ಅರಿಶಿನಕ್ಕೂ ಬಂತು ಕೇಡುಗಾಲ ! ಹಳದಿ ಪದಾರ್ಥದಲ್ಲಿದೆ ಹೃದಯಕ್ಕೆ ಮಾರಕವಾಗುವ ಅಂಶ!

author-image
Gopal Kulkarni
Updated On
ಅರಿಶಿನಕ್ಕೂ ಬಂತು ಕೇಡುಗಾಲ ! ಹಳದಿ ಪದಾರ್ಥದಲ್ಲಿದೆ ಹೃದಯಕ್ಕೆ ಮಾರಕವಾಗುವ ಅಂಶ!
Advertisment
  • ಹಲವು ರೋಗಗಳಿಗೆ ರಾಮಬಾಣವಾಗಿದ್ದ ಅರಿಶಿನದಲ್ಲಿಯೇ ಇದೆ ವಿಷ
  • ಅರಿಶಿನ ಬಳಕೆಯಿಂದ ಬರಲಿವೆ ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆ
  • ನೆದರ್ಲೆಂಡ್ಸ್ ಸೈನ್ಸ್​ ಜರ್ನಲ್ ನಡೆಸಿರುವ ಅಧ್ಯಯನದಲ್ಲಿ ಇರುವುದು ಏನು?

ಅರಿಶಿನ ನಮ್ಮ ದೇಶದ ಮನೆ ಮನೆಯಲ್ಲೂ ಮಸಾಲೆ ಡಬ್ಬದಲ್ಲಿ ಇರುವ ಒಂದು ಪದಾರ್ಥ. ಮದುವೆಯಲ್ಲಿ ಅರಿಶಿನ ಶಾಸ್ತ್ರದಿಂದ ಹಿಡಿದು ಮನೆಯಲ್ಲಿ ಪ್ರತಿ ಅಡುಗೆಯಲ್ಲೂ ಇದನ್ನು ಬಳಕೆ ಮಾಡುತ್ತೇವೆ. ಹಲವು ಕಾಯಿಲೆಗಳಿಗೆ ಇದನ್ನು ರಾಮಬಾಣ ಎಂದೇ ಕರೆಯುತ್ತೇವೆ. ಆಯುರ್ವೇದದಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ಸಹಸ್ರ ಸಹಸ್ರ ವರ್ಷಗಳಿಂದ ಭಾರತೀಯರ ಜೀವನದ ಒಂದು ಭಾಗವಾಗಿರುವ ಈ ಹಳದಿ ಪದಾರ್ಥವೂ ಈಗ ವಿಷವಾಗಿ ಹೋಗಿದೆ ಎನ್ನುತ್ತಿದೆ ಒಂದು ವರದಿ.

ಭಾರತದಲ್ಲಿ ಅರಿಶಿನ ಬಳಕೆಯಿಂದಾಗಿಯೇ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ನೆದರ್ಲೆಂಡ್ಸ್​ ಸೈನ್ಸ್ ಜರ್ನಲ್ ನಡೆಸಿರುವ ಅಧ್ಯಯನದ ವರದಿಯಲ್ಲಿ ಬಯಲಾಗಿದೆ. ಅರಿಷಿನ ಪುಡಿಯಲ್ಲಿ ಲೆಡ್ ಪದಾರ್ಥ ಹೇರಳವಾಗಿ ಪತ್ತೆಯಾಗಿದೆ. ಒಂದು ಗ್ರಾಂ ಅರಿಶಿನದಲ್ಲಿ 10 ಮೈಕ್ರೋ ಗ್ರಾಂ ಲೆಡ್​ ಇರಬೇಕು.ಆದರೆ ಭಾರತದ ಅರಿಶಿನದಲ್ಲಿ ಸುಮಾರು 127 ಮೈಕ್ರೊ ಗ್ರಾಂ ಲೆಡ್ ಪತ್ತೆಯಾಗಿದೆ.

ಇದನ್ನೂ ಓದಿ:Clove water; ಲವಂಗ ನೀರಿನಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗ.. ಚಳಿಗಾಲದಲ್ಲಿ ಹೀಗೆ ಮಾಡಿ!

ಪಟ್ನಾದ ಹಲವು ಭಾಗದಲ್ಲಿ ಸಂಗ್ರಹಿಸಿರುವ ಸ್ಯಾಂಪಲ್​ನಲ್ಲಂತೂ 200 ಮೈಕ್ರೋ ಗ್ರಾಂ ಲೆಡ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಈ ಒಂದು ಲೆಡ್​​ ಸೇವನೆಯಿಂದ ಪ್ರತಿ ವರ್ಷ ವಿಶ್ವದಲ್ಲಿ 55 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವದ 80 ಕೋಟಿ ಜನರು ಈ ಲೆಡ್​ ಸೇವನೆಯಿಂದಾಗುವ ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಭಾರತ ಒಂದರಲ್ಲಿಯೇ 28 ಕೋಟಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳ್​ನಲ್ಲಿ ಸ್ಯಾಂಪಲ್​​ಗಳನ್ನ ಕಲೆ ಹಾಕಲಾಗಿತ್ತು. ಭಾರತದಲ್ಲಿ ಪಾಟ್ನಾ, ಹರಿಯಾಣ, ಚಂಡಿಗಢ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಸ್ಯಾಂಪಲ್ ಸಂಗ್ರಹ ಮಾಡಿ ಅಧ್ಯಯನ ನಡೆಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment