/newsfirstlive-kannada/media/post_attachments/wp-content/uploads/2024/08/Darshan-Sandalwood.jpg)
ಕನ್ನಡ ಚಲನಚಿತ್ರದ ಉಳಿವಿಗಾಗಿ ಕಲಾವಿದರ ಸಂಘದಲ್ಲಿ ಇಂದು ಹೋಮ, ಹವನ ನಡೆದಿದೆ. ವಿಶೇಷ ಪೂಜೆಯಲ್ಲಿ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಹೋಮ-ಹವನದ ಬಳಿಕ ಸ್ಯಾಂಡಲ್‌ವುಡ್ ನಟರು ಜೈಲಿನಲ್ಲಿರುವ ದರ್ಶನ್ ಅವರ ಭೇಟಿಗೆ ತೆರಳಿದ್ದಾರೆ.
ಇದನ್ನೂ ಓದಿ: ದರ್ಶನ್ ಉಳಿಸಲು ಹೋಮ ಮಾಡಿದ್ರೆ ತಪ್ಪೇನು..? ಹಿರಿಯ ನಟಿ ಗಿರಿಜಾ ಲೋಕೇಶ್ ಪ್ರಶ್ನೆ
ಕಲಾವಿದರ ಸಂಘದ ಹೋಮ, ಹವನದಲ್ಲಿ ಭಾಗಿಯಾದ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಹಾಗೂ ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದಾರೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ ಹವನ ನಡೆದಿದ್ದು, ಪ್ರಸಾದ ಪಡೆದ ಸ್ಯಾಂಡಲ್‌ವುಡ್ ನಟರು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ.
ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ ಅವರು ದರ್ಶನ್ ಅವರ ಭೇಟಿ ಸಮಯಾವಕಾಶ ಕೇಳಿದ್ದು, ಜೈಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಸ್ಯಾಂಡಲ್‌ವುಡ್ ನಟರು ಕಲಾವಿದರ ಸಂಘದಲ್ಲಿ ನಡೆದ ಪೂಜೆಯ ಪ್ರಸಾದವನ್ನು ದರ್ಶನ್‌ಗೆ ನೀಡಿ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ದರ್ಶನ್ಗಾಗಿ ಕನ್ನಡ ಇಂಡಸ್ಟ್ರಿ ಹೋಮ ಮಾಡಿಸ್ತಿದೆಯಾ..? ಅನುಮಾನಗಳಿಗೆ ನಿರ್ಮಾಪಕ ರಾಕ್ಲೈನ್ ಸ್ಪಷ್ಟನೆ
ಕಲಾವಿದರ ಸಂಘದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದ ಅರ್ಚಕ, ಪೂಜಾರಿ ಶಶಿಕುಮಾರ್ ಅವರು ಆಗಮಿಸಿದ್ದರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಬಂಡೆ ಮಹಾಕಾಳಿ ದೇವಿಯನ್ನು ಪೂಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪೂಜಾರಿ ಶಶಿಕುಮಾರ್ ಅವರು ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ