುಗಳು ಇನ್ಮುಂದೆ ಭಾರತದಲ್ಲಿ ದುಬಾರಿ; ಕಾರಣ ಇಲ್ಲಿದೆ!

author-image
admin
ಡ್ರೈ ಫ್ರೂಟ್ಸ್‌, ಕಲ್ಲು ಉಪ್ಪು.. ಈ ಎಲ್ಲಾ ವಸ್ತುಗಳು ಇನ್ಮುಂದೆ ಭಾರತದಲ್ಲಿ ದುಬಾರಿ; ಕಾರಣ ಇಲ್ಲಿದೆ!
Advertisment
  • ಪಹಲ್ಗಾಮ್​ ದಾಳಿ ಬಳಿಕ ಪಾಕಿಸ್ತಾನದಿಂದ ಆಮದು ಬಂದ್‌!
  • ಇನ್ಮುಂದೆ ಭಾರತದಲ್ಲಿ ಈ ಎಲ್ಲಾ ವಸ್ತುಗಳು ದುಬಾರಿ ಆಗುತ್ತಾ?
  • ಕರ್ನಾಟಕದಲ್ಲೂ ಈ ವಸ್ತುಗಳ ಬೆಲೆ ಏರಿಕೆಯಾಗೋ ಸಾಧ್ಯತೆ

ದೇಶ, ದೇಶಗಳ ನಡುವೆ ಯುದ್ಧ ಅನ್ನೋದು ಶುರುವಾಗುತ್ತೆ ಅಂದ್ರೆ ಆ ಯುದ್ಧದ ಎಫೆಕ್ಟ್​​ ನೇರವಾಗಿ ಜನಸಾಮಾನ್ಯರ ಮೇಲೆನೇ ಮೊದಲು ಬೀಳುತ್ತೆ. ಎಲ್ಲರಿಗೂ ಗೊತ್ತಿರುವಂತೆ ದೇಶ ದೇಶಗಳ ನಡುವೆ ಅನೇಕ ವಸ್ತುಗಳ ರಫ್ತು ಆಮದು ನಡೆಯುತ್ತಾ ಇರುತ್ತೆ. ಈ ರಫ್ತು, ಆಮದಿನ ಸಂಪರ್ಕ ಕಡಿತವಾದ್ರೆ ಅನಾಯಾಸವಾಗಿ ಬೆಲೆ ಏರಿಕೆಯಾಗಿ ಬಿಡುತ್ತೆ. ಈಗ ಪಹಲ್ಗಾಮ್​ ದಾಳಿಯಿಂದ ಇದೇ ನಡೆಯಲಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ್ದ ಹಿಂಸಾಚಾರಕ್ಕೆ ಪ್ರತ್ಯುತ್ತರವಾಗಿ, ಭಾರತ ಪಾಠ ಕಲಿಸೋಕೆ ಮುಂದಾಗಿದೆ. ಯಾವುದೇ ದೇಶಕ್ಕಾಗಲೀ ಆರ್ಥಿಕವಾಗಿ ಏಟು ಬಿದ್ದರೆ ಆ ದೇಶ ತಾನಾಗಿಯೇ ನೆಲಕಚ್ಚುತ್ತೆ. ಪಾಕ್​ನ ಸೊಕ್ಕು ಮುರಿಯೋಕೆ ಭಾರತ ಆ ದೇಶದ ಜೊತೆಗಿನ ಎಲ್ಲಾ ರೀತಿಯ ಸಂಬಂಧಗಳಿಗೆ ಎಳ್ಳು ನೀರು ಬಿಡಲಿದೆ.

ಈಗಾಗಲೇ ಭಾರತ ಪಾಕ್​​ ನಡುವಿನ, ಪ್ರಮುಖ ವ್ಯಾಪಾರ ಮಾರ್ಗಗಳಾದ ಅಟ್ಟಾರಿ ಮತ್ತು ವಾಘಾ ಗಡಿಗಳನ್ನ ಮುಚ್ಚಲಾಗಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದ್ದೇನು ಅಂದ್ರೆ.. ಪಾಕ್​ ಜೊತೆ ಭಾರತ ಕಂಪ್ಲೀಟಾಗಿ ವ್ಯಾಪಾರ ಸಂಪರ್ಕ ನಿಲ್ಲಿಸಿಬಿಟ್ಟರೆ, ನಮ್ಮ ಭಾರತದಲ್ಲಿ ಕೆಲವು ವಸ್ತುಗಳ ಬೆಲೆ ಗಗನಕ್ಕೇರುತ್ತವೆ.

publive-image

ಭಾರತದಲ್ಲಿ ಡ್ರೈ ಫ್ರೂಟ್ಸ್​​ ಬೆಲೆ ದುಬಾರಿಯಾಗಲಿವೆಯಾ?
ಭಾರತ ಪಾಕ್​ನಿಂದ ಅತಿ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದ್ದ ಪದಾರ್ಥಗಳಂದ್ರೆ.. ಡ್ರೈ ಪ್ರೂಟ್​ಗಳು. ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ.. ಎರಡು ದೇಶಗಳ ನಡುವೆ ವ್ಯಾಪಾರ ಸಂಪರ್ಕ ನಿಂತರೆ ಈ ಪದಾರ್ಥಗಳ ಬೆಲೆ ಇಲ್ಲಿ ತುಂಬಾ ದುಬಾರಿ ಆಗಬಹುದು.

ಅಷ್ಟೇಯಲ್ಲ, ಕಲ್ಲು ಉಪ್ಪು, ಕನ್ನಡಕದಲ್ಲಿ ಬಳಸಲಾಗುವ ಆಪ್ಟಿಕಲ್​​ ಲೆನ್ಸ್​​ಗಳು, ಆಹಾರ ಧಾನ್ಯಗಳಾದ ಗೋಧಿ, ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಲೆ ಕೂಡ ಹೆಚ್ಚಾಗಬಹುದು, ಸಿಮೆಂಟ್‌ ಕಲ್ಲು, ಸುಣ್ಣ, ಹತ್ತಿ, ಉಕ್ಕು, ಚರ್ಮದ ವಸ್ತುಗಳನ್ನ ಸಹ ಭಾರತ ಪಾಕ್​ನಿಂದ ಆಮದು ಮಾಡಿಕೊಳ್ತಿದೆ. ಹೀಗೆ ಇನ್ನು ಅನೇಕ ಕಚ್ಚಾ ವಸ್ತುಗಳ ಆಮದು ಸ್ಥಗಿತಗೊಂಡರೇ, ಬೆಲೆಗಳು ಗಗನಕ್ಕೇರುವ ಅವಕಾಶ ಇದೆ.

ಇದನ್ನೂ ಓದಿ: ನಾವು ಕೂಡ ರೆಡಿ.. ಭಾರತವನ್ನು ಕೆರಳಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತು; ಏನಂದ್ರು? 

ಷೇರು ಮಾರುಕಟ್ಟೆ ಕುಸಿತ.. ಮುಂದೇನು?
ಈಗಾಗಲೇ ಪಾಕಿಸ್ತಾನದ ಷೇರು ಎಕ್ಸ್​ಚೆಂಜ್​​ ಸೆಂಟರ್​​ ವೆಬ್‌ಸೈಟ್ ಆಫ್‌ಲೈನ್‌ನಲ್ಲಿ ಸ್ಥಗಿತದಿಂದ ಮಾರುಕಟ್ಟೆ ಕುಸಿತವಾಗಿದೆ. ಇದರಿಂದ ಪಾಕ್​ಗೆ ಮತ್ತೆ ಮೇಲೆಳೋಕಾಗದಂಥ ಪೆಟ್ಟು ಬೀಳುವುದರಲ್ಲಿ ಎರಡನೇ ಮಾತಿಲ್ಲ. ಪಹಲ್ಗಾಮ್​ ದಾಳಿಯಿಂದ ಪಾಕ್​ ಭಾರಿ ಬೆಲೆ ತೆರಬೇಕಾಗುತ್ತದೆ.

ಮೊದಲೇ ಪಾಕಿಸ್ತಾನ ಆರ್ಥಿಕತೆ ದುರ್ಬಲವಾಗಿರುತ್ತೆ.. ನಮ್ಮ ದೇಶದಿಂದಲೂ ಪಾಕ್​ಗೆ ಅನೇಕ ವಸ್ತುಗಳು ರಫ್ತಾಗುತ್ತವೆ.. ಸಾವಯವ ರಾಸಾಯನಿಕಗಳು, ಔಷಧಿಗಳು ಪ್ಲಾಸ್ಟಿಕ್ ಉತ್ಪನ್ನಗಳು, ಹತ್ತಿ ಹಣ್ಣು, ತರಕಾರಿ, ಚಹಾ, ಕಾಫಿ, ಮಸಾಲೆಗಳು, ಸಕ್ಕರೆ, ಎಣ್ಣೆಕಾಳುಗಳು, ಡೈರಿ ವಸ್ತುಗಳು ಮತ್ತು ಪಶು ಆಹಾರದಂತಹ ಹಲವು ವಸ್ತುಗಳನ್ನ ಭಾರತ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದೆ. ಈಗ ಅವೆಲ್ಲವುಗಳ ರಪ್ತು ನಿಂತರೇ ಪಾಕ್​ ಆರ್ಥಿಕವಾಗಿ ಇನ್ನಷ್ಟು ಹಿಂದೆ ಬೀಳಲಿದೆ. ಇದರಿಂದ ಪಾಕ್​ಗೆ ಭಾರತ ಪಾಠ ಕಲಿಸಿದಂತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment