ಕೇರಳದಲ್ಲಿ ಮತ್ತೆ ಇಬ್ಬರು ಕನ್ನಡಿಗರ ಶವ ಪತ್ತೆ.. ಒಂದೇ ಕಡೆ ಸಿಲುಕಿದ್ದ ಅಮ್ಮ-ಮಗ; ಹುಡುಕಾಡುತ್ತಿದ್ದ ಅಜ್ಜಿ ಕಣ್ಣೀರು

author-image
admin
Updated On
ಕೇರಳದಲ್ಲಿ ಮತ್ತೆ ಇಬ್ಬರು ಕನ್ನಡಿಗರ ಶವ ಪತ್ತೆ.. ಒಂದೇ ಕಡೆ ಸಿಲುಕಿದ್ದ ಅಮ್ಮ-ಮಗ; ಹುಡುಕಾಡುತ್ತಿದ್ದ ಅಜ್ಜಿ ಕಣ್ಣೀರು
Advertisment
  • ಕೇರಳದಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ 9 ಮಂದಿ ಕಣ್ಮರೆ
  • ನಿನ್ನೆ ರಾಹುಲ್ ಗಾಂಧಿ ಅವರು ಈ ಅಜ್ಜಿಯ ದುಃಖ ಕೇಳಿ ಮಾತನಾಡಿದ್ದರು
  • ಸಿಎಂ ಸಿದ್ದರಾಮಯ್ಯ ಅಜ್ಜಿಯ ಜೊತೆ ದೂರವಾಣಿ ಮೂಲಕ ಚರ್ಚೆ

ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹೆಣಗಳ ರಾಶಿ, ರಾಶಿಯೇ ಸಿಕ್ಕಿದೆ. ಮಣ್ಣಿನ ಅವಶೇಷಗಳಡಿ ಹೂತಿದ್ದ ಮೃತದೇಹಗಳನ್ನು ತೆಗೆದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಇಂದು ಕೇರಳದ ಚೂರಲ್‌ಮಲಾ ಶಾಲೆಯ ಸಮೀಪ ಇಬ್ಬರು ಕನ್ನಡಿಗರ ಮೃತದೇಹ ಪತ್ತೆಯಾಗಿದೆ.

ಚೂರಲ್‌ಮಲಾ ಶಾಲೆ ಸಮೀಪ ಮಣ್ಣಿನಡಿ ಸಿಲುಕಿದ್ದ ಶವಗಳನ್ನು ಅಧಿಕಾರಿಗಳು ಹೊರ ತೆಗೆದಿದ್ದಾರೆ. ಒಂದೇ ಜಾಗದಲ್ಲಿ ಸಿಕ್ಕ ಅಮ್ಮ- ಮಗನ ಶವವನ್ನು ಗುರುತಿಸಲಾಗಿದೆ. ಮೃತರನ್ನು ಮೈಸೂರು ಜಿಲ್ಲೆ ತಿ.ನರಸೀಪುರದ ಉಕ್ಕಲಗೇರಿ ಮೂಲದವರು ಎನ್ನಲಾಗಿದೆ.

ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್‌ ಹೇಳಿಕೆ 

ಮೈಸೂರು ಮೂಲದ ಅಜ್ಜಿ ಮಹದೇವಮ್ಮನವರ ಒಂದೇ ಕುಟುಂಬದ 9 ಮಂದಿ ಚೂರಲ್‌ಮಲಾ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದರು. ನಿನ್ನೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಈ ಅಜ್ಜಿಯ ದುಃಖ ಕೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರು ಅಜ್ಜಿಯ ಜೊತೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದರು.

ಇದನ್ನೂ ಓದಿ: ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!

ಇಂದು ಮಹದೇವಮ್ಮನವರ ಸೊಸೆ ಹಾಗೂ ಮೊಮ್ಮಗನ ಮೃತದೇಹ ಪತ್ತೆಯಾಗಿದೆ. ಒಂದೇ ಜಾಗದಲ್ಲಿ ಅಮ್ಮ- ಮಗನ ಶವ ಸಿಕ್ಕಿದ್ದು, ರಕ್ಷಣಾ ಸಿಬ್ಬಂದಿ ಮೆಪ್ಪಾಡಿಯ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದಾರೆ. ಶವಾಗಾರಕ್ಕೆ ಬಂದ ಅಜ್ಜಿ ಮಹದೇವಮ್ಮ ಶವಗಳನ್ನು ಗುರುತಿಸಿ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment