Advertisment

ಸೋನು ಗೌಡ ಜೈಲು ಪಾಲು.. ಅಕ್ರಮವಾಗಿ ಮಗು ದತ್ತು ಪಡೆದ ಕೇಸ್‌ನಲ್ಲಿ ಕೋರ್ಟ್‌ ಮಹತ್ವದ ಆದೇಶ

author-image
admin
Updated On
‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?
Advertisment
  • ಪರಪ್ಪನ ಅಗ್ರಹಾರದತ್ತ ಕರೆದುಕೊಂಡು ಹೋಗಲು ಪೊಲೀಸರ ಸಿದ್ಧತೆ
  • 14 ದಿನ ಸೋನು ಶ್ರೀನಿವಾಸ್ ಗೌಡ ಅವರಿಗೆ ನ್ಯಾಯಾಂಗ ಬಂಧನ
  • ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಸೋನುಗೆ ತೀವ್ರ ಸಂಕಷ್ಟ

ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್‌ ಸೋನು ಶ್ರೀನಿವಾಸ್ ಗೌಡ ಅವರು ಜೈಲು ಪಾಲಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸೋನು ಅವರನ್ನ ಪರಪ್ಪನ ಅಗ್ರಹಾರದತ್ತ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Advertisment

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯ ದೂರಿನ ಮೇರೆಗೆ ಸೋನು ಶ್ರೀನಿವಾಸ್ ಗೌಡ ಅವರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಇಂದು ಸೋನು ಶ್ರೀನಿವಾಸ್ ಗೌಡ ಅವರ ಪೊಲೀಸ್ ಕಸ್ಟಡಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಪೊಲೀಸರು ಸೋನು ಅವರನ್ನ ಹಾಜರುಪಡಿಸಿದ್ದರು.

ಇದನ್ನೂ ಓದಿ:ರಾತ್ರೋರಾತ್ರಿ ಮಗು ಕರ್ಕೊಂಡು ಹೋಗಿದ್ದ ಸೋನುಗೌಡ.. ಬಾಲಕಿ ಊರಲ್ಲಿ ಅಸಲಿ ವಿಷಯ ಬಯಲು

ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ವಿಚಾರಣೆ ನಡೆಸಿದ ಕೋರ್ಟ್‌, 14 ದಿನ ಸೋನು ಶ್ರೀನಿವಾಸ್ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ನೀಡಿದೆ. ಸೋನಿ ಗೌಡ ಅವರಿಗೆ ಇದೇ ಏಪ್ರಿಲ್ 8 ರವರಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment