/newsfirstlive-kannada/media/post_attachments/wp-content/uploads/2025/04/KLB-FAMILY-CONFLICT.jpg)
ಕೌಟುಂಬಿಕ ಕಲಹದಿಂದಾಗಿ ಜೆಸ್ಕಾಂ ಇಲಾಖೆಯ ಅಧಿಕಾರಿ ತನ್ನ ಹೆಂಡತಿ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಜೀವ ತೆಗೆದು ಕೊನೆಗೆ ತಾನೂ ಅತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಂತಹ ಕೃತ್ಯಕ್ಕೆ ಕೈಹಾಕಿದವನನ್ನು ಜೆಸ್ಕಾಂ ಇಲಾಖೆಯ ಅಧಿಕಾರಿ ಸಂತೋಷ ಎಂದು ಗುರುತಿಸಲಾಗಿದೆ.
ಪತ್ನಿ ಶ್ರುತಿ, ಎರಡು ಪುಟ್ಟ ಮಕ್ಕಳನ್ನು ಕೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್, ಕಲಬುರಗಿಯ ಜೆಸ್ಕಾನಲ್ಲಿ ಸಿನಿಯರ್ ಅಸಿಸ್ಟಂಟ್ ಇಂಜಿಯಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಲಬುರಗಿ ನಗರರದ ಹೌಸಿಂಗ್ ಬೋರ್ಡ್ ಕಾಲೋನಿಯ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು. ಇಡೀ ಕುಟುಂಬವನ್ನೇ ಹತ್ಯೆಗೈದು ನಂತರ ಡೆತ್ ನೋಟ್ ಬರೆದಿದಟ್ಟ ಸಂತೋಷ್ ನೇಣಿಗೆ ಶರಣಾಗಿದ್ದಾರೆ. ಸುದೀರ್ಘ ಆರು ಪುಟಗಳ ಡೆತ್ನೋಟ್ ಬರೆದಿಟ್ಟಿರುವ ಸಂತೋಷ್ ಕೌಟುಂಬಿಕ ಕಲಹದಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ನಂಜುಂಡೇಶ್ವರನ ಮೊರೆ ಹೋದ ಮೀನಾ ತೂಗುದೀಪ.. ನಟ ದರ್ಶನ್‌ಗೆ ಇಂದು ಬಿಗ್ ರಿಲೀಫ್!
ಕೊಲೆ ಮಾಡಿದ ಬಳಿಕ ಪತ್ನಿಯ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಲಬುರಗಿ ಪೊಲೀಸ್ ಕಮಿಷನರ್ ಡಾ: ಶರಣಪ್ಪ ಎಸ್.ಡಿ ಭೇಟಿ ಪರಿಶೀಲನೆ ಮಾಡಿದ್ದು. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೋಷ್, ಕಳೆದ 15 ವರ್ಷಗಳ ಹಿಂದೆ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಶ್ರುತಿಯನ್ನು ಮದುವೆಯಾಗಿದ್ದರು. ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಅದರೆ ಕೆಲವು ವರ್ಷಗಳ ನಂತರ ಪತಿ ಸಂತೋಷ್ ಮನೆಯವರು, ನೀನು ತವರು ಮನೆಯಿಂದ ಏನು ತರುತ್ತಿಲ್ಲ ಎಂದು ಹಲ್ಲೆ ಮಾಡಿ ಕಿರುಕುಳ ನೀಡಿದ್ದರಂತೆ.ಈ ಕೌಟುಂಬಿಕ ಜಗಳ ಕಳೆದ 4 ವರ್ಷಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತಂತೆ. ಆಗ ತವರು ಮನೆಯನ್ನು ಸೇರಿಕೊಂಡಿದ್ದ ಪತ್ನಿಯನ್ನು ಸಂತೋಷ್ ಮನವೊಲಿಸಿ, ಬೇರೆ ಮನೆ ಮಾಡಿ ಜೊತೆಯಾಗಿ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿದ್ದರು.
ಇದಾದ ಬಳಿಕವೂ ಸಂತೋಷ್ ಮತ್ತು ಶ್ರುತಿ ನಡುವೆ ಜಗಳಗಳು ನಡೆಯುತ್ತಲೇ ಇತ್ತಂತೆ. ದಂಪತಿಗೆ ಹತ್ತು ವರ್ಷದ ಮನೀಷ್ ಎಂಬ ಮಗ ಇದ್ದ. ಕಳೆದ ನಾಲ್ಕು ತಿಂಗಳುಗಳ ಹಿಂದೆ ಮತ್ತೊಂದು ಗಂಡು ಮಗು ಈ ದಾಂಪ್ಯಕ್ಕೆ ಗುರುತಾಗಿ ಜನಿಸಿತ್ತು.
ಇದನ್ನೂ ಓದಿ:ರೋಡ್ ರೇಜ್ ರೌಡಿಸಂ.. ಬೆಂಗಳೂರಲ್ಲಿ ರಪ್ ರಪ್ ಅಂತ ಹೆಲ್ಮೆಟ್ ಅಲ್ಲೇ ಹೊಡೆದ ಕಿರಾತಕರು!
ಇತ್ತೀಚೆಗಷ್ಟೇ ಅದ್ದೂರಿಯಾಗಿ ನಾಮಕರಣ ಕೂಡ ಮಾಡಿದ್ದರು. ಆದ್ರೆ ಗಂಡ ಕಿರುಕುಳ ನೀಡುತ್ತಿದ್ದರೂ ತನ್ನ ಪೋಷಕರು ಸಂತೋಷ್ಗೆ ಏನು ಹೇಳುತ್ತಿಲ್ಲ ಎಂದು ಶ್ರು ತಿ ತನ್ನ ಹೆತ್ತವರನ್ನು ದೂರ ಮಾಡಿದ್ದಳಂತೆ. ಮಗು ಜನಿಸಿದಾಗಲೂ ಮಗುವನ್ನ ನೋಡಲು ಬಿಟ್ಟಿಲ್ಲವಂತೆ. ಇದೀಗ ಕೌಟುಂಬಿಕ ಕಲಹ ದ್ವೇಷ ಹಿನ್ನೆಲೆ ಸಂತೋಷ್ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗ- ಅಳಿಯ, ಮೊಮ್ಮಕಳನ್ನ ಕಳೆದುಕೊಂಡ ಶೃತಿ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ