/newsfirstlive-kannada/media/post_attachments/wp-content/uploads/2024/04/vote-1-1.jpg)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಇಂದು ಭರ್ಜರಿ ಮತದಾನ ನಡೆದಿದೆ. ರಾಜ್ಯದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಶೇಕಡಾ 63.90ರಷ್ಟು ಮತದಾನ ಆಗಿದ್ದು, ಕೊನೆ ಹಂತದಲ್ಲೂ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸಂಜೆ 5 ಗಂಟೆವರೆಗಿನ ಮತದಾನ!
ಬೆಂಗಳೂರು ಕೇಂದ್ರ 48.61%
ಬೆಂಗಳೂರು ಉತ್ತರ - 50.04%
ಬೆಂಗಳೂರು ಗ್ರಾಮಾಂತರ 61.78%
ಬೆಂಗಳೂರು ದಕ್ಷಿಣ - 49.37%
ಚಾಮರಾಜನಗರ - 69.60%
ಚಿಕ್ಕಬಳ್ಳಾಪುರ - 70.97%
ಚಿತ್ರದುರ್ಗ - 67.00%
ದಕ್ಷಿಣ ಕನ್ನಡ - 71.83%
ಹಾಸನ - 72.13 %
ಕೋಲಾರ - 71.26%
ಮಂಡ್ಯ - 74.87%
ಮೈಸೂರು - 65.85 %
ತುಮಕೂರು - 72.10%
ಉಡುಪಿ, ಚಿಕ್ಕಮಗಳೂರು - 72.13%
ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗಿದ್ದು, ಈ ಬಾರಿಯೂ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ವೋಟಿಂಗ್ ದಾಖಲಾಗುವ ಸಾಧ್ಯತೆ ಇದೆ. ಸಂಜೆ 5 ಗಂಟೆಯ ವೇಳೆಗೆ ಸಕ್ಕರೆ ನಾಡು ಮಂಡ್ಯದಲ್ಲಿ ಶೇಕಡಾ 74.87ರಷ್ಟು ಮತದಾನ ಆಗಿದೆ. ಅತಿ ಕಡಿಮೆ ಅಂದ್ರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಶೇಕಡಾ 48.61ರಷ್ಟು ವೋಟಿಂಗ್ ನಡೆದಿದೆ.
ಇದನ್ನೂ ಓದಿ: ‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?
ದಕ್ಷಿಣ ಕನ್ನಡದಲ್ಲೂ ಮತದಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಇಲ್ಲಿವರೆಗೂ ಶೇಕಡಾ 71.83ರಷ್ಟು ಮತದಾನ ನಡೆದಿದೆ. ಅದರಲ್ಲೂ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಎಂಬ ಕುಗ್ರಾಮದಲ್ಲಿ ನೂರಕ್ಕೆ ನೂರು ಮತದಾನ ಮಾಡಲಾಗಿದೆ. ಕುಗ್ರಾಮದಲ್ಲಿರುವ 111 ಮತದಾರರೂ ತಮ್ಮ ಹಕ್ಕು ಚಲಾಯಿಸುವಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ