ಮನೆಗೆ ತೆಗೆದುಕೊಂಡು ಹೋಗಬೇಕಾಗಿದ್ದ ಮೀನನ್ನು ತಿಂದ ಬೆಕ್ಕು! ಆಮೇಲೆ ಆಗಿದ್ದೇ ರೋಚಕ

author-image
Gopal Kulkarni
Updated On
ಮನೆಗೆ ತೆಗೆದುಕೊಂಡು ಹೋಗಬೇಕಾಗಿದ್ದ ಮೀನನ್ನು ತಿಂದ ಬೆಕ್ಕು! ಆಮೇಲೆ ಆಗಿದ್ದೇ ರೋಚಕ
Advertisment
  • ಬೈಕ್​ನಲ್ಲಿ ನೇತು ಹಾಕಿದ್ದ ಮೀನನ್ನು ತಿಂದ ಕಳ್ಳ ಬೆಕ್ಕು
  • ಬೆಕ್ಕಿನ ಕಳ್ಳತನ ಮೊಬೈಲ್​ನಲ್ಲಿ ವಿಡಿಯೋ ಮಾಡಿದ ವ್ಯಕ್ತಿ
  • ವಿಡಿಯೋ ಆಧಾರದ ಮೇಲೆ ದೂರು, ಪೊಲೀಸರು ಮಾಡಿದ್ದೇನು?

ತಪ್ಪು ಯಾರೇ ಮಾಡಿದ್ರು ತಪ್ಪೇ, ಅದಕ್ಕೆ ಶಿಕ್ಷೆ ಆಗಲೇಬೇಕು ಎನ್ನುವುದು ಕಾನೂನಿನ ಮೊದಲ ಪಾಠ. ಸಾಮಾಜಿಕವಾಗಿ ಬದುಕುವ ಮನುಷ್ಯ ಕುಲದಲ್ಲಿ ಅಪರಾಧಗಳು ಜರುಗುವುದು ಸಾಮಾನ್ಯ. ಹೀಗೆ ಅಪರಾಧ ಮಾಡಿದ ಮನುಷ್ಯರು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡುವುದು ಕೂಡ ಸಾಮಾನ್ಯ. ಆದ್ರೆ ತನ್ನದೇ ಮುಗ್ಧ ಜಗತ್ತಿನಲ್ಲಿ ಬದುಕುವ ಮೂಕ ಪ್ರಾಣಿಯೂ ಕೂಡ ಅರಿಯದೇ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿದೆ.


">December 17, 2024

ಥಾಯ್ಲೆಂಡ್​ನಲ್ಲೊಂದು ಇಂತಹ ವಿಚಿತ್ರ ಘಟನೆ ನಡೆದಿದೆ. ಥಾಯ್ಲೆಂಡ್​ನ ಪೊಲೀಸರು ಬೆಕ್ಕೊಂದನ್ನು ಬಂಧಿಸಿದ್ದಾರೆ. ಅದಕ್ಕೆ ಕಾರಣ ಅದು ತಿಂದ ಮೀನು. ವ್ಯಕ್ತಿಯೊಬ್ಬ ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡಿ ಕವರ್​ನಲ್ಲಿ ಹಾಕಿಟ್ಟು ಅದನ್ನು ಬೈಕ್​ನಲ್ಲಿ ನೇತು ಹಾಕಿದ್ದ. ಮೊದಲೇ ಕಳ್ಳಬೆಕ್ಕು. ಮೀನಿನ ವಾಸನೆ ಮೂಗಿಗೆ ತಾಗಿದಾಗ ಅದರ ಹೊಟ್ಟೆ ಎರಡಾದಂತಾಗಿದೆ. ಕೂಡಲೇ ಮೀನು ಇದ್ದ ಕಡೆ ಓಡಿ ಬಂದು ಮೀನನ್ನು ತೆಗೆದುಕೊಂಡು ಓಡಿ ಹೋಗಿ ತಿಂದು ಮುಗಿಸಿದೆ.

ಇದನ್ನೂ ಓದಿ: ₹287 ಕೋಟಿ ಗೆದ್ದ ರೈತನ ಬಾಳಲ್ಲಿ ವಿಧಿಯಾಟ.. ಒಂದೇ ವಾರದಲ್ಲಿ ದುರಂತ ಅಂತ್ಯ; ಅಸಲಿಗೆ ಆಗಿದ್ದೇನು?

ಇದರಿಂದ ರೊಚ್ಚಿಗೆದ್ದ ಮೀನು ಖರೀದಿ ಮಾಡಿದ ವ್ಯಕ್ತಿ , ಬೆಕ್ಕು ಮೀನು ತೆಗೆದುಕೊಂಡು ಹೋಗುವುದನ್ನು ವಿಡಿಯೋ ಮಾಡಿಕೊಂಡು, ವಿಡಿಯೋ ಆಧಾರದ ಮೇಲೆ ಬೆಕ್ಕಿನ ವಿರುದ್ಧ ಪ್ರಕರಣದ ದಾಖಲಿಸಿದ್ದಾರೆ. ದೂರಿನನ್ವಯ ಥಾಯ್ಲೆಂಡ್ ಪೊಲೀಸರು ಬೆಕ್ಕನ್ನು ಬಂಧಿಸಿ ಸೆರೆಮನೆಗೆ ಅಟ್ಟಿದ್ದಾರೆ. ಸದ್ಯ ಬೆಕ್ಕು ಮೀನು ತಿಂದಿದ್ದು ಹಾಗೂ ಅದನ್ನು ಪೊಲೀಸರು ಅರೆಸ್ಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment