ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ
ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ 5 ಸ್ಪರ್ಧಿಗಳ ಹೆಸರು ರಿವೀಲ್!
ಬಿಗ್ ಬಾಸ್ ಸೀಸನ್ 11 ಸುಲಭವಾಗಿರಲ್ಲ ಎಂದ ಕಿಚ್ಚ ಸುದೀಪ್
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಈ ವೀಕೆಂಡ್ ಸುದೀಪ್ ಜೊತೆ ಬಿಗ್ ಬಾಸ್ ಕಥೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿರುವ ಬಿಗ್‌ಬಾಸ್ ತಂಡ ಈ ಬಾರಿ ಬಿಗ್ ಸರ್‌ಪ್ರೈಸ್ ನೀಡಿದೆ.
ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ ಕಲರ್ಸ್ ಕನ್ನಡ ಬಿಗ್‌ಬಾಸ್ ತಂಡ ಹಾಗೂ ಕಿಚ್ಚ ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಬಿಗ್‌ಬಾಸ್ ಟೀಮ್, ಈಗಾಗಲೇ ಬಿಗ್‌ಬಾಸ್ ಸ್ಪರ್ಧಿಗಳ ಹೆಸರು ಫೈನಲ್ ಆಗಿದೆ ಎಂದಿದ್ದಾರೆ.
ಸೀಸನ್ 11ರ ಕಂಟೆಸ್ಟೆಂಟ್ ಲಿಸ್ಟ್ ರೆಡಿಯಾಗಿದೆ. ಈಗಾಗಲೇ ಕಲರ್ಸ್ ತಂಡ ಮ್ಯಾನೇಜ್‌ಮೆಂಟ್ ಮುಂದೆ ಅದನ್ನು ಪ್ರೆಸೆಂಟ್ ಮಾಡಿದೆ ಎಂದು ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಬಿಗ್‌ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ’- ಅಚ್ಚರಿ ಹೇಳಿಕೆ ಕೊಟ್ಟ ನಟ ಸುದೀಪ್
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪ್ರತಿಬಾರಿ ಬೇರೆಯದ್ದೇ ಆಗಿರುತ್ತೆ. ಹೊಸ ವ್ಯಕ್ತಿತ್ವಗಳು ಕಾಣಿಸೋಕೆ ಶುರುವಾಗುತ್ತೆ. ಬಿಗ್ ಬಾಸ್ ಸೀಸನ್ 11 ಸುಲಭವಾಗಿರಲ್ಲ. ಸ್ವರ್ಗ – ನರಕ ಇರಬೇಕು. ಇವೆರಡು ಕಾನ್ಸೆಪ್ಟ್ ಅಲ್ಲಿ ಶೋ ನಡೆಯಲಿದೆ ಎಂದು ಸುದೀಪ್ ಹೇಳಿದ್ದಾರೆ.
ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್!
ಈ ಬಾರಿ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್‌ಪ್ರೈಸ್ ನೀಡಲಾಗುತ್ತಿದೆ. ಶೋಗೂ ಮೊದಲೇ 5 ಜನ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ. ಇದೇ ಶನಿವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದೇ ಶೋನಲ್ಲಿ ಬಿಗ್‌ಬಾಸ್ ಸೀಸನ್ 11ರ 5 ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ