newsfirstkannada.com

ಸೋಮವಾರ ಸೂರ್ಯಗ್ರಹಣ!! ಭಾರತದಲ್ಲಿ ಗೋಚರ ಆಗದಿದ್ದರೂ ಭಾರತೀಯರಿಗೆ ಕಾಡಿದೆ ಟೆನ್ಷನ್, ಟೆನ್ಷನ್..! ಯಾಕೆ ಗೊತ್ತಾ?

Share :

Published April 6, 2024 at 2:47pm

Update April 6, 2024 at 2:49pm

  ಏಪ್ರಿಲ್ 8 ರಂದು ವರ್ಷದ ಮೊದಲ ಸೂರ್ಯಗ್ರಹಣ

  50 ವರ್ಷಗಳ ನಂತರ ಅತ್ಯಂತ ದೀರ್ಘಾವಧಿಯ ಗ್ರಹಣ ಇದು

  ಭಾರತದಲ್ಲಿ ಕಾಣಿಸದಿದ್ದರೂ ಸೂರ್ಯಗ್ರಹಣ ನೋಡಬಹುದು, ಹೇಗೆ?

ಏಪ್ರಿಲ್ 8, 2024 ರಂದು ಅಂದರೆ ಸೋಮವಾರ ಖಗೋಳ ವಿಜ್ಞಾನವು ವಿಸ್ಮಯಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ವರ್ಷದ ಮೊದಲ ಸೂರ್ಯಗ್ರಹಣ (solar eclipse) ಗೋಚರವಾಗುತ್ತಿದ್ದು, ಅದರ ಫಲಾಫಲಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಯಾಕೆಂದರೆ ಯುಗಾದಿ ಹಬ್ಬದ ಹಿಂದಿನ ದಿನವೇ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಕೆಲವರು ಭಾರೀ ಆತಂಕ ವ್ಯಕ್ತಪಡಿಸ್ತಿದ್ದಾರೆ. ಆದರೆ, ಸೂರ್ಯಗ್ರಹಣವು ಭಾರತದಲ್ಲಿ ಗೋಚರ ಆಗುವುದಿಲ್ಲ, ಯಾವುದೇ ಪರಿಣಾಮ ಬೀರುವುದಿಲ್ಲ.

ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರವಾಗದಿದ್ದರೂ, ಇತರೆ ದೇಶಗಳಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಮ್ಯಾಕ್ಸಿಕೋ, ಯುನೈಟೆಡ್​ ಸ್ಟೇಟ್, ಕೆನಾಡದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುತ್ತದೆ.

ಇದನ್ನೂ ಓದಿ: ಉರಿ ಬಿಸಿಲ ತಾಪತ್ರೆ ಒಂದಲ್ಲ ಎರಡಲ್ಲ.. ಕೋಳಿ ಮೊಟ್ಟೆಗೂ ಗುನ್ನಾ ಕೊಟ್ಟ ರಣಬಿಸಿಲು..!

ಭಾರತದಲ್ಲಿ ಯಾವಾಗ ನೋಡಬಹುದು?
ಗ್ರಹಣದ ನೆರಳು ಮೊದಲ ಬಾರಿಗೆ ದಕ್ಷಿಣ ಪೆಸಿಫಿಕ್ ಸಮುದ್ರದ ಮೇಲೆ ಬೀಳಲಿದೆ. ಉತ್ತರ ಅಮೆರಿಕದ ಮ್ಯಾಕ್ಸಿಕೋ ಪೆಸಿಫಿಕ್​ ಕರಾವಳಿ ಪ್ರದೇಶದಲ್ಲಿ ಅಲ್ಲಿನ ಕಾಲಮಾನ ಬೆಳಗ್ಗೆ 11:07ಕ್ಕೆ ಗೋಚರ ಆಗಲಿದೆ. ಭಾರತೀಯ ಕಾಲಮಾದಲ್ಲಿದ್ದ 10.37ಕ್ಕೆ ಅಮೆರಿಕದಲ್ಲಿ ಸೂರ್ಯಗ್ರಹಣದ ನೆರಳು ಭೂಮಿಗೆ ಬೀಳಲಿದೆ.

ಇದನ್ನೂ ಓದಿ: ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

ಗ್ರಹಣದ ನೆರಳು ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಬೀಳಲಿದೆ. ಟೆಕ್ಸಾಸ್, ಒಕ್ಲಹೋಮ (Oklahoma), ಅರ್ಕಾನ್ಸಾಸ್ (Arkansas), ಮಿಸೌರಿ (Missouri), ಇಲಿನಾಯ್ಸ್ (Illinois), ಕೆಂಟುಕಿ ( Kentucky), ಇಂಡಿಯಾನಾ ( Indiana), ಓಹಿಯೋ (Ohio), ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆಯಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ. ಮಿಚಿಗನ್​​ನಲ್ಲಿ ಸಣ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಕಾಣಿಸಲಿದೆ. ಅದೇ ರೀತಿ ಕೆನಾಡದಲ್ಲೂ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಬಹುದು.

ಭಾರತದಲ್ಲಿ ಹೇಗೆ ನೋಡಬಹುದು?
ಅಮೆರಿಕ ಭಾಗಗಳಲ್ಲಿ ಮಾತ್ರ ಸೂರ್ಯಗ್ರಹಣ ಗೋಚರವಾದರೂ, ಭಾರತದಲ್ಲೂ ನಾವು ವೀಕ್ಷಣೆ ಮಾಡಬಹುದು. ಅಯ್ಯೋ ವರ್ಷದ ಮೊದಲ ಗ್ರಹಣ ನೋಡಲು ಸಾಧ್ಯವಾಗ್ತಿಲ್ಲ ಎಂದು ಚಡಿಪಡಿಸುವ ಅಗತ್ಯ ಇಲ್ಲ. ಇವತ್ತಿನ ಆಧುನಿ ತಂತ್ರಜ್ಞಾನಗಳ ಸಹಾಯದಿಂದ ಏಪ್ರಿಲ್ 8 ರಾತ್ರಿ 10.30 ರಿಂದ ಸೂರ್ಯಗ್ರಹಣದ ನೇರ ದೃಶ್ಯಗಳನ್ನು ಡಿಜಿಟಲ್ ಉಪಕರಣಗಳ ಸಹಾಯದಿಂದ ನೋಡಬಹುದಾಗಿದೆ. ಡಿಜಿಟಲ್ ಮಾಧ್ಯಮಗಳು ಸೂರ್ಯಗ್ರಹಣ ನೇರ ದೃಶ್ಯಾವಳಿಯನ್ನು ಪ್ರಸಾರ ಮಾಡಲಿದ್ದು, ಅವುಗಳ ಮೂಲಕ ಭಾರತೀಯರು ನೋಡಬಹುದಾಗಿದೆ.

ದೀರ್ಘಾವಧಿಯ ಗ್ರಹಣ..!
ಬರೋಬ್ಬರಿ 50 ವರ್ಷಗಳ ನಂತರ ಗೋಚರವಾಗುತ್ತಿರುವ ಅತ್ಯಂತ ದೀರ್ಘಾವಧಿಯ ಗ್ರಹಣ ಇದಾಗಿದೆ. ಈ ಸೂರ್ಯಗ್ರಹಣದ ಅವಧಿ 4 ಗಂಟೆ 25 ನಿಮಿಷಗಳಾಗಿದೆ. ಈ ಸೂರ್ಯಗ್ರಹಣದ ಮರುದಿನವೇ ಭಾರತದಲ್ಲಿ ಹಿಂದೂ ಹೊಸ ವರ್ಷ ಯುಗಾದಿ ಬಳಿಕ ರಾಮನವಮಿ ಆಚರಿಸಲಾಗುತ್ತದೆ.

ಭಾರತೀಯರಿಗೆ ಏಕೆ ಭಯ..?
ಸೂರ್ಯಗ್ರಹಣ ಭಾರತದಲ್ಲಿ ಗೋಚರ ಆಗಲ್ಲ, ಅದರ ನೆರಳು ಕೂಡ ಭಾರತದಲ್ಲಿ ಬೀಳುತ್ತಿಲ್ಲ. ಹೀಗಿದ್ದೂ ಕೆಲ ಭಾರತೀಯರು ಸೂರ್ಯ ಗ್ರಹಣದ ವಿಚಾರದಲ್ಲಿ ಭಯಗೊಂಡಿದ್ದಾರೆ. ಕೋಟ್ಯಾಂತರ ಭಾರತೀಯರು ಜ್ಯೋತಿಷ್ಯ ಶಾಸ್ತ್ರವನ್ನು ನಂಬುತ್ತಾರೆ. ಗ್ರಹಣದ ಸಂದರ್ಭದಲ್ಲಿ ಆಗುವ ತೊಡಕು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಪ್ರದಾಯ, ಪೂಜೆ, ಪುನಸ್ಕಾರದ ಮೊರೆ ಹೋಗುತ್ತಾರೆ. ಅದರಲ್ಲೂ ಹೇಳಿ, ಕೇಳಿ ಯುಗಾದಿ ಹಬ್ಬದ ಹಿಂದಿನ ದಿನ ಗ್ರಹಣ ಬರುತ್ತಿದೆ. ಹಿಂದೂ ಸಂಪ್ರದಾಯದ ಹೊಸ ವರ್ಷದ ಮೊದಲನೇ ದಿನವೇ, ವರ್ಷದ ಮೊದಲ ಸೂರ್ಯಗ್ರಹಣ ನಡೆಯುತ್ತಿದೆ. ಹೀಗಿರುವಾಗ ಅದೆಷ್ಟೋ ಹಿಂದೂ ಸಂಪ್ರದಾಯವನ್ನು ಆಚರಿಸುವ ಭಾರತೀಯರು ವಿಶ್ವದ ಮೂಲೆ ಮೂಲೆಗಳಲ್ಲೂ ನೆಲೆಸಿದ್ದಾರೆ. ಅಂತೆಯೇ ಅಮೆರಿಕದಲ್ಲೂ ಕೂಡ ವಾಸವಿದ್ದಾರೆ. ಯುಗಾದಿ ಹಬ್ಬದ ಹಿಂದಿನ ದಿನವೇ ಸೂರ್ಯಗ್ರಹಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಭಾರತೀಯರಿಗೆ ಹಾಗೂ ಭಾರತದಲ್ಲಿರುವ ಅವರ ಸಂಬಂಧಿಕರಿಗೆ ಸಹಜವಾಗಿಯೇ ಸೂರ್ಯಗ್ರಹಣದ ಆತಂಕ ಕಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋಮವಾರ ಸೂರ್ಯಗ್ರಹಣ!! ಭಾರತದಲ್ಲಿ ಗೋಚರ ಆಗದಿದ್ದರೂ ಭಾರತೀಯರಿಗೆ ಕಾಡಿದೆ ಟೆನ್ಷನ್, ಟೆನ್ಷನ್..! ಯಾಕೆ ಗೊತ್ತಾ?

https://newsfirstlive.com/wp-content/uploads/2024/04/Solar-Eclipse.jpg

Load More