/newsfirstlive-kannada/media/post_attachments/wp-content/uploads/2025/03/NIGHT-AND-MORNING-BATH.jpg)
ಭಾರತದಲ್ಲಿ ಬೆಳಗ್ಗೆ ಎದ್ದು ತಕ್ಷಣ ಸ್ನಾನ ಮಾಡಿ ತಮ್ಮ ದೇವರ ಅನುಷ್ಠಾನಕ್ಕೆ ಕುಳಿತುಕೊಳ್ಳುವುದು ಸಹಸ್ರಾರು ವರ್ಷದಿಂದ ನಡೆದುಕೊಂಡು ಬಂದಿದರುವ ಪದ್ಧತಿ. ಭಾರತೀಯ ಧರ್ಮಗ್ರಂಥಗಳು ಹಾಗೂ ಪುರಾಣಗಳಲ್ಲಿ ಹಾಗೆಯೇ ಉಲ್ಲೇಖವಿದೆ. ಅಲ್ಲಿ ಹೇಳುವ ಪ್ರಕಾರ ನಸುಕಿನಲ್ಲಿ ನಾವು ಸ್ನಾನವು ತುಂಬಾ ಆರೋಗ್ಯಕಾರಿಯಂತೆ. ಆದ್ರೆ ಇದನ್ನು ನಾವು ನಮ್ಮ ಪೂರ್ವ ನೆರೆ ದೇಶಗಳಿಗೆ ಹೋಲಿಸಿ ನೋಡಿದರೆ ಅಲ್ಲಿ ತುಂಬಾ ಸ್ನಾನದ ವಿಷಯ ನಮಗಿಂತ ತದ್ವಿರುದ್ಧವಿದೆ. ಅವರು ರಾತ್ರಿ ಮಲಗಲು ಹೋಗುವ ಮುನ್ನ ಸ್ನಾನ ಮಾಡುತ್ತಾರೆ. ಅವರು ಇಡೀ ದಿನ ಕೆಲಸ ಮಾಡಿ ಮನೆಗೆ ಬಂದ ಬಳಿಕವೂ ಮಲುಗುವ ಕೆಲವು ಹೊತ್ತಿನ ಮುನ್ನವೇ ಸ್ನಾನ ಮಾಡುವುದು. ಅವರ ನಂಬಿಕೆಯ ಪ್ರಕಾರ ಸಂಜೆ ಇಲ್ಲವೇ ರಾತ್ರಿ ಮಾಡುವ ಸ್ನಾನ ಆರೋಗ್ಯಕ್ಕೆ ತುಂಬಾ ಉತ್ತಮವಂತೆ.
ಸ್ನಾನ ಮಾಡುವ ವಿಚಾರದಲ್ಲಿ ವಿಶ್ವದಲ್ಲಿಯೇ ಅನೇಕ ವೈರುಧ್ಯಗಳಿವೆ. ಸ್ನಾನ ಮಾಡುವ ಸಮಯದಲ್ಲಿಯೂ ಕೂಡ ಅನೇಕ ರೀತಿಯ ವ್ಯತ್ಯಾಸಗಳಿವೆ. ಅಮೆರಿಕನ್ನರು ಹಾಗೂ ಯುರೋಪಿಯನ್ನರು ನಸುಕಿನ ಜಾವದಲ್ಲಿ ಸ್ನಾನಕ್ಕೆ ಹೋಗುತ್ತಾರೆ. ಆದರೆ ಏಷ್ಯಾ ಖಂಡದಲ್ಲಿ ಮಾತ್ರ ಈ ಒಂದು ಸ್ನಾನದ ವಿಚಾರದಲ್ಲಿ ಅನೇಕ ಬಗೆಯ ವ್ಯತ್ಯಾಸಗಳಿವೆ. ಹಾಗಿದ್ರೆ ವಿಜ್ಞಾನಿಗಳು ಹೇಳುವ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮ?
ಜಪಾನ್, ಚೀನಾ ಮತ್ತು ಕೋರಿಯಾ ಇವುರ ಪ್ರಾಚೀನ ಕಾಲದಿಂದಲೂ ಕೂಡ ರಾತ್ರಿ ಹೊತ್ತಲ್ಲೇ ಸ್ನಾನ ಮಾಡುವುದು ರೂಢಿಯಿಟ್ಟುಕೊಂಡು ಬಂದಿದ್ದಾರೆ. ರಾತ್ರಿ ಹೊತ್ತು ಸ್ನಾನ ಮಾಡುವುದುರಿಂದ ದೇಹದಲ್ಲಿ ಸೇರಿರುವ ಇಡೀ ದಿನದ ವಿಷ ಮತ್ತು ಕೊಳಕು ಸಂಪೂರ್ಣವಾಗಿ ತೊಳೆದುಕೊಂಡು ಹೋಗುತ್ತದೆ ಎಂಬುದು ಅವರ ನಂಬಿಕೆ. ಅದು ಮಾತ್ರವಲ್ಲ ರಾತ್ರಿ ಸ್ನಾನ ಮಾಡುವುದರಿಂದ ಬೆಳಗಿನ ಹೊತ್ತು ಕೆಲಸ ಮಾಡಿ ಆಯಾಸಗೊಂಡಿರುವ ದೇಹಕ್ಕೆ ನಿರಾಳತೆ ಸಿಗುತ್ತದೆ ಹಾಗೂ ಒಳ್ಳೆಯ ನಿದ್ರೆಯೂ ಕೂಡ ಮಾಡಲು ಸಹಾಯಕವಾಗುತ್ತದೆ ಎಂಬುದು ಅವರ ವಾದ.
ಇದನ್ನೂ ಓದಿ:ಎರಡು ವಾರ ನೆಲದ ಮೇಲೆ ಮಲಗಿದ್ರೆ ಏನಾಗುತ್ತೆ? ನಿಮ್ಮ ದೇಹದಲ್ಲಾಗೋ ಬದಲಾವಣೆ ಏನು?
ಕೋರಿಯಾದ ಜನರು ಸಾಮಾನ್ಯವಾಗಿ ಇಡೀ ದಿನ ದುಡಿದು ಸುಸ್ತಾಗಿ ಬಂದು ಸಾಯಂಕಾಲ ಸ್ನಾನ ಮಾಡುತ್ತಾರೆ. ಇದರಿಂದ ದೇಹದ ಆಯಾಸ ನೀಗಿ, ನಿರಾಳತೆ ಮೂಡುತ್ತದೆ ಎಂಬುದು ಅವರ ನಂಬಿಕೆ ಮತ್ತು ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡಬಹುದು ಎಂಬುದು ಅವರ ನಂಬಿಕೆ. ಆದ್ರೆ ಪಾಶ್ಚಾತ್ಯ ದೇಶಗಳಾದ ಯುಎಸ್, ಯುರೋಪ್ ಮತ್ತು ಕೆನಡಾದವರು ಮುಂಜಾನೆಯ ಸ್ನಾನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.
ಇದನ್ನೂ ಓದಿ:ಮಹಿಳೆಯರೇ ಬಿ ಅಲರ್ಟ್; ಕೈ ತುಂಬಾ ಗೋರಂಟಿ ಹಾಕೋ ಮುನ್ನ ಇರಲಿ ಎಚ್ಚರ.. ಏಕೆ ಗೊತ್ತಾ?
ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅಂತ ನೋಡುವುದಾದ್ರೆ ಅವರು ಕೂಡ ರಾತ್ರಿಯ ಹೊತ್ತು ಮಾಡುವ ಸ್ನಾನವೇ ಉತ್ತಮ ಎನ್ನುತ್ತಾರೆ. ಮುಂಜಾನೆಯಿಂದ ಕೆಲಸದಲ್ಲಿ ತೊಡಗಿರುವ ದೇಹ ಸಂಜೆ ಅಥವಾ ರಾತ್ರಿ ಮಾಡುವ ಸ್ನಾನದಿಂದ ತಾಜಾತನವನ್ನು ಪಡೆಯುತ್ತದೆ. ಇಡೀ ದಿನ ಕೆಲಸದಲ್ಲಿ ತೊಡುಗುವುದರಿಂದ ಅದರಲ್ಲೂ ಕಾರ್ಮಿಕರು ಹೆಚ್ಚು ದೈಹಿಕವಾಗಿ ಕಾರ್ಯನಿರ್ವಹಿಸುವುದರಿಂದ ದೇಹಕ್ಕೆ ವಿಪರೀತ ಎನ್ನಿಸುವಷ್ಟು ಆಯಾಸವಾಗಿರುತ್ತದೆ. ಹೀಗಾಗಿ ರಾತ್ರಿ ಸ್ನಾನ ಮಾಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಎಲ್ಲಾ ಆಯಾಸಗಳು ಕಳೆದು ಹೋಗಿ ನಮ್ಮ ನಿದ್ರೆಯಲ್ಲಿಯೂ ಕೂಡ ಉತ್ತಮ ಸುಧಾರಣೆಯಾಗುತ್ತದೆ ಎನ್ನುತ್ತಾರೆ. ಸಂಶೋಧನೆಗಳ ಪ್ರಕಾರ ರಾತ್ರಿ ಮಲಗುವ ಮುನ್ನ ಮಾಡುವ ಸ್ನಾನವು ಒಳ್ಳೆಯ ನಿದ್ರೆಯನ್ನು ಕೊಡುತ್ತದೆಯಂತೆ.
ಮತ್ತೊಂದು ಸಂಶೋಧನೆಯ ಪ್ರಕಾರ ನೀವು ರಾತ್ರಿಯಲ್ಲಾಗಲಿ ಅಥವಾ ಹಗಲಿನಲ್ಲಾಗಲಿ ಈ ಎರಡು ಸ್ನಾನಗಳು ಉತ್ತಮವೇ. ಎರಡೂ ರೀತಿಯ ಸ್ನಾನಗಳಲ್ಲಿ ಪ್ರಯೋಜನವಿದೆ. ನಸುಕಿನಲ್ಲಿ ಮಾಡುವ ಸ್ನಾನ ನಿಮ್ಮನ್ನು ಇಡೀ ದೀನ ಚೈತನ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ದಿನದ ಆರಂಭವನ್ನು ಅದ್ಭುತವಾಗಿ ಇರುವಂತೆ ನೋಡಿಕೊಳ್ಳುತ್ತದೆ. ರಾತ್ರಿ ಮಾಡುವ ಸ್ನಾನ ದಿನವೀಡಿ ದೇಹಕ್ಕೆ ಆಗಿರುವ ಆಯಾಸವನ್ನು ನೀಗಿಸುತ್ತದೆ. ಇದಷ್ಟೇ ವ್ಯತ್ಯಾಸ ಎನ್ನುತ್ತಾರೆ ತಜ್ಞರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ