Advertisment

ಮದುವೆಯಾದ ಮೊದಲ ರಾತ್ರಿ ಮಧು ಮಂಚಕ್ಕೆ ಬಂದ ವರನಿಗೆ ಶಾಕ್​; ಪತ್ನಿಯೊಂದಿಗೆ ಯಾರಿದ್ದರು ಗೊತ್ತಾ?

author-image
Gopal Kulkarni
Updated On
ಮದುವೆಯಾದ ಮೊದಲ ರಾತ್ರಿ ಮಧು ಮಂಚಕ್ಕೆ ಬಂದ ವರನಿಗೆ ಶಾಕ್​; ಪತ್ನಿಯೊಂದಿಗೆ ಯಾರಿದ್ದರು ಗೊತ್ತಾ?
Advertisment
  • ಮಧಮಂಚದಲ್ಲಿ ಗಂಡನಿಗಾಗಿ ಕಾಯುತ್ತ ಕುಳಿತಿದ್ದ ವಧುವಿಗೆ ಮೋಸ
  • ಪತಿಯ ಬದಲು ಪಕ್ಕದ ಮನೆಯವನು ಮಧಮಂಚದಲ್ಲಿ ಬಂದು ಸೇರಿದ್ದ
  • ಪತಿಯೇ ಎಂದು ಸಹಕರಿಸಿದ ಹೆಣ್ಣುಮಗಳು, ಆಮೇಲೆ ಮೂಡಿತು ಅನುಮಾನ!

ಯಾರ ಹೂವು ಯಾರ ಮುಡಿಗೋ ಅಂತ ಒಂದು ಹಾಡು ಇದೆ. ಮತ್ತೊಂದು ಒಂದೊಂದು ಅಕ್ಕಿಯ ಕಾಳಿನಲೂ ತಿನ್ನೋರ ಹೆಸರು ಕೆತ್ತಿಹುದೋ ಅಂತಲೂ ಹಾಡು ಇದೆ. ಈ ಪೀಠಿಕೆ ಇಲ್ಲಿ ಹಾಕಲು ಒಂದು ಕಾರಣವೂ ಇದೆ. ಅದು ಯಾರೋ ಮದುವೆಯಾದ ಹೆಣ್ಣನ್ನು ಮೊದಲ ರಾತ್ರಿಯಲ್ಲಿ ಮತ್ಯಾರೋ ಅವಳೊಂದಿಗೆ ಮಧುರ ಸಮಯ ಕಳೆದು ಪರಾರಿಯಾದ ಘಟನೆ ಉತ್ತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ.

Advertisment

ಇಲ್ಲಿ ಎಲ್ಲವೂ ನಡೆದಿದ್ದು ಕತ್ತಲಲ್ಲಿಯೇ, ಆ ಗಾಢ ಕತ್ತಲೆ ಒಬ್ಬನಿಗೆ ವರದಾನವಾಗಿ ಲಭಿಸಿದ್ರೆ. ಮತ್ತೊಬ್ಬನಿಗೆ ಶಾಪವಾಗಿ ಪರಿಣಮಿಸಿದೆ. ಈ ಘಟನೆ ನಡೆದು ಹೆಚ್ಚು ಕಡಿಮೆ ಎರಡೂವರೆ ತಿಂಗಳುಗಳೇ ಕಳೆದಿದ್ದು ಈಗ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಮದುವೆಯಾದ ಮೊದಲ ರಾತ್ರಿಯಂದು ವಧು ಮಧು ಮಂಚದಲ್ಲಿ ಮಲಗಿದ್ದಾಳೆ. ಅದೇ ಸಮಯಕ್ಕೆ ಸರಿಯಾಗಿ ಕರೆಂಟ್ ಹೋಗಿದೆ. ಸಿಕ್ಕಿದ್ದೇ ಚಾನ್ಸ್ ಅಂತ ಪಕ್ಕದ ಮನೆಯವನು ನೇರವಾಗಿ ಮಧುಮಂಚದ ಕೋಣೆಗೆ ನುಗ್ಗಿದ್ದಾನೆ. ಪೂರ್ತಿ ಕತ್ತಲು, ತನ್ನನ್ನು ಮದುವೆಯಾದ ಹುಡುಗನೇ ಇರಬೇಕು ಅಂತ ಭಾವಿಸಿದ ಹೆಣ್ಣುಮಗಳು ಅವನೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸಿದ್ದಾಳೆ. ಆದರೆ ಸಮಯ ಕಳೆದಂತೆ ಅವಳಿಗೆ  ಸಣ್ಣಗೆ ಅನುಮಾನ ಮೂಡಲು ಶುರುವಾಗಿದೆ, ಅದು ದಟ್ಟವಾಗುವಷ್ಟರಲ್ಲಿ ಏನು ನಡೆಯಬೇಕಾಗಿತ್ತೋ ಅದೆಲ್ಲವೂ ನಡೆದು ಹೋಗಿದೆ.

ಇದನ್ನೂ ಓದಿ:ಮ್ಮನ ಹಾಲಿಗೆ ಅಳುತ್ತಿದ್ದ ನವಜಾತ ಶಿಶುವಿಗೆ ಹಸುವನ್ನೇ ಕೊಡಿಸಿದ ಜಡ್ಜ್; ತಪ್ಪದೇ ಈ ಸ್ಟೋರಿ ಓದಿ!

ತನಗೆ ಮೋಸವಾಯ್ತು ಎಂದು ಅರಿತ ಹೆಣ್ಣು ಮಗಳು ಕೂಡಲೇ ಜೋರಾಗಿ ಚೀರಿ ಎಲ್ಲರನ್ನೂ ಕರೆದಿದ್ದಾಳೆ. ಮನೆಯಲ್ಲಿದ್ದ ಎಲ್ಲರೂ ಬಂದು ನೋಡಿದಾಗ ಹೆಣ್ಣು ಮಗಲ ಪಕ್ಕ ಕಂಚು ಎಂಬ ನೀಚ ಮಲಗಿದ್ದು ಕಂಡು ಬಂದಿದೆ. ಇದು ಅವನ ಮನೆಯವರಿಗೂ ಗೊತ್ತಾಗಿ ಅವನ ಇಬ್ಬರು ಸಹೋದರರು ಬಂದು ವಾದಕ್ಕೆ ಬಿದ್ದಿದ್ದಾರೆ. ಆಗಷ್ಟೇ ಮದುವೆಯಾದ ಹುಡುಗಿಯದೇ ತಪ್ಪು ಎಂದು ವಾದಿಸಿದ್ದಾರೆ. ಕೂಡಲೇ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯೊಂದಿಗೆ ಮಧುಮಂಚ ಅನುಭವಿಸಿದ ನೀಚ ಕಂಚು ಸೇರಿ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆ ಕಳೆದ ಜುಲೈ 18 ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ.

Advertisment

ಇದನ್ನೂ ಓದಿ: BREAKING NEWS: ರತನ್‌ ಟಾಟಾ ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ

ಇನ್ನೂ ಅಚ್ಚರಿಯ ವಿಚಾರ ಅಂದ್ರೆ ಘಟನೆ ನಡೆದ ಬಳಿಕ ಸಂತ್ರಸ್ತೆ ಆಗಸ್ಟ್ 7 ರಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಆದ್ರೆ ಗೋಪಿಗಂಜ್ ಪೊಲೀಸ್ ಠಾಣೆಯ ಪೊಲೀಸರು ಆಕೆಯ ದೂರನ್ನು ಗಣನೆಗೆ ತೆಗೆದುಕೊಳ್ಳದೇ ಆಕೆಯನ್ನು ಆಚೆ ಹಾಕಿದ್ದಾರೆ. ಆದ್ರೆ ಛಲ ಬಿಡದ ಸಂತ್ರಸ್ತೆ ನೇರ ಕೋರ್ಟ್​ಗೆ ಹೋಗಿ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಕೂಡಲೇ ಕಂಚು ಹಾಗೂ ಅವನ ಸಹೋದರರ ವಿರುದ್ಧ ಎಫ್​ಐಆರ್ ದಾಖಲಿಸಿ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment