/newsfirstlive-kannada/media/post_attachments/wp-content/uploads/2024/08/marriage2.jpg)
ಇಂದಿನ ಕಾಲಮಾನದಲ್ಲಿ ಒಬ್ಬಳೇ ಹೆಂಡತಿಯನ್ನು ಕಟ್ಟಿಕೊಂಡು ಬದುಕು ನೀಗಿಸುವುದು ದೊಡ್ಡ ಸಾಹಸವಾಗಿದೆ ಅಂತದ್ರಲ್ಲಿ ನಾಲ್ಕು ನಾಲ್ಕು ಜನ ಹೆಂಡತಿಯರನ್ನು ಕಟ್ಟಿಕೊಂಡು ಬದುಕು ನೂಕಲು ಸಾಧ್ಯವಾ ಎಂದು ಹೇಳಬಹುದು. ಯಾಕೆ ಸಾಧ್ಯವಿಲ್ಲ ತುಂಬಾ ಸರಳ ಎನ್ನುವಂತೆ ಚೀನಾದಲ್ಲಿ ಒಬ್ಬ ಬದುಕಿ ತೋರಿಸಿದ್ದಾನೆ.
ಚೀನಾದಲ್ಲಿ ಒಬ್ಬ ವ್ಯಕ್ತಿಗೆ ನಾಲ್ವರು ಪತ್ನಿಯರು. ನಾಲ್ವರು ಪತ್ನಿಯರನ್ನು ಒಂದೇ ಕಾಂಪ್ಲೆಕ್ಸ್ನಲ್ಲಿ ಬೇರೆ ಬೇರೆ ಮನೆಯಲ್ಲಿ ಇಟ್ಟಿದ್ದ. ಅದಕ್ಕೊ ದೊಡ್ಡ ಅಚ್ಚರಿ ಅಂದ್ರೆ ನಾಲ್ವರಿಗೂ ಕೂಡ ಇವನ ಕಳ್ಳಾಟ ಗೊತ್ತಿರಲಿಲ್ಲ. ನಾಲ್ವರಲ್ಲಿಯೂ ಒಂದೇ ಒಂದು ಎಳ್ಳು ಕಾಳಷ್ಟು ಕೂಡ ಸಂಶಯ ಬಂದಿರಲಿಲ್ಲ. ಸದ್ಯ ಈ ವ್ಯಕ್ತಿಯ ರಂಗಿನಾಟ ಚೀನಾದ ಸೋಷಿಯಲ್ ಮೀಡಿಯಾದಲ್ಲೆಲ್ಲಾ ದೊಡ್ಡ ಸಂಚಲನ ಸೃಷ್ಟಿಸಿದೆ. ನೀನೋಬ್ಬ ಮಹಾಪ್ರಚಂಡ ಗಂಡ ಎಂದೇ ಜನರು ಆತನನ್ನು ವ್ಯಂಗ್ಯವಾಗಿ ಹೊಗಳುತ್ತಿದ್ದಾರೆ.
ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದ ಈತ ನಾಲ್ವರು ಹೆಂಡತಿಯರನ್ನು ಒಬ್ಬರಿಗೊಬ್ಬರಿಗೆ ಗೊತ್ತಾಗದಂತೆ ನಿರ್ವಹಣೆ ಮಾಡುತ್ತಿದ್ದಾನಂತೆ ನಾಲ್ವರು ಪತ್ನಿಯರಿಗೆ ಇದ್ಯಾವ ಸುಳಿವೇ ಸಿಗದಂತೆ ನೋಡಿಕೊಂಡಿದ್ದಾನೆ. ಸೋಷಿಯಲ್ ಮಿಡಿಯಾಗಳಲ್ಲೂ ಕೂಡ ಎಳ್ಳು ಕಾಳಷ್ಟು ಸಂಶಯ ಬರದಂತೆ ತನ್ನ ಫೋಟೊ ಹಾಗೂ ವಿಡಿಯೋಗಳನ್ನು ಮೆಂಟೇನ್ ಮಾಡಿದ್ದಾನೆ.
ಇದನ್ನೂ ಓದಿ: ಬೊಂಬೆಯೊಂದಿಗೆ ಮದುವೆಯಾಗಿ ಸಖತ್ ಫೇಮಸ್ ಆದ ಜಪಾನ್ ಹುಡುಗ; ಎಷ್ಟು ಸಂತೋಷವಾಗಿದ್ದಾನೆ ಗೊತ್ತಾ?
ಬಡತನದಿಂದ ಆಚೆ ಬರಲು ಹಾಕಿದ ಹೊಂಚು
ಈ ಕಳ್ಳಾಟ ಆಡಿದ ವ್ಯಕ್ತಿಯನ್ನು ಪ್ಸಿಯೋಡಾನ್ಮಿ ಕ್ಸಿಯಾಜುನ್ ಎಂದು ಗುರುತಿಸಲಾಗಿದೆ. ಚೀನಾದ ಜೀಲಿನ್ ಪ್ರಾಂತ್ಯದ ವ್ಯಕ್ತಿ ಈತನಾಗಿದ್ದು. ಇವನ ವಯಸ್ಸು ಎಷ್ಟು ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಈತ ಶಾಲಾ ಕಾಲೇಜು ದಿನಗಳಲ್ಲಿಯೇ ತೀವ್ರ ಆರ್ಥಿಕ ತೊಂದರೆಗೆ ಸಿಲುಕಿ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಎಂದು ತಿಳಿದು ಬಂದಿದೆ. ತಾಯಿ ಬಾತ್ ಹೌಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ತಂದೆ ಪಾರ್ಟ್ ಟೈಮ್ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೆಲ್ಲವನ್ನೂ ಕಂಡ ಕ್ಸಿಯಾಜುನ್ ಬಡತನದಿಂದ ಹೇಗಾದರು ಮಾಡಿ ಹೊರಬರಬೇಕು ಎಂದು ತೀರ್ಮಾನಿಸಿದ್ದ.
ಮೊದಲ ಪತ್ನಿಯಿಂದ ಮನೆಯಿಂದ ಆಚೆ ಹಾಕಿದರೂ ಬುದ್ಧಿ ಬಿಡಲಿಲ್ಲ
ಇದಾದ ಬಳಿಕ ತನ್ನನ್ನು ತಾನು ಅತ್ಯಂತ ಶ್ರೀಮಂತ ಎಂದು ಜನರು ಗುರುತಿಸಿಕೊಳ್ಳುವಂತೆ ನಾಟಕವಾಡತೊಡಗಿದ. ಮೊದಲ ಹೆಂಡತಿಯ ಮುಂದೆ ತಾನೊಬ್ಬ ದೊಡ್ಡ ಶ್ರೀಮಂತ ಎಂಬಂತೆ ತನ್ನನ್ನು ತಾನು ನಿರೂಪಿಸಿಕೊಂಡ. ನಾನೊಂದು ದೊಡ್ಡ ಯಶಸ್ವಿ ಉದ್ಯಮವನ್ನು ನಡೆಸುತ್ತಿದ್ದೇನೆ ಎಂದು ಹೇಳಿಯೇ ನಂಬಿಸಿದ. ಅದನ್ನು ನಂಬಿದ ಮೊದಲ ಪತ್ನಿ ಅವನೊಂದಿಗೆ ಸಂಸಾರ ನಡೆಸಿದಳು. ಕೊನೆಗೊಂದು ದಿನ ಇವನ ಬಳಿ ಏನೂ ಇಲ್ಲ ಎಂದು ತಿಳದ ಬಳಿಕವೂ ಡಿವೋರ್ಸ್ ನೀಡಲಿಲ್ಲ ಬದಲಿಗೆ ನಾನು ನನ್ನ ಸ್ವಂತ ಶಕ್ತಿಯಿಂದ ನನ್ನ ಮಗನನ್ನು ಬೆಳೆಸುತ್ತೇನೆ ಎಂದು ಆತನನ್ನು ಮನೆಯಿಂದ ಆಚೆ ಹಾಕಿದಳು.
ಇದನ್ನೂ ಓದಿ:ಗರ್ಲ್ ಫ್ರೆಂಡ್ ಹೊಸ ಹೇರ್ ಸ್ಟೈಲ್ ಇಷ್ಟವಾಗದೇ ಇರಿದು ಕೊಂ*ದೇ ಬಿಟ್ಟ ಪ್ರಿಯಕರ; ಆಗಿದ್ದೇನು?
ಇದಾದ ಒಂದು ವಾರದ ಬಳಿಕ ಮತ್ತೊಂದು ಹುಡುಗಿಯನ್ನು ಅದೇ ಹಳೆ ಜಾಲದಲ್ಲಿ ಬೀಳಿಸಿಕೊಂಡ ಕಿಲಾಡಿ ಆಕೆಯಿಂದ 1 ಲಕ್ಷ 40 ಸಾವಿರ ಯುವಾನ್ ತೆಗೆದುಕೊಂಡು ಮೊದಲ ಪತ್ನಿಯಿದ್ದ ಕಾಂಪ್ಲೆಕ್ಸ್ನಲ್ಲಿಯೇ ಬೇರೆ ಮನೆಯಲ್ಲಿ ಇರಲು ಆರಂಭಿಸಿದ. ಇವನ ಆಟ ಇಷ್ಟಕ್ಕೆ ಮುಗಿಯಲಿಲ್ಲ. ಇದೇ ರೀತಿ ಮತ್ತೆ ಮೂವರನ್ನು ತನ್ನ ಜಾಲದಲ್ಲಿ ಬೀಳಿಸಿಕೊಂಡು ಎಲ್ಲರಿಂದಲೂ ಹಣ ವಸೂಲಿ ಮಾಡಿ ಅದೇ ಕಾಂಪ್ಲೆಕ್ಸ್ನಲ್ಲಿ ಬೇರೆ ಬೇರೆ ಮನೆಯಲ್ಲಿ ವಾಸಿಸತೊಡಗಿದೆ. ತನ್ನನ್ನು ತಾನು ಶ್ರೀಮಂತನೆಂಬತೆ ನಿರೂಪಿಸಿಕೊಂಡು ಬರಲು ಶುರು ಮಾಡಿದ, ಯಾವಾಗ ಅವನ ಬ್ಯಾಗ್ನಲ್ಲಿ ನಕಲಿ ಕರೆನ್ಸಿ ನೋಟುಗಳನ್ನು ಒಬ್ಬಳು ನೋಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದಳೋ ಆಗಲೇ ಈತನ ಇಡೀ ಜೀವನ ಚರಿತ್ರೆ ಬಯಲಾಗಿ ಇಡೀ ಚೀನಾದಲ್ಲಿಯೇ ದೊಡ್ಡ ಸುದ್ದಿಯಾದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ