/newsfirstlive-kannada/media/post_attachments/wp-content/uploads/2025/05/imran_khan.jpg)
ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ ಅವರನ್ನು ನೂತನ ಫೀಲ್ಡ್ ಮಾರ್ಷಲ್ ಆಗಿ ನೇಮಿಸಲಾಗಿದೆ. ಈ ಬಗ್ಗೆ ವ್ಯಂಗ್ಯವಾಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಮುನೀರ್ಗೆ ಅದನ್ನು ನೀಡುವ ಬದಲು ರಾಜ ಎಂದು ಬಿರುದು ನೀಡಿದ್ದರೆ ಸೂಕ್ತವಿತ್ತು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ಬೆನ್ನಲ್ಲೇ ಜನರಲ್ ಆಗಿದ್ದ ಅಸಿಮ್ ಮುನೀರ್ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲೇ ಈ ಹುದ್ದೆಗೆ ಬಡ್ತಿ ಪಡೆದಿರುವ ಎರಡನೇ ಉನ್ನತ ಮಿಲಿಟರಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇದೀಗ ಅಸಿಮ್ ಮುನೀರ್ ಪಾತ್ರರಾಗಿದ್ದಾರೆ. ಇದನ್ನೇ ಜೈಲಿನಲ್ಲಿರುವ ಮಾಜಿ ಪ್ರಧಾನಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:RCB ಬೌಲಿಂಗ್ ಓಕೆ.. ಬ್ಯಾಟಿಂಗ್ನಲ್ಲಿ ಇಂದು ಕ್ಯಾಪ್ಟನ್, ವಿಕೆಟ್ ಕೀಪರ್ ಸಿಡಿದೇಳಬೇಕು!
ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಅಯ್ಯೋ ದೇವರೇ.. ಜನರಲ್ ಆಗಿದ್ದ ಅಸಿಮ್ ಮುನೀರ್ನ್ನು ಫೀಲ್ಡ್ ಮಾರ್ಷಲ್ ಆಗಿ ನೇಮಿಸಲಾಗಿದೆ. ಇದರ ಬದಲು ರಾಜ ಎನ್ನುವ ಬಿರದನ್ನು ನೀಡಿದ್ದರೇ ಚೆನ್ನಾಗಿರುತ್ತಿತ್ತು. ಏಕೆಂದರೆ ದೇಶದಲ್ಲಿ ಅರಣ್ಯ ಕಾನೂನು (Law of the Jungle) ಜಾರಿ ಇದೆ. ಫೀಲ್ಡ್ ಮಾರ್ಷಲ್ ಬದಲಿಗೆ ರಾಜ ಬಿರುದು ನೀಡಿದ್ರೆ ಕಾಡಿನಲ್ಲಿ ಒಬ್ಬನೇ ರಾಜನಿದ್ದಾನೆ ಎಂದು ಎಲ್ಲರಿಗೂ ತಿಳಿಯುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಕ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಹಲವು ಪ್ರಕರಣ ಇರುವುದರಿಂದ 2023 ಆಗಸ್ಟ್ನಿಂದ ಜೈಲಿನಲ್ಲಿದ್ದಾರೆ. ತಮ್ಮ ವಿರುದ್ಧ ಪಾಕಿಸ್ತಾನದಲ್ಲಿ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದ್ದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ನಾವೆಲ್ಲರೂ ಒಂದಾಗಬೇಕು. ದೇಶದ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಮಿಲಿಟರಿ ಪಡೆ ನನ್ನೊಂದಿಗೆ ಬಹಿರಂಗವಾಗಿ ಮಾತುಕತೆ ನಡೆಸಲಿ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ