ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​​ಗೆ ಟ್ವಿಸ್ಟ್​.. ಬಿ.ದಯಾನಂದ್​ ಸೇರಿ ನಾಲ್ವರಿಗೆ ರಿಲೀಫ್..!

author-image
Ganesh
Updated On
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​​ಗೆ ಟ್ವಿಸ್ಟ್​.. ಬಿ.ದಯಾನಂದ್​ ಸೇರಿ ನಾಲ್ವರಿಗೆ ರಿಲೀಫ್..!
Advertisment
  • ನಾಲ್ವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ರದ್ದು
  • ಕಾಲ್ತುಳಿತ ಕೇಸ್​​ನಲ್ಲಿ 12 ಮಂದಿ ಪ್ರಾಣ ಕಳ್ಕೊಂಡಿದ್ದರು
  • ಪೊಲೀಸ್ ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆ ನಡೆಯಲಿದೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯ ಲೋಪ, ನಿರ್ಲಕ್ಷ್ಯದ ಕಾರಣದಿಂದ ಐವರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸೇವೆಯಿಂದ ಸಸ್ಪೆಂಡ್ ಮಾಡಿತ್ತು. ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಬಿ.ದಯಾನಂದ್ ರಿಂದ ಹಿಡಿದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ವರೆಗೆ ಐವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಈಗ ಐವರು ಪೊಲೀಸ್ ಅಧಿಕಾರಿಗಳ ಪೈಕಿ ನಾಲ್ವರ ಅಮಾನತು ರದ್ದುಪಡಿಸಿದೆ.

ಇದನ್ನೂ ಓದಿ: ಶಾರುಕ್​ ಖಾನ್​ ಜತೆ ಮಾಡಿದ್ದು ಒಂದೇ ಒಂದು ಸಿನಿಮಾ.. ಈಗ 45,000 ಕೋಟಿ ರೂಪಾಯಿ ಒಡತಿ ಈ ಹೀರೋಯಿನ್!

publive-image

ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಹೊರತುಪಡಿಸಿ ಉಳಿದ ನಾಲ್ವರ ಅಮಾನತನ್ನು ರದ್ದುಪಡಿಸಿ , ತಕ್ಷಣದಿಂದಲೇ ಸೇವೆಗೆ ಮರು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್, ಶೇಖರ್ ಹೆಚ್‌.ಟೇಕಣ್ಣನವರ್‌, ಡಿವೈಎಸ್ಪಿ ಸಿ.ಬಾಲಕೃಷ್ಣ ಹಾಗೂ ಇನ್ಸ್​ಪೆಕ್ಟರ್ ಗಿರೀಶ್ ಅವರ ಅಮಾನತನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.

ಈ ನಾಲ್ವರು ಅಧಿಕಾರಿಗಳನ್ನು ಮತ್ತೆ ಸೇವೆಯಲ್ಲಿ ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೇವೆಯಿಂದ ಅಮಾನತು ಆಗಿದ್ದ ಎಲ್ಲ ಐದು ಮಂದಿ ಅಧಿಕಾರಿಗಳು ಕೂಡ ತಮ್ಮ ಅಮಾನತನ್ನು ಹಿಂತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಕಾಲ್ತುಳಿತ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಹಾಗೂ ನಿವೃತ್ತ ಜಸ್ಟೀಸ್ ಮೈಕೆಲ್ ಡಿ.ಕುನ್ಹಾ ಏಕವ್ಯಕ್ತಿ ಆಯೋಗವು ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು . ಹೀಗಾಗಿ ಈಗ ರಾಜ್ಯ ಸರ್ಕಾರವು ನಾಲ್ವರು ಅಧಿಕಾರಿಗಳ ಅಮಾನತನ್ನು ಹಿಂತೆಗೆದುಕೊಂಡು ಇಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆ ಮುಂದುವರಿಯುತ್ತೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ ನಂಬಿ ಲಿವರ್ ಕಳೆದುಕೊಂಡ ಮಹಿಳೆ.. ಅಂಥದ್ದೇನಾಯ್ತು..?

ಐಜಿಪಿ ವಿಕಾಸ್ ಕುಮಾರ್ ವಿಕಾಸ್, ತಮ್ಮನ್ನು ಸೇವೆಯಿಂದ ಅಮಾನತು ಮಾಡಿದ್ದನ್ನು ಪ್ರಶ್ನಿಸಿ, ಸಿಎಟಿ ಮೊರೆ ಹೋಗಿದ್ದರು. ಸಿಎಜಿ ವಿಕಾಸ್ ಕುಮಾರ್ ವಿಕಾಸ್ ಪರವಾಗಿ ಆದೇಶ ನೀಡಿತ್ತು. ಬಳಿಕ ರಾಜ್ಯ ಸರ್ಕಾರ, ಸಿಎಟಿ ಆದೇಶ ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಕೂಡ ಸಿಎಟಿ ಆದೇಶ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳಿತ್ತು. ಬಹುಶಃ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಸಿಎಟಿ ಮೆಟ್ಟಿಲೇರಿದ್ದಕ್ಕೆ ರಾಜ್ಯ ಸರ್ಕಾರ ಅವರ ಅಮಾನತು ಇನ್ನೂ ಹಿಂತೆಗೆದುಕೊಂಡಿಲ್ಲವೇನೋ. ಹೈಕೋರ್ಟ್ ಗೆ ಈ ಬಗ್ಗೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಏನು ಹೇಳುತ್ತೆ ಎಂಬ ಕುತೂಹಲ ಇದೆ. ಈಗಾಗಲೇ ರಾಜ್ಯ ಸರ್ಕಾರವು ಹೈಕೋರ್ಟ್​​ನಲ್ಲಿ ಸಲ್ಲಿಸಿರುವ ಅರ್ಜಿಯ ಇನ್ನೂ ಪೆಂಡಿಂಗ್ ಇದೆ.

ರಾಜ್ಯ ಸರ್ಕಾರದ ಈ ಆದೇಶದಿಂದಾಗಿ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಅವರಿಗೆ ಮತ್ತೆ ಸೇವೆಯಲ್ಲಿ ಬಡ್ತಿ ಪಡೆಯುವ ಹಾದಿ ಸುಗಮವಾದಂತಾಗಿದೆ.

ಇದನ್ನೂ ಓದಿಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ್ದು ಯಾರೋ, ಬೆನ್ನು ತಟ್ಟಿಕೊಂಡಿದ್ದು ಮಾತ್ರ ಟ್ರಂಪ್​​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment