newsfirstkannada.com

Super Over: ರೋಚಕ ಘಟ್ಟ ತಲುಪಿದ ಇಮ್ರಾನ್ ಖಾನ್ vs ನವಾಜ್ ಷರೀಫ್ ಫೈಟ್..!

Share :

Published February 11, 2024 at 12:39pm

Update February 11, 2024 at 1:47pm

  ಪಾಕಿಸ್ತಾನದಲ್ಲಿ ಯಾಕೆ ಚುನಾವಣೆ ಫಲಿತಾಂಶ ಲೇಟ್ ಆಗ್ತಿದೆ?

  ಸರ್ಕಾರ ರಚನೆಗೆ ತಾತ್ಕಾಲಿಕ ಬ್ರೇಕ್, ಹಲವು ಕಡೆ ಮರು ಮತದಾನ

  10 ಕ್ಷೇತ್ರಗಳ 26 ಬೂತ್​ಗಳಲ್ಲಿ ಮರು ಮತದಾನಕ್ಕೆ ಆದೇಶ

ಇಮ್ರಾನ್ ಖಾನ್ ಮತ್ತು ನವಾಜ್ ಷರೀಫ್ ನಡುವಿನ ಜಿದ್ದಾಜಿದ್ದಿನ ಎಲೆಕ್ಷನ್​ ಫೈಟ್​ನಲ್ಲಿ ಫಲಿತಾಂಶ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಗೆದ್ದವಱರು, ಸೋತವಱರು ಎನ್ನುವುದರ ಬಗ್ಗೆ ಸರಿಯಾಗಿ ಕ್ಲಾರಿಟಿ ಸಿಕ್ಕಿಲ್ಲ. ಈ ಮಧ್ಯೆ ಇಬ್ಬರೂ ಗೆಲುವು ನಮ್ಮದು ಎಂದು ಘೋಷಣೆ ಮಾಡಿಕೊಂಡಿವೆ. ಹೀಗಿರುವಾಗ ಸದ್ಯಕ್ಕಂತೂ ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಆಗುವ ಸಾಧ್ಯತೆ ಇಲ್ಲ. ಚುನಾವಣೆಯಲ್ಲಿ ಅಕ್ರಮಗಳು ನಡೆದಿದೆ ಎಂಬ ಆರೋಪವು, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಜೊತೆಗೆ ಹಲವು ಕ್ಷೇತ್ರಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿದೆ.

ಮರು ಮತದಾನಕ್ಕೆ ಆದೇಶ

ವರದಿಗಳ ಪ್ರಕಾರ ಫೆಬ್ರವರಿ 15ರಂದು ಪಾಕಿಸ್ತಾನದ 26 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ. ಇಮ್ರಾನ್ ಖಾನ್ ಪಕ್ಷ ಪಿಟಿಐ (Pakistan Tehreek-Insaf) ಸೇರಿ, ಇದರ ಬೆಂಬಲಿತ ಪಕ್ಷಗಳು ಪಾಕಿಸ್ತಾನದಲ್ಲಿ ಬರೋಬ್ಬರಿ 40 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದವು. ಚುನಾವಣೆ ಫಲಿತಾಂಶ ಇನ್ನೂ ಪ್ರಕಟ ಆಗಿಲ್ಲ. ಏನೋ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟಿಸಿದ್ದರು. ಬೆನ್ನಲ್ಲೇ ಪಾಕಿಸ್ತಾನದ ಚುನಾವಣಾ ಆಯೋಗ ಕೆಲವು ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಿದೆ.

ಯಾಕೆ ಫಲಿತಾಂಶ ವಿಳಂಬ..?
ಫೆಬ್ರವರಿ 15 ರಂದು ಮರು ಮತದಾನ ನಿಗದಿಯಾಗಿದೆ. ಸುಮಾರು 10 ಕ್ಷೇತ್ರಗಳ ಮತ ಎಣಿಕೆ ಇನ್ನೂ ನಡೆಯುತ್ತಿದ್ದು, ಇದುವರೆಗೂ ಆಯೋಗ ಯಾವುದೇ ಸ್ಪಷ್ಟ ಫಲಿತಾಂಶವನ್ನು ಪ್ರಕಟಿಸಿಲ್ಲ. ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, PTI ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಷರೀಫ್ ಅವರ Pakistan Muslim League (N) ಗಿಂತ 72 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪುತ್ರ ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಗೆದ್ದಿದೆ. ಇತರೆ ಪಕ್ಷಗಳು 27 ಸ್ಥಾನಗಳನ್ನು ಪಡೆದಿವೆ.

ಗುರುವಾರ ಸಂಜೆ 5 ಗಂಟೆಗೆ ಮತದಾನ ಮುಗಿದಿದ್ದರೂ 266 ಕ್ಷೇತ್ರಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆಯೋಗದ ಮೂಲಗಳ ಪ್ರಕಾರ, ತಾಂತ್ರಿಕ ದೋಷಗಳು, ಇಂಟರ್ನೆಟ್ ಸೇವೆ ಸ್ಥಗಿತ ಮತ್ತು ಭಯೋತ್ಪಾದಕರ ದಾಳಿಯಿಂದ ಮತ ಎಣಿಕೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Super Over: ರೋಚಕ ಘಟ್ಟ ತಲುಪಿದ ಇಮ್ರಾನ್ ಖಾನ್ vs ನವಾಜ್ ಷರೀಫ್ ಫೈಟ್..!

https://newsfirstlive.com/wp-content/uploads/2024/02/PAK-4.jpg

Load More