/newsfirstlive-kannada/media/post_attachments/wp-content/uploads/2024/05/11-Year-Boy-Cricket-Death.jpg)
ಪುಣೆ: ನಿಜಕ್ಕೂ ಇದು ಶಾಕಿಂಗ್ ಘಟನೆ. ಕ್ರಿಕೆಟ್ ಆಡುತ್ತಿದ್ದ ಬಾಲಕ ಕುಸಿದು ಬಿದ್ದು ಸಾವನ್ನಪ್ಪಿರೋ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಬಾಲಕನ ಕೊನೇ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುಣೆಯ ಲೋಹೆಗಾಂವ್‌ನಲ್ಲಿ ತನ್ನ ಸ್ನೇಹಿತರ ಜೊತೆ ಬಾಲಕ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಈ ದುರಂತ ನಡೆದಿದೆ. 11 ವರ್ಷದ ಬಾಲಕ ಬೌಲಿಂಗ್ ಮಾಡುತ್ತಿದ್ದು, ಬಾಲು ಖಾಸಗಿ ಅಂಗಕ್ಕೆ ಹೊಡೆದಿದೆ. ಬಾಲು ಬಿದ್ದ ಪೆಟ್ಟಿಗೆ ಬಾಲಕ ಸ್ಥಳದಲ್ಲೇ ನೋವಿನಿಂದ ಕುಸಿದು ಬಿದ್ದಿದ್ದಾನೆ.
ಇದನ್ನೂ ಓದಿ:ಬಸ್​ ಏರುವ ಮುನ್ನ ಹೃದಯಾಘಾತ.. ಚುನಾವಣಾ ಸಿಬ್ಬಂದಿ ಕುಸಿದು ಬಿದ್ದು ಸಾವು
ನೋವು ತಾಳಲಾರದೇ ಸಾವನ್ನಪ್ಪಿದ 11 ವರ್ಷದ ಬಾಲಕನನ್ನು ಶೌರ್ಯ ಖಡ್ವೆ ಎಂದು ಗುರುತಿಸಲಾಗಿದೆ. ಕಳೆದ ಮೇ 2ರಂದು ಈ ದಾರುಣ ಘಟನೆ ನಡೆದಿದ್ದು, ಬಾಲಕ ಕುಸಿದು ಸಾವನ್ನಪ್ಪಿದ ಕೊನೇ ಕ್ಷಣಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
VIDEO | In a shocking incident in #Pune, an 11-year-old boy died while playing cricket after a ball hit his private part.
The deceased has been identified as Shaurya Khadwe.
The incident happened in #Lohegaon on Thursday.https://t.co/0QTgGuCC6Kpic.twitter.com/7F7vB3On6E
— Free Press Journal (@fpjindia)
VIDEO | In a shocking incident in #Pune, an 11-year-old boy died while playing cricket after a ball hit his private part.
The deceased has been identified as Shaurya Khadwe.
The incident happened in #Lohegaon on Thursday.https://t.co/0QTgGuCC6Kpic.twitter.com/7F7vB3On6E— Free Press Journal (@fpjindia) May 6, 2024
">May 6, 2024
ಶೌರ್ಯ ಕ್ರಿಕೆಟ್ ಆಡುತ್ತಿದ್ದಾಗ ಬಾಲು ಖಾಸಗಿ ಅಂಗಕ್ಕೆ ಬಿದ್ದಿದ್ದು ಕೂಡಲೇ ಕುಸಿದು ಬಿದ್ದಿದ್ದಾನೆ. ಬಾಲಕನ ಸ್ನೇಹಿತರು ಶೌರ್ಯನ ಸಹಾಯಕ್ಕೆ ಧಾವಿಸಿ, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರು ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಬಾಲಕನ ಆಕಸ್ಮಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
11 ವರ್ಷದ ಶೌರ್ಯ ಕ್ರಿಕೆಟ್‌ನಲ್ಲಿ ಕಠಿಣ ಅಭ್ಯಾಸ ಮಾಡಿ ಒಳ್ಳೆ ಕ್ರಿಕೆಟರ್ ಆಗುವ ಕನಸು ಕಂಡಿದ್ದ. ಆದರೆ ಆಕಸ್ಮಿಕವಾಗಿ ಸಂಭವಿಸಿದ ಘಟನೆಯಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us